ಕ್ರಿಕೆಟಿನಿಂದಲೇ ಕಣ್ಣು ಕಳೆದುಕೊಂಡವನು ಅಂಧರ ಕ್ರಿಕೆಟ್ ತಂಡದ ಕ್ಯಾಪ್ಟನ್!

By Suvarna NewsFirst Published Jan 14, 2020, 3:38 PM IST
Highlights

ಕಳೆದ ಡಿಸೆಂಬರ್‌ನಲ್ಲಿ ಒಂದು ವಿಶಿಷ್ಟ ಪಂದ್ಯಕೂಟ ನಡೆಯಿತು. ಅದು ಅಂಧರ ಕ್ರಿಕೆಟ್ ಭಾರತ- ನೇಪಾಳ ತಂಡಗಳ ಒನ್ ಡೇ ಸೀರೀಸ್. ಈ ಪಂದ್ಯಗಳಲ್ಲಿ ಮೂರು ಆಟಗಳನ್ನೂ ಭಾರತದ ಕ್ರಿಕೆಟ್ ತಂಡ ಗೆದ್ದುಕೊಂಡಿತು. ಈ ತಂಡದ ಕ್ಯಾಪ್ಟನ್ ಆಗಿದ್ದವರು ಕನ್ನಡಿಗ ಸುನೀಲ್ ರಮೇಶ್ ಕುಮಾರ್. ಅವರ ಕತೆ ತುಂಬ ಸ್ಫೂರ್ತಿದಾಯಕವಾಗಿದೆ.

ಕರ್ನಾಟಕದ ಗುಡ್ಡದೂರು ಎಂಬ ಪುಟ್ಟ ಗ್ರಾಮದಲ್ಲಿ 1998ರಲ್ಲಿ ಜನಿಸಿದವರು ಸುನೀಲ್ ರಮೇಶ್ ಕುಮಾರ್. ಅವರ ತಂದೆ ಕೂಲಿ ಕಾರ್ಮಿಕ. ಮನೆಯ ಮಾಡು ತೂತುಬಿದ್ದು ಸೋರುತ್ತಿತ್ತು. ಮನೆಯ ಸಂದುಗೊಂದುಗಳಲ್ಲಿ ಹೆಗ್ಗಣಗಳು ನುಸುಳಿ ಬರುತ್ತಿದ್ದವು. ಅಷ್ಟೂ ಅದು ಶಿಥಿಲವಾಗಿತ್ತು. ಮನೆಯನ್ನು ಸುಸ್ಥಿತಿಯಲ್ಲಿಡುವಷ್ಟು ಸಂಪಾದನೆ ಸುನಿಲ್ ತಂದೆಗೆ ಇರಲಿಲ್ಲ. ಗಂಜಿ ತಿಳಿ ಕುಡಿದು ಬದುಕಿರಬೇಕಾದ ಸನ್ನಿವೇಶ ಕೆಲವೊಮ್ಮೆ ಇರುತ್ತಿತ್ತು. 

ಆದರೆ ಅವನ ಹೃದಯದಲ್ಲಿ ಅಪಾರವಾಗಿ ಇದ್ದುದು ಕ್ರಿಕೆಟ್ ಕಡೆಗಿನ ಪ್ರೀತಿ. ಈ ಪ್ರೀತಿಗೆ ಸುನಿಲ್ ಹೆತ್ತವರೂ ಆಕ್ಷೇಪಿಸಲಿಲ್ಲ. ಪ್ರೋತ್ಸಾಹಿಸಿದರು. ಅದೇ ಪ್ರೋತ್ಸಹವೇ ಅವರನ್ನು ಮುಂದಕ್ಕೆ ಕರೆದೋಯಿತು. ಪ್ರತಿನಿತ್ಯ ಕ್ರಿಕೆಟ್ ಆಡುವುದನ್ನು ಅವರು ತಪ್ಪಿಸುತ್ತಿರಲಿಲ್ಲ. ಆದರೆ, 2005ರಲ್ಲಿ ಒಮ್ಮೆ, ಅವರಿಗೆ 7 ವರ್ಷ ನಡೆಯುತ್ತಿದ್ದಾಗ ಒಂದು ಅನಾಹುತ ಸಂಭವಿಸಿತು.

ಗರ್ಭಪಾತವಾದ ನೋವು ಎದುರಿಸಿದ ನಟಿಯರಿವರು

ಅವರು ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದರು. ಚೆಂಡು ಎಲ್ಲಿಗೋ ಹೋಯಿತು. ಅದನ್ನು ಹಿಡಿಯಲೆಂದು ಕೀಪಿಂಗ್ ಮಾಡುತ್ತಿದ್ದ ಸುನಿಲ್ ಧಾವಿಸಿದರು. ಹುಲ್ಲು ಬೆಳೆದಿದ್ದ, ಹಳ್ಳದಂತಿದ್ದ ಪ್ರದೇಶದಲ್ಲಿ ನೋಡದೆ ಓಡಿ ಮುಗ್ಗರಿಸಿ ಬಿದ್ದುಬಿಟ್ಟರು. ಅಲ್ಲೇ ಇದ್ದ ತುಕ್ಕುಹಿಡಿದ ಕಬ್ಬಿಣದ ತಂತಿ ಅವರ ಬಲಗಣ್ಣನ್ನು ಚುಚ್ಚಿತು. ಏನಾಯಿತೆಂದು ಅರಿವಾಗುವಷ್ಟರಲ್ಲಿ ಕಣ್ಣು ತೂತಾಗಿತ್ತು. ರಕ್ತ ಸುರಿಯುತ್ತಿತ್ತು. ಇನ್ನೊಂದು ಕಣ್ಣಿಗೂ ಗಾಯವಾಯಿತು. ಕೂಡಲೇ ವೈದ್ಯರಲ್ಲಿಗೆ ಹೋದರು. ಆದರೆ ಬಲಗಣ್ಣು ಉಳಿಯಲಿಲ್ಲ. ಕ್ರಮೇಣ ಎಡಗಣ್ಣೂ ತನ್ನ ದೃಷ್ಟಿಯನ್ನು ಸ್ವಲ್ಪ ಸ್ವಲ್ಪವಾಗಿ ಕಳೆದುಕೊಂಡಿತು. 

ಸುನಿಲ್ ಆರೈಕೆ, ಚಿಕಿತ್ಸೆಗಾಗಿ ಅವರ ಹೆತ್ತವರು ತೀರಾ ಕಠಿಣ ಶ್ರಮಪಟ್ಟರು. 7ನೇ ತರಗತಿಯವರೆಗೂ ಸುನಿಲ್ ಇತರ ಮಕ್ಕಳ ಶಾಲೆಗೇ ಹೋದರು. ಅಲ್ಲಿಯೂ ಕ್ರಿಕೆಟ್ ಆಡುವುದನ್ನು ಬಿಡಲಿಲ್ಲ! ಆದರೆ ಕಣ್ಣುಗಳು ಪೂರಾ ದೃಷ್ಟಿ ಕಳೆದುಕೊಂಡ ಮೇಲೆ ಅದು ಸಾಧ್ಯವಾಗಲಿಲ್ಲ. ಆಗ ಅವರ ಸಂಗೀತ ಶಿಕ್ಷಕರು ನೀಡಿದ ಮಾಹಿತಿಯಂತೆ ಚಿಕ್ಕಮಗಳೂರು ಸಮೀಪದ ಆಶಾಕಿರಣ ಅಂಧ ಮಕ್ಕಳ ಶಾಲೆಗೆ ಹೋದರು. ಅಲ್ಲಿ ಅವರು 8ನೇ ತರಗತಿಗೆ ಸೇರಿಕೊಂಡರು. ಅಲ್ಲಿಯೂ ಆಟಗಳಲ್ಲಿ ತೊಡಗಿಕೊಂಡರು. ಅಲ್ಲಿನ ಕೋಚ್ ಬಿಎಲ್ ಗೋಪಾಲ್ ಎಂಬವರು ಈತನ ಪ್ರತಿಭೆಯನ್ನು ಗುರುತಿಸಿದರು. ಹೆಚ್ಚಿನ ಸಾಧನೆ ಮಾಡುವಂತೆ ಪ್ರೇರೇಪಿಸಿದರು.

ನನ್ನ ಜೀವನದಲ್ಲಿ ಹಿಂದೆ ತಿರುಗಿ ನೋಡಿದಾಗ ಏನೂ ಇರಲಿಲ್ಲ. ಹಾಗಾಗಿ ನಾನು ಮುಂದೆ ನೋಡಬೇಕು ಎಂದು ನನಗೆ ನಾನೇ ಅಂದುಕೊಂಡೆ ಅನ್ನುತ್ತಾರೆ ಸುನಿಲ್. 2014ರಲ್ಲಿ ರಾಮನಗರದಲ್ಲಿ ಪ್ಯಾರಾಲಿಂಪಿಕ್ ಅಂದರ ಕ್ರಿಕೆಟ್ ಪಂದ್ಯಾಟದಲ್ಲಿ ಆಡಿದರು. ಅಲ್ಲಿ ಅವರು ಬೆಸ್ಟ್ ಬ್ಯಾಟ್ಸ್‌ಮನ್ ಮತ್ತು ಫೀಲ್ಡರ್ ಎಂದು ಗುರುತಿಸಲ್ಪಟ್ಟರು. ಅಲ್ಲಿಂದಾಚೆಗೆ ಅವರು ಜೀವನದ ದೆಸೆಯೇ ಬದಲಾಯಿತು. ರಾಜ್ಯ ಕ್ರಿಕೆಟ್ ಟೀಮಿಗೆ ಆಯ್ಕೆಯಾದರು. ಎರಡು ವರ್ಷ ರಾಜ್ಯ ತಂಡದಲ್ಲಿ ಆಡಿದ ಬಳಿಕ, ರಾಷ್ಟ್ರೀಯ ಅಂಧರ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದರು.

2017ರಲ್ಲಿ ನಡೆದ ಅಂದರ ಟಿ20 ವಿಶ್ವಕಪ್ ಪಂದ್ಯಾವಳಿ ಸುನಿಲ್ ಜೀವನದ ರೋಚಕ ಘಟ್ಟ. ಆ ಪಂದ್ಯಾಟಗಳಲ್ಲಿ ಅವರು ಎರಡು ಸೆಂಚುರಿಗಳನ್ನು ಬಾರಿಸಿದರು. ಅದೂ ಆಷ್ಟ್ರೇಲಿಯಾ ಹಾಗೂ ವೆಸ್ಟ್ಇಂಡೀಸ್ ವಿರುದ್ಧ. ಫೈನಲ್‌ನಲ್ಲಿ ಪಾಕಿಸ್ತಾನವನ್ನು 9 ವಿಕೆಟ್‌ಗಳಿಂದ ಸೋಲಿಸಿ ವಿಶ್ವಕಪ್ ಗೆದ್ದದ್ದು ಅವರು ಮರೆಯಲಾಗದ ಘಟನೆ. 2018ರಲ್ಲೂ ಅಂಥದೇ ಇನ್ನೊಂದು ಮಹಾಸಂಭ್ರಮ ಅವರ ಪಾಲಿಗೆ. ಆ ವರ್ಷವೂ ಅಂಧರ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಹೊಡೆದುರುಳಿಸಿ ಕಪ್ ಗೆದ್ದುಕೊಟ್ಟರು. ಅವರ ಈಸಾಧನೆ ಪ್ರತಿಭೆಗಳಿಗೆ ಸಂದ ಗೌರವ ಎಂಬಂತೆ, ಈ ವರ್ಷದ ಮೊದಲ ವಾರದಲ್ಲಿ ಸುನಿಲ್ ಅವರನ್ನು ಅಂಧರ ತಂಡದ ಕ್ಯಾಪ್ಟನ್ ಆಗಿ ಆರಿಸಲಾಗಿದೆ.

ಮಕ್ಕಳ ಹೊಟ್ಟೆ ತುಂಬಿಸಲು ಕೂದಲು ಮಾರಿದ ಅಮ್ಮ

ಅಂಧರ ಕ್ರಿಕೆಟ್‌ಗೆ ಅದರದೇ ಆದ ಗೈಡ್‌ಲೈನ್‌ಗಳೂ, ಇತಿಮಿತಿಗಳೂ ಇವೆ. ಮುಖ್ಯ ಕ್ರಿಕೆಟನಷ್ಟು ಆದಾಯವೂ ಅದರಲ್ಲಿ ಇರುವವರಿಗಿಲ್ಲ. ಸುನಿಲ್ ಕಾಯಂ ಸರಕಾರಿ ಉದ್ಯೋಗವೊಂದರ ಬಯಕೆ. ಇಂಥ ಪ್ರತಿಭಾವಂತನನ್ನು ಸರಕಾರ ಕಡೆಗಣಿಸದು ಎಂದು ಭಾವಿಸೋಣ.

click me!