Aus vs WI: ಹೆಡ್, ಲಬುಶೇನ್ ಶತಕ, ಆಸೀಸ್ ಬಿಗಿ ಹಿಡಿತದಲ್ಲಿ ವೆಸ್ಟ್ ಇಂಡೀಸ್‌..!

Published : Dec 09, 2022, 06:01 PM IST
Aus vs WI: ಹೆಡ್, ಲಬುಶೇನ್ ಶತಕ, ಆಸೀಸ್ ಬಿಗಿ ಹಿಡಿತದಲ್ಲಿ ವೆಸ್ಟ್ ಇಂಡೀಸ್‌..!

ಸಾರಾಂಶ

ವಿಂಡೀಸ್ ಎದುರಿನ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೇಲುಗೈ ಎರಡನೇ ದಿನದಾಟದಂತ್ಯದ ವೇಳೆಗೆ ಆಸ್ಟ್ರೇಲಿಯಾ 409 ರನ್‌ಗಳ ಮುನ್ನಡೆ ಆಸ್ಟ್ರೇಲಿಯಾದ ಅಡಿಲೇಡ್ ಓವಲ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ 

ಅಡಿಲೇಡ್(ಡಿ.09): ವೆಸ್ಟ್‌ ಇಂಡೀಸ್ ಎದುರಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಆತಿಥೇಯ ಆಸ್ಟ್ರೇಲಿಯಾ ತಂಡವು ಪ್ರಾಬಲ್ಯ ಮೆರೆದಿದೆ. ಮೊದಲು ಬ್ಯಾಟ್ ಮಾಡಿ 7 ವಿಕೆಟ್‌ ಕಳೆದುಕೊಂಡು 511 ರನ್‌ ಗಳಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದ್ದ ಆಸ್ಟ್ರೇಲಿಯಾ, ಇದಾದ ಬಳಿಕ ಎರಡನೇ ದಿನದಾಟದಂತ್ಯದ ವೇಳೆಗೆ ವೆಸ್ಟ್ ಇಂಡೀಸ್ ತಂಡವು 4 ವಿಕೆಟ್ ಕಳೆದುಕೊಂಡು 102 ರನ್‌ ಗಳಿಸಿದ್ದು, ಆಸ್ಟ್ರೇಲಿಯಾ ಒಟ್ಟಾರೆ 409 ರನ್‌ಗಳ ಮುನ್ನಡೆಯಲ್ಲಿದೆ. 

ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ ಆರಂಭಿಸಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಕ್ರೆಗ್ ಬ್ರಾಥ್‌ವೇಟ್ ಹಾಗೂ ತೇಜ್‌ನರೈನ್‌ ಚಂದ್ರಪಾಲ್ ಮೊದಲ ವಿಕೆಟ್‌ಗೆ 35 ರನ್‌ಗಳ ಜತೆಯಾಟವಾಡಿದರು. ದಿನದಾಟದ ಮೂರನೇ ಸೆಷನ್‌ನ ಕೊನೆಯಲ್ಲಿ ಬ್ರಾಥ್‌ವೇಟ್ ವಿಕೆಟ್ ಪತನವಾಗುತ್ತಿದ್ದಂತೆಯೇ ಆಸ್ಟ್ರೇಲಿಯಾ ತಂಡವು ನಾಟಕೀಯ ಕುಸಿತ ಕಂಡಿತು.  ಬ್ರಾಥ್‌ವೇಟ್ 19 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರೆ, ಸಮರ್ಥ್‌ ಬ್ರೂಕ್ಸ್‌ 8, ಜೇರಮಿ ಬ್ಲಾಕ್‌ವುಡ್ 3 ಹಾಗೂ ಡೆವೊನ್ ಥಾಮಸ್ ಅಲ್ಪಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಸದ್ಯ ಆರಂಭಿಕ ಬ್ಯಾಟರ್‌ ತೇಜ್‌ನರೈನ್ ಚಂದ್ರಪಾಲ್ ಅಜೇಯ 47 ಹಾಗೂ ಆಂಡ್ರಸನ್ ಫಿಲಿಫ್‌ ಒಂದು ರನ್ ಬಾರಿಸಿ ಮೂರನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.

Ind vs Ban: ಸತತ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೆ ಶಾಕ್, ಮತ್ತಿಬ್ಬರು ತಾರಾ ಆಟಗಾರರು ಔಟ್..?

ಬೃಹತ್ ಮೊತ್ತ ಕಲೆಹಾಕಿದ ಆಸ್ಟ್ರೇಲಿಯಾ: ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಆಸ್ಟ್ರೇಲಿಯಾ ತಂಡವು ಆರಂಭಿಕ ಆಘಾತದ ಹೊರತಾಗಿಯೂ ಮೊದಲ ದಿನದಾಟದಂತ್ಯದ ವೇಳೆಗೆ 3 ವಿಕೆಟ್ ಕಳೆದುಕೊಂಡು 330 ರನ್‌ ಬಾರಿಸಿತ್ತು. ಇನ್ನು ಎರಡನೇ ದಿನ ಚುರುಕಿನ ಬ್ಯಾಟಿಂಗ್ ನಡೆಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಚಚ್ಚಿದ ಮಾರ್ನಸ್ ಲಬುಶೇನ್, ಇದೀಗ ಅಡಿಲೇಡ್ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಮಾರ್ನಸ್ ಲಬುಶೇನ್‌ 163 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು ಮಧ್ಯಮ ಕ್ರಮಾಂಕದ ಬ್ಯಾಟರ್‌ ಟ್ರಾವಿಸ್ ಹೆಡ್‌ 175 ರನ್ ಬಾರಿಸಿ  ರನೌಟ್ ಆಗಿ ಪೆವಿಲಿಯನ್‌ ಸೇರಿದರು. ಇನ್ನು ಕೊನೆಯಲ್ಲಿ ವಿಕೆಟ್‌ ಕೀಪರ್ ಬ್ಯಾಟರ್ ಅಲೆಕ್ಸ್‌ ಕ್ಯಾರಿ ಅಜೇಯ 41  ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು ಐನೂರರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ವೆಸ್ಟ್ ಇಂಡೀಸ್ ತಂಡದ ಪರ ವೇಗಿ ಅಲ್ಜೆರಿ ಜೋಸೆಫ್ 2 ಹಾಗೂ ಡೆವೊನ್ ಥಾಮಸ್ 2 ವಿಕೆಟ್ ಪಡೆದರೆ, ಕ್ರೆಗ್ ಬ್ರಾಥ್‌ವೇಟ್ ಹಾಗೂ ಜೇಸನ್ ಹೋಲ್ಡರ್ ತಲಾ ಒಂದೊಂದು ವಿಕೆಟ್ ಪಡೆದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?