
ಮುಂಬೈ(ಜ.01): ಹೊಸ ವರ್ಷದ ಸಂಭ್ರಮದಲ್ಲಿರುವ ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳಿಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಸರ್ಪ್ರೈಸ್ ನೀಡಿದ್ದಾರೆ. ಹಲವು ಬಾಲಿವುಡ್ ನಟಿಯರ ಜೊತೆ ಡೇಟಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ 2020ರಲ್ಲಿ ತಮ್ಮ ಗಪ್ ಚುಪ್ ಪ್ರೀತಿ ಬಹಿರಂಗ ಪಡಿಸಿದ್ದಾರೆ.
ಇದನ್ನೂ ಓದಿ: ಸಿನಿಮಾಗೂ ಕ್ರಿಕೆಟ್‌ಗೂ ಏನೀ ನಂಟು? ನಟಿಗೆ ನಾಯಿಮರಿ ಗಿಫ್ಟ್ ಮಾಡಿದ ಹಾರ್ದಿಕ್ ಪಾಂಡ್ಯ
ಬಾಲಿವುಡ್ ನಟಿ ನತಾಶ ಸ್ಟಾಂಕೋವಿಚ್ ಜೊತೆಗಿನ ಪ್ರೀತಿಯನ್ನು ಪಾಂಡ್ಯ ಬಹಿರಂಗ ಪಡಿಸಿದ್ದಾರೆ. ಹೊಸ ವರ್ಷದ ಸಂದರ್ಭದಲ್ಲಿ ಪಾಂಡ್ಯ, ನನ್ನ ಪಟಾಕಿಯೊಂದಿಗೆ ಹೊಸ ವರ್ಷಕ್ಕೆ ಹೆಜ್ಜೆ ಇಡುತ್ತಿದ್ದೇನೆ ಎಂದು ಪಾಂಡ್ಯಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ವಾಚ್ ಕಟ್ಟಿಕೊಂಡು ಸರ್ಜರಿ ಮಾಡಿದ್ರಾ; ಪಾಂಡ್ಯ ಕಾಲೆಳೆದ ಕೊಹ್ಲಿ ಮಾಜಿ ಗೆಳತಿ!
ಈಗಾಗಲೇ ಹಲವು ಬಾರಿ ಹಾರ್ದಿಕ್ ಪಾಂಡ್ಯ ಹಾಗೂ ನತಾಶ ನಡುವಿ ಡೇಟಿಂಗ್ ಸದ್ದು ಮಾಡುತ್ತಿತ್ತು. ಹಲವು ಬಾರಿ ಪಾಂಡ್ಯ ಹಾಗೂ ನತಾಶ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಅಧೀಕೃತವಾಗಿರಲಿಲ್ಲ. ಇದೀಗ ಸ್ವತಃ ಪಾಂಡ್ಯ ಬಹಿರಂಗ ಪಡಿಸೋ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಪಾಂಡ್ಯ ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್‌ಗೆ ಕ್ರಿಕೆಟಿಗ ಯಜುವೇಂದ್ರ ಚಹಾಲ್ ಸರಿದಂತೆ ಹಲವರು ಕಮೆಂಟ್ ಮಾಡಿದ್ದಾರೆ.
2019ರ ಸಾಲಿನಲ್ಲಿ ಹಾರ್ಡಿಕ್ ಪಾಂಡ್ಯ ಇಂಜುರಿಯಿಂದ ತಂಡದಿಂದ ಹೊರಗುಳಿದಿದ್ದೇ ಹೆಚ್ಚು. ಸೆಪ್ಟೆಂಬರ್‌ನಿಂದ ತಂಡದ ಹೊರಬಿದ್ದ ಪಾಂಡ್ಯ ಸುದೀರ್ಘ ವಿಶ್ರಾಂತಿಯಲ್ಲಿದ್ದಾರೆ. ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿಗೂ ಆಯ್ಕೆಯಾಗಿಲ್ಲ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.