ವಂಚನೆ ಪ್ರಕರಣ; ಭಾರತದ ಕ್ರಿಕೆಟಿಗ ಅಮಾನತು

By Suvarna NewsFirst Published Jan 1, 2020, 10:05 PM IST
Highlights

ಆರಂಭಿಕ ಬ್ಯಾಟ್ಸ‌ಮನ್ ಶಿಖರ್ ಧವನ್ ಬದಲು ದೆಹಲಿ ತಂಡ ಸೇರಿಕೊಂಡಿದ್ದ ಕ್ರಿಕಟಿಗ ವಯಸ್ಸಿನ ವಂಚನೆ ಪ್ರಕರಣದಿಂದ ಅಮಾನತುಗೊಂಡಿದ್ದಾರೆ. ದೆಹಲಿ ಕ್ರಿಕೆಟ್ ಸಂಸ್ಥೆ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ(ಜ.01): ಕಳೆದ ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ಮನ್ಜೋತ್ ಕಾಲ್ರ ವಯಸ್ಸಿನ ವಂಚನೆ ಪ್ರಕರಣದಿಂದ 1 ವರ್ಷ ಅಮಾನತುಗೊಂಡಿದ್ದಾರೆ. ಸದ್ಯ ದೆಹಲಿ ಪರ ರಣಜಿ ಟ್ರೋಫಿ ಆಡುತ್ತಿರುವ ಮನ್ಜೋತ್ ಏಜ್ ಫ್ರಾಡ್ ಮಾಡಿದ್ದಾರೆ ಅನ್ನೋ ಆರೋಪದ ಮೇಲೆ ದೆಹಲಿ ಕ್ರಿಕೆಟ್ ಸಂಸ್ಥೆ ಅಮಾನತು ಮಾಡಿದೆ.

ಇದನ್ನೂ ಓದಿ: ಆಡಿರೋ 2 ಪಂದ್ಯಕ್ಕೆ ದೌಲತ್ತು; ಟೀಂ ಇಂಡಿಯಾ ಕ್ರಿಕೆಟಿಗನಿಗೆ ಬಿತ್ತು ಬರೆ!..

ಅಂಡರ್ 16 ಹಾಗೂ ಅಂಡರ್ 19 ತಂಡದಲ್ಲಿ ಆಡುವ ವೇಳೆ ಮನ್ಜೋತ್ ವಯಸ್ಸಿಗೆ ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ. ಬಿಸಿಸಿಐ ದಾಖಲೆ ಪ್ರಕಾರ ಮನ್ಜೋತ್ ವಯಸ್ಸು 20 ವರ್ಷ 351 ದಿನ. ಆದರೆ ನಿಜವಾದ ವಯಸ್ಸು ಇದಲ್ಲ. ಹೀಗಾಗಿ ಮನ್ಜೋತ್ ಅಮಾನತು ಮಾಡಲಾಗಿದೆ ಎಂದು ದೆಹಲಿ ಕ್ರಿಕೆಟ್ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಪಾಕಿಸ್ತಾನ ಅಭಿಮಾನಿಗಳು ಮಾತ್ರವಲ್ಲ, ಅಫ್ರಿದಿ ಕೂಡ ಪುಡಿ ಮಾಡಿದ್ದಾರೆ TV

ಶಿಖರ್ ಧವನ್ ಬದಲು  ಆರಂಭಿಕನಾಗಿ ದೆಹಲಿ ತಂಡ ಸೇರಿಕೊಂಡ ಮನ್ಜೋತ್, ಪ್ರಸಕ್ತ ರಣಜಿ ಟೂರ್ನಿ ಆಡುವುದಿಲ್ಲ. 1 ವರ್ಷ ಅಮಾನತು ಮಾಡಲಾಗಿದೆ ಎಂದು ಡಿಡಿಸಿಎ ಸ್ಪಷ್ಟಪಡಿಸಿದೆ. ಇದೀಗ ಪಂಜಾಬ್ ವಿರುದ್ಧದ ಪಂದ್ಯಕ್ಕೆ ಶಿಖರ್ ಧವನ್ ಹಾಗೂ ಇಶಾಂತ್ ಶರ್ಮಾ ಅಲಭ್ಯರಾಗಿದ್ದಾರೆ. ಧವನ್ ಬದಲಿ ಆಟಗಾರ ಮನ್ಜೋತ್ ಅಮಾನತುಗೊಂಡಿದ್ದಾರೆ. ಹೀಗಾಗಿ ವೈಭವ್ ಕಂದಪಾಲ್ ಹಾಗೂ ಸಿದ್ಧಾಂತ್ ಶರ್ಮಾ ತಂಡಕ್ಕೆ ಆಯ್ಕೆಯಾಗಿದ್ದಾರೆ. 
 

click me!