Duleep Trophy Final: ಹನುಮ ವಿಹಾರಿ ಹೋರಾಟದ ನಡುವೆಯೂ ಮೊದಲ ದಿನ ದಕ್ಷಿಣ ವಲಯಕ್ಕೆ ಹಿನ್ನಡೆ..!

Published : Jul 13, 2023, 09:58 AM IST
 Duleep Trophy Final: ಹನುಮ ವಿಹಾರಿ ಹೋರಾಟದ ನಡುವೆಯೂ ಮೊದಲ ದಿನ ದಕ್ಷಿಣ ವಲಯಕ್ಕೆ ಹಿನ್ನಡೆ..!

ಸಾರಾಂಶ

* ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ದಕ್ಷಿಣ ವಲಯ * ಮೊದಲ ದಿನದಾಟದಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿದ ದಕ್ಷಿಣ ವಲಯ * ಸಮಯೋಚಿತ ಅರ್ಧಶತಕ ಸಿಡಿಸಿದ ನಾಯಕ ಹನುಮ ವಿಹಾರಿ

ಬೆಂಗಳೂರು(ಜು.13): ನಾಯಕ ಹನುಮ ವಿಹಾರಿ ಹೋರಾಟದ ಅರ್ಧಶತಕದ ಹೊರತಾಗಿಯೂ ದುಲೀಪ್‌ ಟ್ರೋಫಿ ಫೈನಲ್‌ನಲ್ಲಿ ದಕ್ಷಿಣ ವಲಯ ಮೊದಲ ದಿನ ಪಶ್ಚಿಮ ವಲಯದ ವಿರುದ್ಧ ಹಿನ್ನಡೆ ಅನುಭವಿಸಿದೆ. ಮಳೆ ಅಡ್ಡಿಪಡಿಸಿದ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ವಲಯ 65 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 182 ರನ್‌ ಕಲೆ ಹಾಕಿದೆ.

ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಗೆದ್ದ ಪಶ್ಚಿಮ ವಲಯ ನಾಯಕ ಪ್ರಿಯಾಂಕ್‌ ಪಾಂಚಾಲ್‌, ದಕ್ಷಿಣ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಆದರೆ ತಂಡದ ಮೊತ್ತ 15 ರನ್‌ ಆಗುವಷ್ಟರಲ್ಲೇ ಕನ್ನಡಿಗ ಆರ್‌.ಸಮರ್ಥ್‌(07) ವಿಕೆಟ್‌ ಕಳೆದುಕೊಂಡ ದಕ್ಷಿಣ ಆರಂಭಿಕ ಹಿನ್ನಡೆ ಅನುಭವಿಸಿತು. ಬಳಿಕ ಉಪನಾಯಕ ಮಯಾಂಕ್‌ ಅಗರ್‌ವಾಲ್‌(28) ಕೂಡಾ ಪೆವಿಲಿಯನ್‌ಗೆ ಮರಳಿದರು. ಆದರೆ ತಿಲಕ್‌ ವರ್ಮಾ(40) ಹಾಗೂ ವಿಹಾರಿ ತಂಡವನ್ನು ಮೇಲೆತ್ತಿದರು. 

ತಿಲಕ್‌ ವರ್ಮಾಗೆ ನಾಗವಸ್ವಲ್ಲಾ ಪೆವಿಲಿಯನ್‌ ಹಾದಿ ತೋರಿಸಿದರೆ, 63 ರನ್‌ ಗಳಿಸಿ ತಂಡಕ್ಕೆ ಆಸರೆಯಾಗಿದ್ದ ವಿಹಾರಿಯನ್ನು ಸ್ಪಿನ್ನರ್‌ ಶಮ್ಸ್‌ ಮುಲಾನಿ ಔಟ್‌ ಮಾಡಿದರು. 121ಕ್ಕೆ 2 ವಿಕೆಟ್‌ ಕಳೆದುಕೊಂಡ ತಂಡ ಬಳಿಕ ದಿಢೀರ್‌ ಕುಸಿತ ಕಂಡಿತು. ಸದ್ಯ ವಾಷಿಂಗ್ಟನ್‌ ಸುಂದರ್‌(09), ವೈಶಾಕ್‌(05) 2ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ. ಅರ್ಜನ್‌ ನಾಗವಸ್ವಲ್ಲಾ, ಚಿಂತನ್‌ ಗಾಜಾ ಹಾಗೂ ಮುಲಾನಿ ತಲಾ 2 ವಿಕೆಟ್‌ ಕಿತ್ತರು.

ಏಕದಿನ ಕ್ರಿಕೆಟ್‌ ಬಹುತೇಕ ಸ್ಥಗಿತಕ್ಕೆ ತಜ್ಞರ ಸಲಹೆ..! ಯಾಕೆ ಹೀಗೆ?

ಸ್ಕೋರ್‌: ದಕ್ಷಿಣ ವಲಯ(ಮೊದಲ ದಿನದಂತ್ಯಕ್ಕೆ) 65 ಓವರಲ್ಲಿ 182/7 (ವಿಹಾರಿ 63, ತಿಲಕ್‌ 40, ಮುಲಾನಿ 2-19)

ಲಂಕಾ ಸ್ಪಿನ್ನರ್‌ ಹಸರಂಗ ಐಸಿಸಿ ತಿಂಗಳ ಆಟಗಾರ

ದುಬೈ: ಶ್ರೀಲಂಕಾದ ಸ್ಪಿನ್ನರ್‌ ವನಿಂದು ಹಸರಂಗ ಹಾಗೂ ಆಸ್ಟ್ರೇಲಿಯಾದ ಆಲ್ರೌಂಡರ್‌ ಆ್ಯಶ್ಲೆ ಗಾರ್ಡ್ನರ್‌ ಕ್ರಮವಾಗಿ ಐಸಿಸಿ ಜೂನ್‌ ತಿಂಗಳ ಆಟಗಾರ ಹಾಗೂ ಆಟಗಾರ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಿಂಬಾಬ್ವೆಯಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್‌ ಅರ್ಹತಾ ಸುತ್ತಿನಲ್ಲಿ ಹಸರಂಗ ಅಭೂತಪೂರ್ವ ಪ್ರದರ್ಶನ ತೋರಿ, ಲಂಕಾವನ್ನು ವಿಶ್ವಕಪ್‌ನ ಪ್ರಧಾನ ಸುತ್ತಿಗೇರಿಸಲು ಪ್ರಮುಖ ಪಾತ್ರ ವಹಿಸಿದ್ದರು.

ರಿಟೈರ್ಡ್‌​ ಆಗಿ 3 ವರ್ಷವಾದ್ರೂ ಕಮ್ಮಿಯಾಗಿಲ್ಲ ಧೋನಿ ಬ್ರ್ಯಾಂಡ್​ ವ್ಯಾಲ್ಯೂ..! ಮಹಿ ಸಾವಿರ ಕೋಟಿ ಒಡೆಯ.!

ಅವರು ಆಸ್ಟ್ರೇಲಿಯಾದ ಟ್ರ್ಯಾವಿಸ್‌ ಹೆಡ್‌, ಜಿಂಬಾಬ್ವೆಯ ಶಾನ್‌ ವಿಲಿಯಮ್ಸ್‌ರನ್ನು ಹಿಂದಿಕ್ಕಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನು, ಗಾರ್ಡ್‌ನರ್‌ ಇಂಗ್ಲೆಂಡ್‌ನ ಟಾಮಿ ಬ್ಯೂಮೊಂಟ್‌ ಹಾಗೂ ವಿಂಡೀಸ್‌ನ ಹೇಲಿ ಮ್ಯಾಥ್ಯೂಸ್‌ರನ್ನು ಹಿಂದಿಕ್ಕಿ ಪ್ರಶಸ್ತಿ ಗೆದ್ದಿದ್ದಾರೆ.

ಟೆಸ್ಟ್‌ ರ‍್ಯಾಂಕಿಂಗ್‌: ನಂ.2 ಸ್ಥಾನಕ್ಕೆ ಜಿಗಿದ ಹೆಡ್‌

ದುಬೈ: ಆಸ್ಟ್ರೇಲಿಯಾದ ತಾರಾ ಬ್ಯಾಟರ್‌ ಟ್ರ್ಯಾವಿಸ್‌ ಹೆಡ್‌ ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಹೆಡ್‌ 2 ಸ್ಥಾನ ಮೇಲೇರಿ 874 ಅಂಕಗಳನ್ನು ಸಂಪಾದಿಸಿದ್ದಾರೆ.

ಅಶ್ವಿನ್ ದಾಳಿಗೆ ವಿಂಡೀಸ್ ಧೂಳೀಪಟ; ಬ್ಯಾಟಿಂಗ್‌ನಲ್ಲಿ ರೋಹಿತ್-ಯಶಸ್ವಿ ಶೈನಿಂಗ್..!

ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್‌ 883 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ರಿಷಭ್‌ ಪಂತ್‌ 10 ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇದೇ ವೇಳೆ ಬೌಲರ್‌ಗಳ ಪಟ್ಟಿಯಲ್ಲಿ ಆರ್‌.ಅಶ್ವಿನ್‌, ಆಲ್ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ಅಶ್ವಿನ್‌ ಆಲ್ರೌಂಡ್‌ ವಿಭಾಗದಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ವನಿತಾ ಟಿ20: ಭಾರತಕ್ಕೆ ಕ್ಲೀನ್‌ಸ್ವೀಪ್‌ ಸಾಧನೆ ಗುರಿ

ಢಾಕಾ: ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ತುಂಬು ಉತ್ಸಾಹದಲ್ಲಿರುವ ಭಾರತ ಮಹಿಳಾ ತಂಡ ಗುರುವಾರ ಬಾಂಗ್ಲಾದೇಶ ವಿರುದ್ಧ 3ನೇ ಹಾಗೂ ಕೊನೆ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಸರಣಿ ಕ್ಲೀನ್‌ಸ್ವೀಪ್‌ ಸಾಧಿಸುವ ನಿರೀಕ್ಷೆಯಲ್ಲಿದೆ. ಆರಂಭಿಕ ಪಂದ್ಯದಲ್ಲಿ ಆಲ್ರೌಂಡ್‌ ಪ್ರದರ್ಶನ ತೋರಿ 7 ವಿಕೆಟ್‌ ಜಯಗಳಿಸಿದ್ದ ಭಾರತ, 2ನೇ ಪಂದ್ಯದಲ್ಲಿ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗಿತ್ತು. ಆದರೆ ಬೌಲರ್‌ಗಳ ಸಾಹಸದಿಂದಾಗಿ ಪಂದ್ಯ ಗೆಲ್ಲಲು ಯಶಸ್ವಿಯಾಗಿತ್ತು. ಹೀಗಾಗಿ 3ನೇ ಪಂದ್ಯದಲ್ಲಿ ಬ್ಯಾಟಿಂಗ್‌ ಸಮಸ್ಯೆಯನ್ನು ಪರಿಹರಿಸುವುದರ ಜೊತೆಗೆ, ಬೌಲಿಂಗ್‌ ವಿಭಾಗದಲ್ಲಿ ಸುಧಾರಿತ ಪ್ರದರ್ಶನ ನೀಡಲು ಭಾರತ ಕಾಯುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?