ಚೆಂಡು ವಿರೂಪಕ್ಕಿತ್ತು ಆಸ್ಪ್ರೇಲಿಯಾ ಅನುಮತಿ! Ball Tampering ಬಗ್ಗೆ ವಾರ್ನರ್ ಮ್ಯಾನೇಜರ್ ಅಚ್ಚರಿಯ ಹೇಳಿಕೆ

By Kannadaprabha NewsFirst Published Dec 10, 2022, 9:59 AM IST
Highlights

ಮತ್ತೆ ಚರ್ಚೆಗೆ ಬಂದ ಬಾಲ್‌ ಟ್ಯಾಂಪರಿಂಗ್ ವಿಚಾರ
2018ರಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಿ ನಿಷೇಧಕ್ಕೆ ಒಳಗಾಗಿದ್ದ ಆಸ್ಟ್ರೇಲಿಯಾದ ಮೂವರು ಕ್ರಿಕೆಟಿಗರು
ಬಾಲ್ ಟ್ಯಾಂಪರಿಂಗ್‌ ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ಅನುಮತಿ ನೀಡಿತ್ತು ಎಂದು ವಾರ್ನರ್ ಮ್ಯಾನೇಜರ್

ಮೆಲ್ಬರ್ನ್‌(ಡಿ.10): ನಾಯಕತ್ವ ನೀಡುವ ವಿಚಾರದಲ್ಲಿ ತಮ್ಮನ್ನು ಕಡೆಗಣಿಸಿರುವ ಕ್ರಿಕೆಟ್‌ ಆಸ್ಪ್ರೇಲಿಯಾ ವಿರುದ್ಧ ಡೇವಿಡ್‌ ವಾರ್ನರ್‌ ಸಮರ ಸಾರಿದಂತೆ ತೋರುತ್ತಿದೆ. ಅವರ ವ್ಯವಸ್ಥಾಪಕ ಜೇಮ್ಸ್‌ ಎರ್ಸಿಕನ್‌ ಮೂಲಕ ಸ್ಫೋಟಕ ಮಾಹಿತಿಗಳನ್ನು ವಾರ್ನರ್‌ ಬಹಿರಂಗಪಡಿಸಲು ಆರಂಭಿಸಿದ್ದಾರೆ. 

2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೇಪ್‌ಟೌನ್‌ ಟೆಸ್ಟ್‌ ವೇಳೆ ಆಸೀಸ್‌ನ ಸ್ಟೀವ್ ಸ್ಮಿತ್‌, ಡೇವಿಡ್ ವಾರ್ನರ್‌ ಹಾಗೂ ಕ್ಯಾಮರೊನ್ ಬ್ಯಾನ್‌ಕ್ರಾಫ್ಟ್ ಚೆಂಡು ವಿರೂಪಗೊಳಿಸಿ ಸಿಕ್ಕಿಬಿದ್ದಿದ್ದರು. ಚೆಂಡು ವಿರೂಪಗೊಳಿಸಲು ಕ್ರಿಕೆಟ್‌ ಆಸ್ಪ್ರೇಲಿಯಾ ಅಧಿಕಾರಿಗಳು ಒಪ್ಪಿಗೆ ನೀಡಿದ್ದರು. ಅವರ ಸೂಚನೆಯ ಮೇರೆಗೆ ಚೆಂಡು ವಿರೂಪಗೊಳಿಸಲಾಗಿತ್ತು ಎಂದು ಎರ್ಸಿಕನ್‌ ಹೇಳಿದ್ದಾರೆ. 2016ರ ಹೊಬಾರ್ಚ್‌ ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಬಳಿಕ, ತಂಡದ ಸಭೆಯಲ್ಲಿ ಗೆಲ್ಲಲು ಏನು ಬೇಕಿದ್ದರೂ ಮಾಡಬಹುದು. ಚೆಂಡು ವಿರೂಪಗೊಳಿಸಿ ರಿವರ್ಸ್‌ ಸ್ವಿಂಗ್‌ ಸಾಧಿಸಬೇಕಾದರೆ ಅದಕ್ಕೂ ಹಿಂಜರಿಯಬೇಡಿ ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ಅಧಿಕಾರಿಗಳು ಸೂಚಿಸಿದ್ದರು ಎಂದು ಜೇಮ್ಸ್‌ ತಿಳಿಸಿದ್ದಾರೆ.

2ನೇ ಟೆಸ್ಟ್‌: ವಿಂಡೀಸ್‌ ವಿರುದ್ಧ ಆಸೀಸ್‌ ಪ್ರಾಬಲ್ಯ

ಅಡಿಲೇಡ್‌: ವಿಂಡೀಸ್‌ ವಿರುದ್ಧ 2ನೇ ಟೆಸ್ಟ್‌ನಲ್ಲಿ ಆಸ್ಪ್ರೇಲಿಯಾ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸಲ್ಲಿ 7 ವಿಕೆಟ್‌ಗೆ 511 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡ ಆಸೀಸ್‌, 2ನೇ ದಿನದಂತ್ಯಕ್ಕೆ ವಿಂಡೀಸ್‌ ತಂಡವನ್ನು 4 ವಿಕೆಟ್‌ಗೆ 102 ರನ್‌ಗಳಿಗೆ ನಿಯಂತ್ರಿಸಿದೆ. ಆತಿಥೇಯ ತಂಡ ಇನ್ನಿಂಗ್‌್ಸ ಜಯದ ಮೇಲೆ ಕಣ್ಣಿಟ್ಟಿದ್ದು, 2-0ಯಲ್ಲಿ ಸರಣಿ ಗೆಲ್ಲಲು ಸಹ ಎದುರು ನೋಡುತ್ತಿದೆ.

ಅಬ್ರಾರ್‌ಗೆ 7 ವಿಕೆಟ್‌: ಇಂಗ್ಲೆಂಡ್‌ 281ಕ್ಕೆ ಆಲೌಟ್‌

ಮುಲ್ತಾನ್‌: ಪಾದಾರ್ಪಣಾ ಪಂದ್ಯದಲ್ಲೇ 7 ವಿಕೆಟ್‌ ಕಬಳಿಸಿದ ಅಬ್ರಾರ್‌ ಅಹ್ಮದ್‌ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸಲ್ಲಿ ಪಾಕಿಸ್ತಾನ ಪ್ರವಾಸಿ ಇಂಗ್ಲೆಂಡನ್ನು 281 ರನ್‌ಗೆ ಆಲೌಟ್‌ ಮಾಡಲು ನೆರವಾದರು. ದಿನದಂತ್ಯಕ್ಕೆ ಪಾಕಿಸ್ತಾನ 2 ವಿಕೆಟ್‌ಗೆ 107 ರನ್‌ ಗಳಿಸಿತು. ಪಾದಾರ್ಪಣೆ ಮಾಡಿದ ಟೆಸ್ಟ್‌ನಲ್ಲಿ ಭೋಜನ ವಿರಾಮಕ್ಕೂ ಮೊದಲೇ 5 ವಿಕೆಟ್‌ ಗೊಂಚಲು ಪಡೆದ 4ನೇ ಬೌಲರ್‌ ಎನ್ನುವ ದಾಖಲೆಯನ್ನು ಅಬ್ರಾರ್‌ ಬರೆದರು. 1887ರಲ್ಲಿ ಆಸೀಸ್‌ನ ಟರ್ನರ್‌ ಇಂಗ್ಲೆಂಡ್‌ ವಿರುದ್ಧ 6, 1890ರಲ್ಲಿ ಇಂಗ್ಲೆಂಡ್‌ನ ಮಾರ್ಟಿನ್‌ ಆಸೀಸ್‌ ವಿರುದ್ಧ 5, 1950ರಲ್ಲಿ ವಿಂಡೀಸ್‌ನ ವ್ಯಾಲೆಂಟೈನ್‌ ಇಂಗ್ಲೆಂಡ್‌ ವಿರುದ್ಧ 5 ವಿಕೆಟ್‌ ಪಡೆದಿದ್ದರು.

Ind vs Ban ಬಾಂಗ್ಲಾ ಎದುರು ವೈಟ್‌ವಾಶ್‌ನಿಂದ ಪಾರಾಗುತ್ತಾ ಟೀಂ ಇಂಡಿಯಾ?

ರಣಜಿ: ಕರ್ನಾಟಕಕ್ಕೆ ತವರಲ್ಲಿ ಮೊದಲೆರಡು ಪಂದ್ಯ

ಬೆಂಗಳೂರು: 2022-23ನೇ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕ ತಂಡ ಎಲೈಟ್‌ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ತನ್ನ ಮೊದಲೆರಡು ಪಂದ್ಯಗಳನ್ನು ತವರಿನಲ್ಲಿ ಆಡಲಿದೆ. ಡಿಸೆಂಬರ್ 13ರಿಂದ ಆರಂಭಗೊಳ್ಳಲಿರುವ ಮೊದಲ ಸುತ್ತಿನ ಪಂದ್ಯವನ್ನು ಸರ್ವಿಸಸ್‌ ವಿರುದ್ಧ, ಡಿಸೆಂಬರ್ 20ರಿಂದ 2ನೇ ಪಂದ್ಯವನ್ನು ಪುದುಚೇರಿ ವಿರುದ್ಧ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಗುಂಪು ಹಂತದ 4 ಪಂದ್ಯಗಳನ್ನು ತವರಿನಾಚೆ ಆಡಲಿದ್ದು, ಗೋವಾ, ಛತ್ತೀಸ್‌ಗಢ, ಕೇರಳ, ಜಾರ್ಖಂಡ್‌ ತಂಡಗಳನ್ನು ಎದುರಿಸಲಿದೆ. ರಾಜಸ್ಥಾನ ವಿರುದ್ಧದ ಪಂದ್ಯ ಬೆಂಗಳೂರಲ್ಲಿ ನಡೆಯಲಿದ್ದು, ಯಾವ ಮೈದಾನದಲ್ಲಿ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.

click me!