
ಕೊಲಂಬೊ(ನ.21): ಶ್ರೀಲಂಕಾ ನಾಯಕ ಹಾಗೂ ಹಿರಿಯ ವೇಗಿ ಲಸಿತ್ ಮಾಲಿಂಗ ತಮ್ಮ ನಿವೃತ್ತಿ ನಿರ್ಧಾರವನ್ನು ಬದಲಿಸಿದ್ದಾರೆ. 2020ರ ಟಿ20 ವಿಶ್ವಕಪ್ ಬಳಿಕ ನಿವೃತ್ತಿ ಪಡೆಯುವುದಾಗಿ ಇದೇ ವರ್ಷ ಮಾರ್ಚ್’ನಲ್ಲಿ ಘೋಷಿಸಿದ್ದ ಮಾಲಿಂಗ, ಇದೀಗ ಇನ್ನು 2 ವರ್ಷ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ ಕ್ರಿಕೆಟ್ ಸರಣಿ ಡೌಟ್; ನರಕ ಪ್ರವಾಸಕ್ಕೆ 10 ಲಂಕಾ ಕ್ರಿಕೆಟಿಗರ ನಕಾರ!
‘ಟಿ20ಯಲ್ಲಿ 4 ಓವರ್ ಬೌಲ್ ಮಾಡಬೇಕಷ್ಟೆ. ನನ್ನ ಕೌಶಲ್ಯದ ನೆರವಿನಿಂದ ಅದನ್ನು ನಿಭಾಯಿಸಲು ಸಾಧ್ಯ ಎಂದು ನನಗನಿಸುತ್ತಿದೆ. ವಿಶ್ವದಾದ್ಯಂತ ನಾನು ಟಿ20 ಟೂರ್ನಿಗಳನ್ನು ಆಡಿದ್ದೇನೆ. ಹೀಗಾಗಿ ಇನ್ನೂ 2 ವರ್ಷ ಮುಂದುವರಿಯಬಹುದು ಎನ್ನುವ ವಿಶ್ವಾಸ ನನಗಿದೆ’ ಎಂದು ಮಾಲಿಂಗ ಹೇಳಿದ್ದಾರೆ. ಟಿ20 ವಿಶ್ವಕಪ್ನಲ್ಲಿ ತಮಗೆ ತಂಡ ಮುನ್ನಡೆಸುವ ಅವಕಾಶ ಸಿಗಲಿದೆಯೇ ಎನ್ನುವುದನ್ನು ಲಂಕಾ ಕ್ರಿಕೆಟ್ ಮಂಡಳಿಯಿಂದ ತಿಳಿಯಲು ಕಾತರರಾಗಿರುವುದಾಗಿ ಮಾಲಿಂಗ ಹೇಳಿದ್ದಾರೆ.
36ರ ಹರೆಯದಲ್ಲಿ ಮಾಲಿಂಗ ಹ್ಯಾಟ್ರಿಕ್; ಸಾಧನೆ ಕೊಂಡಾಡಿದ ಫ್ಯಾನ್ಸ್!
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ನೂರು ವಿಕೆಟ್ ಕಬಳಿಸಿರುವ ಏಕೈಕ ಬೌಲರ್ ಎನಿಸಿರುವ ಮಾಲಿಂಗ, ಲಂಕಾ ತಂಡವು ಕೌಶಲ್ಯಯುಕ್ತ ಬೌಲರ್’ಗಳ ಕೊರತೆಯನ್ನು ಎದುರಿಸುತ್ತಿದೆ. ಈ ಕೊರತೆಯನ್ನು ಒಂದು-ಒಂದೂವರೆ ವರ್ಷದಲ್ಲಿ ಸರಿಪಡಿಸಲು ಸಾಧ್ಯವಿಲ್ಲ. ಮುಖ್ಯವಾಗಿ ತಾಳ್ಮೆ ಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.