DRS ಅಂದ್ರೆ ಧೋನಿ ರಿವ್ಯೂವ್ ಸಿಸ್ಟಮ್, MI ವಿರುದ್ಧ ಕ್ಯಾಪ್ಟನ್ ಕೂಲ್ ನಿರ್ಧಾರಕ್ಕೆ ಮೆಚ್ಚುಗೆಯ ಸುರಿಮಳೆ!

By Suvarna NewsFirst Published Apr 8, 2023, 10:15 PM IST
Highlights

ಧೋನಿ ಡಿಆರ್‌ಎಸ್‌ಗೆ ಅಪೀಲ್ ಮಾಡಿದರೆ, ಬ್ಯಾಟ್ಸ್‌ಮನ್ ತೀರ್ಪಿಗಾಗಿ ಕಾಯಬೇಕಿಲ್ಲ. ಬ್ಯಾಟ್ಸಮನ್ ಪೆವಿಲಿಯನ್ ಸೇರಿಕೊಳ್ಳುವುದು ಉತ್ತಮ. ಕಾರಣ ಮತ್ತೆ ಡಿಆರ್‌ಎಸ್ ಅಂದರೆ ಧೋನಿ ರಿವ್ಯೂವ್ ಸಿಸ್ಟಮ್ ಎಂಬುದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲೂ ಸಾಬೀತಾಗಿದೆ.

ಮುಂಬೈ(ಏ.08): ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ ಪಂದ್ಯವನ್ನು ಗ್ರಹಿಸುವ, ಅಗತ್ಯಕ್ಕೆ ತಕ್ಕಂತೆ ಪ್ಲಾನ್ ಬದಲಾಯಿಸುವ ನಿಷ್ಣಾತ. ಹೀಗಾಗಿ ಐಸಿಸಿಯ ಎಲ್ಲಾ ಟ್ರೋಫಿ, ಐಪಿಎಲ್ ಟ್ರೋಫಿ ಸೇರಿದಂತೆ ಹಲವು ಟ್ರೋಫಿಗಳು ಧೋನಿ ಹೆಸರಿನಲ್ಲಿದೆ. ಮೈದಾನದಲ್ಲಿ ಧೋನಿ ತೆಗೆದುಕೊಳ್ಳುವ ಒಂದೊಂದು ನಿರ್ಧಾರ ಕೂಡ ಅಧ್ಯಯನ ವಿಷಯವೇ. ಇನ್ನು ಡಿಆರ್‌ಎಸ್ ವಿಚಾರದಲ್ಲಿ ಧೋನಿ ತೆಗೆದುಕೊಳ್ಳುವ ನಿರ್ಧಾರ ಶೇಕಡಾ 100 ರಷ್ಟು ಪಕ್ಕಾ. ಕಣ್ಣು ಮಿಟುಕಿಸುವುದಕ್ಕಿಂತಲೂ ವೇಗವಾಗಿ ಧೋನಿ ಗ್ರಹಿಸುತ್ತಾರೆ. ಇದೀಗ ಮುಂಬೈ ಇಂಡಿಯನ್ಸ್ ವಿರುದ್ದದ ಪಂದ್ಯದಲ್ಲೂ ಧೋನಿ ಡಿಆರ್‌ಎಸ್ ನಿರ್ಧಾರ ಮತ್ತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಅಂಪೈರ್ ವೈಡ್ ತೀರ್ಪು ನೀಡಿದ್ದರು. ಆದರೆ ಧೋನಿ ಡಿಆರ್‌ಎಸ್ ಪಡೆದುಕೊಂಡರು. ಯಾರಿಗೂ ಅರ್ಥವಾಗಿಲ್ಲ. ಆದರೆ ಡಿಆರ್‌ಎಸ್ ತೀರ್ಪು ಔಟ್ ಎಂದು ಬಂದಿದೆ. ಇತ್ತ ಸೂರ್ಯಕುಮಾರ್ ಯಾದವ್ ಪೆವಿಲಿಯನ್ ಸೇರಿಕೊಂಡರು.

ಮಿಚೆಲ್ ಸ್ಯಾಂಟ್ನರ್ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಲೆಗ್‌ಸೈಡ್ ಸ್ವೀಪ್ ಮಾಡಿದ್ದಾರೆ.ಎಸೆತ ಲೈಗ್ ಸೈಡ್ ವೈಡ್ ರೀತಿಯಲ್ಲೇ ಇತ್ತು. ಇತ್ತ ಬೌಲರ್ ಮಿಚೆಲ್ ಸ್ಯಾಂಟ್ನರ್ ಅಪೀಲ್ ಮಾಡಿಲ್ಲ. ತಂಡದ ಯಾರಿಂದಲೂ ಅಪೀಲ್ ಇಲ್ಲ. ಇತ್ತ ಅಂಪೈರ್ ಕೂಡ ಸುಮ್ಮನಾಗಿದ್ದಾರೆ. ಆದರೆ ಧೋನಿ ಮಾತ್ರ ಬಿಡಲಿಲ್ಲ. ಒಂದು ಕ್ಷಣ ಯೋಚಿಸಿದ ಡಿಆರ್‌ಎಸ್‌ಗೆ ಅಪೀಲ್ ಮಾಡಿದ್ದಾರೆ. 

IPL ನಿಂದ ಅತಿಹೆಚ್ಚು ಸಂಪಾದನೆ ಮಾಡಿದ ಟಾಪ್ 5 ಭಾರತೀಯ ಕ್ರಿಕೆಟಿಗರಿವರು..!

3ನೇ ಅಂಪೈರ್ ರಿವ್ಯೂವ್ ಪರಿಶೀಲಿಸಿದ್ದಾರೆ. ಬಳಿಕ ಔಟ್ ಎಂದು ತೀರ್ಪು ನೀಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಯಾರಿಗೂ ಊಹಿಸಲು ಸಾಧ್ಯವಾಗದ್ದನ್ನು ಧೋನಿ ಗ್ರಹಿಸಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಿಂದ ಧೋನಿ ಧೋನಿ ಕೂಗು ಜೋರಾಗಿದೆ. ಇತ್ತ ಸಾಮಾಜಿಕ ಜಾಲತಾಣದಲ್ಲಿ  ಡಿಆರ್‌ಎಸ್ ಅಂದರೆ ಧೋನಿ ರಿವ್ಯೂವ್ ಸಿಸ್ಟಮ್ ಎಂದು ಟ್ರೆಂಡ್ ಮಾಡಿದ್ದಾರೆ. ಧೋನಿ ಡಿಆರ್‌ಎಸ್ ಅಪೀಲ್ ಮಾಡಿದರೆ, ಬ್ಯಾಟ್ಸ್‌ಮನ್ ತೀರ್ಪಿಗಾಗಿ ಕಾಯಬೇಕಿಲ್ಲ, ಪೆವಿಲಿಯನ್ ಸೇರಿಕೊಳ್ಳುವುದು ಉತ್ತಮ ಎಂದು ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

 

DRS:- Dhoni Review System
Dhoni Dhoni Chants 🔥🔥🔥pic.twitter.com/HlaIv2mexr

— Mahe(sh)ndra's Fan Boy™ (@Callme_Lakesh_G)

 

ಧೋನಿ ತೆಗೆದುಕೊಂಡ ಬಹುತೇಕ ಡಿಆರ್‌ಎಸ್ ನಿರ್ಧಾರ ಸರಿಯಾಗಿದೆ. ಇದು ಪಂದ್ಯದ ಗತಿಯನ್ನೇ ಬದಲಿಸಿದೆ. ಧೋನಿ ನಿರ್ಧಾರದಿಂದ ಗೆಲುವಿನ ಸಿಹಿಯೂ ಕಂಡಿದೆ. ಇದೀಗ ಮತ್ತೆ ಧೋನಿ ಡಿಆರ್‌ಎಸ್‌ನಲ್ಲಿ ಮತ್ತೆ ಚಾಂಪಿಯನ್ ಎಂದು ಸಾಬೀತುಪಡಿಸಿದ್ದಾರೆ.

ಬೌಲರ್ಸ್‌ಗೆ ವಾರ್ನಿಂಗ್ ಕೊಟ್ಟ ಧೋನಿ! ಸುಧಾರಿಸಿಕೊಳ್ಳಿ ಇಲ್ಲವೇ ಬೇರೆ ನಾಯಕನಡಿ ಆಡಲು ರೆಡಿಯಾಗಿ ಅಂದಿದ್ದೇಕೆ ಮಹಿ..?

ಧೋನಿಗೆ ಸನ್ಮಾನ: 2011ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಭಾರ​ತದ ಗೆಲು​ವಿನ ಸಿಕ್ಸರ್‌ ಬಾರಿ​ಸಿದ್ದ ಎಂ.ಎ​ಸ್‌.​ಧೋ​ನಿ​ಯನ್ನು ಮುಂಬೈ ಕ್ರಿಕೆಟ್‌ ಸಂಸ್ಥೆ(ಎಂಸಿ​ಎ)ಯು ವಾಂಖೇಡೆ ಕ್ರೀಡಾಂಗ​ಣ​ದಲ್ಲಿ ಸನ್ಮಾ​ನಿ​ಸಿ​ತು. ಸಿಕ್ಸರ್‌ ಬಾರಿ​ಸುವ ಚಿತ್ರ​ವಿ​ರುವ ಫ್ರೇಮ್‌ ನೀಡಿ ಸಂಸ್ಥೆಯ ಅಧಿ​ಕಾ​ರಿ​ಗಳು ಗೌರ​ವಿ​ಸಿ​ದ​ರು. ಗೆಲು​ವಿನ ಸಿಕ್ಸರ್‌ ಬಾರಿಸಿದ ವೇಳೆ ಚೆಂಡು ಬಿದ್ದ ಸ್ಥಳ​ದಲ್ಲಿ 5 ಆಸ​ನ​ಗ​ಳನ್ನು ಎಂಸಿಎ ಗುರು​ತಿ​ಸಿದ್ದು, ಆ ಸ್ಥಳ​ದಲ್ಲಿ ನಿರ್ಮಾ​ಣ​ವಾ​ಗ​ಲಿ​ರುವ ಸ್ಮಾರ​ಕವನ್ನು ಧೋನಿ ವೀಕ್ಷಿಸಿದರು.

click me!