4 ದಿನಗಳ ಟೆಸ್ಟ್‌ಗೆ ವಿರೇಂದ್ರ ಸೆಹ್ವಾಗ್ ವಿರೋಧ!

By Suvarna NewsFirst Published Jan 14, 2020, 4:32 PM IST
Highlights

4 ದಿನಗಳ ಟೆಸ್ಟ್ ಪಂದ್ಯದ ಆಯೋಜನೆ ಕುರಿತಂತೆ ಐಸಿಸಿ ಪ್ರಸ್ತಾಪನೆಯನ್ನು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ತಿಳಿ ಹಾಸ್ಯದ ಮೂಲಕ ವಿರೋಧಿಸಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ... 

ಮುಂಬೈ(ಜ.14): ಟೆಸ್ಟ್ ಕ್ರಿಕೆಟನ್ನು 5 ದಿನಗಳಿಂದ 4 ದಿನಗಳಿಗೆ ಇಳಿಸಿದರೆ ಮೀನನ್ನು ನೀರಿನಿಂದ ಹೊರ ತೆಗೆದಂತೆ ಎಂದು ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ. 

ಕೊಹ್ಲಿ, ಅಖ್ತರ್ ಬಳಿಕ ಸಚಿನ್‌ರಿಂದಲೂ 4 ದಿನಗಳ ಟೆಸ್ಟ್ ಪಂದ್ಯಕ್ಕೆ ವಿರೋಧ

ಭಾನುವಾರ ಸಂಜೆ ಇಲ್ಲಿ ನಡೆದ 7ನೇ ಪಟೌಡಿ ಉಪನ್ಯಾಸದಲ್ಲಿ ಟೆಸ್ಟ್ ಕ್ರಿಕೆಟ್ ಅನ್ನು 4 ದಿನಗಳಿಗೆ ಇಳಿಸುವ ಐಸಿಸಿ ಪ್ರಸ್ತಾಪವನ್ನು ಸೆಹ್ವಾಗ್ ವಿರೋಧಿಸಿ ದರು. ‘ಡೈಪರ್ ಹಾಗೂ ಟೆಸ್ಟ್ ಕ್ರಿಕೆಟ್ ಎರಡೂ ಮಣ್ಣಾದ ಮೇಲೆ ಬದಲಿಸಬೇಕು’ ಎನ್ನುವ ಮೂಲಕ ನೆರೆದಿದ್ದ ಹಾಲಿ, ಮಾಜಿ ಕ್ರಿಕೆಟಿಗರನ್ನು ನಗಿಸಿದರು. 'ಚಂದ್ರ ನಾಲ್ಕು ದಿನ ಇರುತ್ತಾನೆ. ಆದರೆ ಟೆಸ್ಟ್ ಕ್ರಿಕೆಟ್ ಅಲ್ಲ. ಮೀನು ನೀರಿನಲ್ಲಿದ್ದರೆ ಚೆನ್ನಾಗಿ ರುತ್ತದೆ. ಆಚೆ ತೆಗೆದರೆ ಸತ್ತು ಹೋಗುತ್ತದೆ’ ಎಂದು ಸೆಹ್ವಾಗ್ ತಮ್ಮದೇ ಶೈಲಿಯಲ್ಲಿ ಐಸಿಸಿ ಪ್ರಸ್ತಾಪವನ್ನು ವಿರೋಧಿಸಿದರು.

ಕಿವೀಸ್ ಪ್ರವಾಸಕ್ಕೆ ಸಂಜುಗೆ ಗೇಟ್‌ಪಾಸ್, ಕಿಡಿಕಾರಿದ ಫ್ಯಾನ್ಸ್..!

ನಾನು ಬದಲಾವಣೆಯನ್ನು ಯಾವಾಗಲೂ ಸ್ವಾಗತಿಸುತ್ತೇನೆ. 5 ದಿನಗಳ ಟೆಸ್ಟ್ ಕ್ರಿಕೆಟ್ ಒಂದು ರೊಮ್ಯಾನ್ಸ್ ಇದ್ದಂತೆ. ಬೌಲರ್'ಗಳು ತಮಗೆ ಬೇಕಾದಂತೆ ಫೀಲ್ಡಿಂಗ್ ಸೆಟ್ ಮಾಡಿಕೊಂಡು ವಿಕೆಟ್ ಪಡೆಯಲು ಯತ್ನಿಸುತ್ತಾರೆ. ಬ್ಯಾಟ್ಸ್'ಮನ್'ಗಳು ಇನಿಂಗ್ಸ್ ಕಟ್ಟುವುದರ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಲು ಯತ್ನಿಸುತ್ತಾರೆ. ಇನ್ನು ಸ್ಲಿಪ್'ನಲ್ಲಿರುವ ಫೀಲ್ಡರ್'ಗಳು ಕ್ಯಾಚ್  ಹಿಡಿದಾಗ  ದೀರ್ಘ ಕಾಯುವಿಕೆಯ ಬಳಿಕ ಪ್ರೇಮಿ ಎಸ್ ಎನ್ನುವಂತೆ ಎಂದು ಸಾಂಪ್ರಾದಾಯಿಕ ಕ್ರಿಕೆಟ್ ಅನ್ನು ಬಣ್ಣಿಸಿದ್ದಾರೆ.

click me!