Aus vs SA ದ್ವಿಶತಕ ಸಂಭ್ರಮಿಸುವಾಗ ಗಾಯಗೊಂಡ ಡೇವಿಡ್ ವಾರ್ನರ್‌!

Published : Dec 28, 2022, 10:06 AM IST
Aus vs SA ದ್ವಿಶತಕ ಸಂಭ್ರಮಿಸುವಾಗ ಗಾಯಗೊಂಡ ಡೇವಿಡ್ ವಾರ್ನರ್‌!

ಸಾರಾಂಶ

ದಕ್ಷಿಣ ಆಫ್ರಿಕಾ ವಿರುದ್ಧ ಡೇವಿಡ್ ವಾರ್ನರ್ 200, ಖುಷಿಯಲ್ಲಿ ಎತ್ತರಕ್ಕೆ ನೆಗೆತ ಕಾಲಿಗೆ ಗಾಯ ಕುಂಟುತ್ತಲೇ ಹೊರನಡೆದ ವಾರ್ನರ್‌ 100ನೇ ಟೆಸ್ಟ್‌ನಲ್ಲಿ ಶತಕ, ವಾರ್ನರ್‌ 2ನೇ ಬ್ಯಾಟರ್‌

ಮೆಲ್ಬರ್ನ್‌(ಡಿ.28): ವೃತ್ತಿಜೀವನದ 100ನೇ ಟೆಸ್ಟ್‌ನಲ್ಲಿ ಅವಿಸ್ಮರಣೀಯ ದ್ವಿಶತಕ ಬಾರಿಸಿದರೂ ಡೇವಿಡ್‌ ವಾರ್ನರ್‌ ಸಂಭ್ರಮ ಹೆಚ್ಚು ಹೊತ್ತು ನಿಲ್ಲಲಿಲ್ಲ. ದ.ಆಫ್ರಿಕಾ ವಿರುದ್ಧ 2ನೇ ಟೆಸ್ಟ್‌ನಲ್ಲಿ ಮಂಗಳವಾರ 200 ರನ್‌ ಬಾರಿಸಿದ ಖುಷಿಯಲ್ಲಿ ಸಂಭ್ರಮಿಸುತ್ತಿದ್ದಾಗ ವಾರ್ನರ್‌ ಕಾಲಿಗೆ ಗಾಯವಾಗಿದ್ದು, ಅರ್ಧದಲ್ಲೇ ಕ್ರೀಸ್‌ ತೊರೆದ ಪ್ರಸಂಗ ನಡೆಯಿತು.

ಸತತ ವೈಫಲ್ಯದಿಂದಾಗಿ ತಂಡದಲ್ಲಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ವಾರ್ನರ್‌ ಈ ಪಂದ್ಯದಲ್ಲಿ ತಮ್ಮ ಎಂದಿನ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಉಸ್ಮಾನ್‌ ಖವಾಜ(01), ಲ್ಯಾಬುಶೇನ್‌(14) ವಿಕೆಟ್‌ ಬೇಗನೇ ಕಳೆದುಕೊಂಡ ಬಳಿಕ ಸ್ಟೀವ್‌ ಸ್ಮಿತ್‌ ಜೊತೆ 239 ರನ್‌ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿದರು. ಸ್ಮಿತ್‌ 85 ರನ್‌ಗೆ ನಿರ್ಗಮಿಸಿದ ಬಳಿಕ ಟ್ರ್ಯಾವಿಡ್‌ ಹೆಡ್‌ ಜೊತೆಯಾದ ವಾರ್ನರ್‌ 77ನೇ ಓವರಲ್ಲಿ ಟೆಸ್ಟ್‌ನ ತಮ್ಮ 2ನೇ ದ್ವಿಶತಕ ಪೂರ್ತಿಗೊಳಿಸಿದರು. 254 ಎಸೆತಗಳಲ್ಲಿ 16 ಬೌಂಡರಿ, 2 ಸಿಕ್ಸರ್‌ನೊಂದಿಗೆ 200 ರನ್‌ ಸಿಡಿಸಿದರು. ಇದೇ ಖುಷಿಯಲ್ಲಿ ಮೇಲಕ್ಕೆ ನೆಗೆದು ಕಾಲಿಗೆ ಗಾಯ ಮಾಡಿಕೊಂಡ ಅವರಿಗೆ ಬಳಿಕ ಬ್ಯಾಟಿಂಗ್‌ ಮುಂದುವರಿಸಲು ಆಗಲಿಲ್ಲ. ನಂತರ ನೋವಿನಿಂದ ಚೀರುತ್ತಲೇ ಸಹಾಯಕ ಸಿಬ್ಬಂದಿ ನೆರವಿನಿಂದ ಮೈದಾನ ತೊರೆದರು.

ದ.ಆಫ್ರಿಕಾದ 189 ರನ್‌ಗೆ ಉತ್ತರವಾಗಿ ಬ್ಯಾಟಿಂಗ್‌ ನಡೆಸುತ್ತಿರುವ ಆಸೀಸ್‌ 2ನೇ ದಿನದಂತ್ಯಕ್ಕೆ 3 ವಿಕೆಟ್‌ಗೆ 386 ರನ್‌ ಕಲೆ ಹಾಕಿದ್ದು, 197 ರನ್‌ ಮುನ್ನಡೆ ಸಾಧಿಸಿದೆ. ಕ್ಯಾಮರೂನ್‌ ಗ್ರೀನ್‌(06) ಕೈಬೆರಳ ನೋವಿನಿಂದಾಗಿ ಪೆವಿಲಿಯನ್‌ಗೆ ಮರಳಿದ್ದು, ಟ್ರ್ಯಾವಿಸ್‌ ಹೆಡ್‌(48) ಕ್ರೀಸ್‌ ಕಾಯ್ದುಕೊಂಡಿದ್ದಾರೆ.

100ನೇ ಟೆಸ್ಟ್‌ನಲ್ಲಿ ಶತಕ: ವಾರ್ನರ್‌ 2ನೇ ಬ್ಯಾಟರ್‌

ವಾರ್ನರ್‌ ವೃತ್ತಿಜೀವನದ 100ನೇ ಟೆಸ್ಟ್‌ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ವಿಶ್ವದ 2ನೇ, ಆಸ್ಪ್ರೇಲಿಯಾದ ಏಕೈಕ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಈ ಮೊದಲು ಇಂಗ್ಲೆಂಡ್‌ನ ಜೋ ರೂಟ್‌ ತಮ್ಮ ಶತಕದ ಪಂದ್ಯದಲ್ಲಿ ದ್ವಿಶತಕ ಬಾರಿಸಿದ್ದರು.

ನೋಕಿಯಾಗೆ ಬಡಿದ ಸ್ಪೈಡರ್‌ ಕ್ಯಾಮ್‌!

ಆಸೀಸ್‌ ಇನ್ನಿಂಗ್‌್ಸ ವೇಳೆ ಫೀಲ್ಡಿಂಗ್‌ ನಿರತರಾಗಿದ್ದ ದ.ಆಫ್ರಿಕಾ ವೇಗಿ ಏನ್ರಿಚ್‌ ನೋಕಿಯಾ ತಲೆಗೆ ಸ್ಪೈಡರ್‌ ಕ್ಯಾಮ್‌ ಬಡಿದ ಘಟನೆ ನಡೆಯಿತು. 47ನೇ ಓವರ್‌ ಮುಕ್ತಾಯಗೊಂಡಾಗ ಸ್ಪೈಡರ್‌ ಕ್ಯಾಮ್‌ ಮೈದಾನದ ತೀರಾ ಕೆಳಮಟ್ಟದಲ್ಲಿ ಸುತ್ತುತ್ತಿದ್ದಾಗ ನೋಕಿಯಾ ತಲೆಗೆ ತಾಗಿತು. ಪರಿಣಾಮ ನೋಕಿಯಾ ಸ್ವಲ್ಪ ದೂರಕ್ಕೆ ತಳ್ಳಲ್ಪಟ್ಟು ಕೆಳಕ್ಕೆ ಬಿದ್ದರು. ಆದರೆ ಯಾವುದೇ ಗಾಯಗಳಾದೆ ಅಪಾಯದಿಂದ ಪಾರಾಗಿದ್ದಾರೆ. ಇದರ ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

100ನೇ ಟೆಸ್ಟ್‌ ಪಂದ್ಯದಲ್ಲಿ 200 ಬಾರಿಸಿದ ಡೇವಿಡ್ ವಾರ್ನರ್‌..! ಹಲವು ದಾಖಲೆಗಳು ನುಚ್ಚುನೂರು..!

ಟಿ20: ಭಾರತ ವನಿತೆಯರಿಗೆ ಜಯ

ಪ್ರಿಟೋರಿಯಾ: ದ.ಆಫ್ರಿಕಾ ಅಂಡರ್‌-19 ಮಹಿಳಾ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ಮಹಿಳೆಯರು 54 ರನ್‌ ಗೆಲುವು ಸಾಧಿಸಿದ್ದು, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದಾರೆ. ಮೊದಲು ಬ್ಯಾಟ್‌ ಮಾಡಿದ ಭಾರತ 5 ವಿಕೆಟ್‌ಗೆ 137 ರನ್‌ ಕಲೆಹಾಕಿತು. ಶ್ವೇತಾ 40, ಸೌಮ್ಯಾ 40 ರನ್‌ ಸಿಡಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಆತಿಥೇಯ ತಂಡ 20 ಓವರಲ್ಲಿ 8 ವಿಕೆಟ್‌ಗೆ 83 ರನ್‌ ಗಳಿಸಿ ಸೋಲೊಪ್ಪಿಕೊಂಡಿತು. ಶಬ್ನಂ, ಅರ್ಚನಾ ತಲಾ 3 ವಿಕೆಟ್‌ ಕಿತ್ತರು. 2ನೇ ಟಿ20 ಗುರುವಾರ ನಡೆಯಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು
ಡಿಕಾಕ್‌ ಡ್ಯಾಶಿಂಗ್‌ ಆಟದ ಮುಂದೆ ಥಂಡಾ ಹೊಡೆದ ಟೀಮ್‌ ಇಂಡಿಯಾ!