ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ವೇಗಿ ಎನ್ಗಿಡಿಗೆ ತಲೆಗೆ ಗಂಭೀರ ಗಾಯ, ಆಸ್ಪತ್ರೆ ದಾಖಲು

Published : Apr 25, 2026, 07:00 PM IST
Lungi Ngidi Injury

ಸಾರಾಂಶ

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ವೇಗಿ ಎನ್ಗಿಡಿಗೆ ತಲೆಗೆ ಗಂಭೀರ ಗಾಯ, ಆಸ್ಪತ್ರೆ ದಾಖಲು, ಮೈದಾನದಲ್ಲೇ ಬಿದ್ದ ಎನ್ಗಿಡಿಯನ್ನು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ದಾಖಿಸಲಾಗಿದೆ.

ದೆಹಲಿ (ಏ.25) ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಅವಘಡ ನಡೆದಿದೆ. ಡೆಲ್ಲಿ ತಂಡದ ವೇಗಿ ಲುಂಗಿ ಎನ್ಗಿಡಿ ಕ್ಯಾಚ್ ಹಿಡಿಯು ವೇಳೆ ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಗಂಭೀರವಾಗಿ ಗಾಯವಾಗಿದೆ. ಮೈದಾನದಲ್ಲಿ ಕುಸಿದು ಬಿದ್ದ ಎನ್ಗಿಡಿಯನ್ನು ತಕ್ಷಣವೇ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ದಾಖಲಿಸಲಾಗಿದೆ. ಎನ್ಗಿಡಿ ಗಾಯ ಗಂಭೀರವಾಗಿದೆ ಅನ್ನೋ ಅರಿವಾಗುತ್ತಿದ್ದಂತೆ ಕ್ರೀಡಾಂಗಣದ ಒಳಕ್ಕೆ ಆ್ಯಂಬುಲೆನ್ಸ್ ಆಗಮಿಸಿತ್ತು. ಪಂದ್ಯ ನೋಡುತ್ತಿದ್ದ ಅಭಿಮಾನಿಗಳಲ್ಲಿ ಆತಂಕ ಹೆಚ್ಚಾಗಿದೆ.

ಲುಂಗಿ ಎನ್‌ಗಿಡಿಗೆ ಗಾಯ ಆಗಿದ್ದು ಹೇಗೆ?

ಪಂಜಾಬ್ ತಂಡ 265 ರನ್‌ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟುತ್ತಿತ್ತು. ಮೂರನೇ ಓವರ್‌ನಲ್ಲಿ ಅಕ್ಷರ್ ಪಟೇಲ್ ಬೌಲಿಂಗ್ ಮಾಡುತ್ತಿದ್ದರು. ಬ್ಯಾಟ್ಸ್‌ಮನ್ ಪ್ರಿಯಾಂಶ್ ಆರ್ಯ ಬಾರಿಸಿದ ಚೆಂಡು ಆಕಾಶಕ್ಕೆ ಚಿಮ್ಮಿತು. ಮಿಡ್-ಆಫ್‌ನಲ್ಲಿದ್ದ ಲುಂಗಿ ಎನ್‌ಗಿಡಿ ಕ್ಯಾಚ್ ಹಿಡಿಯಲು ಹಿಂದಕ್ಕೆ ಓಡಿದರು. ಆದರೆ, ಚೆಂಡಿನ ವೇಗ ಮತ್ತು ದಿಕ್ಕನ್ನು ಅಂದಾಜಿಸುವಲ್ಲಿ ಸ್ವಲ್ಪ ಎಡವಿದ ಅವರು, ಹಿಂದಕ್ಕೆ ಬಲವಾಗಿ ಬಿದ್ದರು. ಬೀಳುವ ರಭಸಕ್ಕೆ ಅವರ ತಲೆ ನೇರವಾಗಿ ನೆಲಕ್ಕೆ ಅಪ್ಪಳಿಸಿತು. ಬಿದ್ದ ತಕ್ಷಣ ತಲೆ ಹಿಡಿದು ನೋವಿನಿಂದ ಚಡಪಡಿಸಲು ಶುರುಮಾಡಿದರು.

ಮೈದಾನದೊಳಕ್ಕೆ ಬಂತು ಆಂಬುಲೆನ್ಸ್

ಈ ಘಟನೆ ಎಷ್ಟು ಗಂಭೀರವಾಗಿತ್ತೆಂದರೆ, ಅಂಪೈರ್‌ಗಳು ತಕ್ಷಣವೇ ಮೆಡಿಕಲ್ ಟೀಮ್‌ಗೆ ಕರೆ ನೀಡಿದರು. ಆಟ ಕೆಲಕಾಲ ಸ್ಥಗಿತಗೊಂಡಿತ್ತು. ವೈದ್ಯರು ಮೈದಾನದಲ್ಲೇ ಅವರ ಕುತ್ತಿಗೆ ಮತ್ತು ತಲೆಯ ಪರೀಕ್ಷೆ ನಡೆಸಿದರು. ಸಮಾಧಾನದ ಸಂಗತಿ ಅಂದ್ರೆ, ಎನ್‌ಗಿಡಿ ಪ್ರಜ್ಞಾ ಸ್ಥಿತಿಯಲ್ಲಿದ್ದರು ಮತ್ತು ವೈದ್ಯರೊಂದಿಗೆ ಮಾತನಾಡುತ್ತಿದ್ದರು. ಆದರೂ, ಯಾವುದೇ ರಿಸ್ಕ್ ತೆಗೆದುಕೊಳ್ಳದೆ, ಅವರನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಮೈದಾನದೊಳಕ್ಕೇ ಆಂಬುಲೆನ್ಸ್ ಕರೆಯಲಾಯಿತು. ನಂತರ ಆಂಬುಲೆನ್ಸ್ ಮೂಲಕ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಲುಂಗಿ ಎನ್‌ಗಿಡಿ ಆರೋಗ್ಯ ಸ್ಥಿತಿ ಹೇಗಿದೆ?

ಸದ್ಯದ ಮಾಹಿತಿ ಪ್ರಕಾರ, ಮುನ್ನೆಚ್ಚರಿಕಾ ಕ್ರಮವಾಗಿ ಎನ್‌ಗಿಡಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಕುತ್ತಿಗೆ ಮತ್ತು ತಲೆಯ ಸಿಟಿ ಸ್ಕ್ಯಾನ್ (CT Scan) ಮಾಡಿಸಲಾಗುವುದು. ತಂಡದ ಮ್ಯಾನೇಜ್‌ಮೆಂಟ್ ಅವರ ವಾಪಸಾತಿ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಅಭಿಮಾನಿಗಳು ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ.

ಈ ಸೀಸನ್‌ನ ಅತಿದೊಡ್ಡ ಸ್ಕೋರ್ ಗಳಿಸಿದ ಡೆಲ್ಲಿ

ಈ ದುರಂತ ಘಟನೆಗೂ ಮುನ್ನ, ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್‌ಗಳು ಪಂಜಾಬ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ, 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತ್ತು. ಇದು ಈ ಸೀಸನ್‌ನ ಅತಿದೊಡ್ಡ ಸ್ಕೋರ್ ಆಗಿದೆ. ಆದರೆ, ಎನ್‌ಗಿಡಿ ಗಾಯದ ಸುದ್ದಿ ಬಂದ ನಂತರ ಈ ದಾಖಲೆಯ ಸಂಭ್ರಮ ಕೊಂಚ ಮಂಕಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಂಜಾಬ್ ಬೌಲರ್‌ಗಳನ್ನು ಚೆಂಡಾಡಿ ಕೆ ಎಲ್ ರಾಹುಲ್ ಸ್ಪೋಟಕ ಶತಕ; ಶ್ರೇಯಸ್ ಅಯ್ಯರ್ ಪಡೆಗೆ ಬೆಟ್ಟದಂತ ಸವಾಲು
ಶುಭ್‌ಮನ್ ಗಿಲ್ ಕ್ಯಾಪ್ಟನ್ಸಿ ಸರಿ ಇಲ್ಲ; ಆರ್‌ಸಿಬಿ ಎದುರು ಗುಜರಾತ್ ಟೈಟಾನ್ಸ್‌ ಸೋಲಿನ ಬೆನ್ನಲ್ಲೇ ವಿರೇಂದ್ರ ಸೆಹ್ವಾಗ್ ಗರಂ