ಆರ್‌ಸಿಬಿ ಬೌಲಿಂಗ್ ಲಾಭ ಪಡೆದುಕೊಂಡ ಸನ್‌ರೈಸರ್ಸ್ ಹೈದರಾಬಾದ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ 287 ರನ್ ಸಿಡಿಸಿದೆ. ಈ ಮೂಲಕ ಗರಿಷ್ಠ ರನ್ ಸಿಡಿಸಿದ ದಾಖಲೆ ಬರೆದಿದೆ. ಆದರೆ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಚೇಸಿಂಗ್ ತಂಡಕ್ಕೆ ಹೆಚ್ಚಿನ ಅಡ್ವಾಂಟೇಜ್ ಹೆಚ್ಚಿರುವ ಕಾರಣ ಈ ಪಂದ್ಯದಲ್ಲಿ ಬೌನ್ಸ್ ಬ್ಯಾಕ್ ಮಾಡಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ
ಬೆಂಗಳೂರು(ಏ.15) 5 ಪಂದ್ಯಗಳನ್ನು ಆರ್‌ಸಿಬಿ ಸೋತಿದೆ. ಪ್ಲೇ ಆಫ್ ಹಾದಿ ಕಠಿಣವಾಗುತ್ತಿದೆ, ಲೆಕ್ಕಾಚಾರಗಳು ಜೋರಾಗುತ್ತಿದೆ. ಇದರ ನಡುವೆ ಬೌನ್ಸ್ ಬ್ಯಾಕ್ ವಿಶ್ವಾಸದೊಂದಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ವಿರುದ್ಧ ಕಣಕ್ಕಿಳಿದ ಆರ್‌ಸಿಬಿಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಕಾರಣ ಹೊಡಿ ಬಡಿ ಆಟಕ್ಕೆ ಆರ್‌ಸಿಬಿ ಬಳಲಿ ಬೆಂಡಾಗಿತ್ತು. ಟ್ರಾವಿಸ್ ಹೆಡ್ ಅಬ್ಬರಕ್ಕೆ ಆರ್‌ಸಿಬಿ ಬೌಲರ್ ಬಳಿ ಉತ್ತರವೇ ಇರಲಿಲ್ಲ. ಪರಿಣಾಮ ಸನ್‌ರೈಸರ್ಸ್ ಹೈದರಾಬಾದ್ 3 ವಿಕೆಟ್ ನಷ್ಟಕ್ಕೆ 287 ರನ್ ಸಿಡಿಸಿತು. ಇದರೊಂದಿಗೆ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. ತಮ್ಮದೇ ದಾಖಲೆ ಮುರಿದ ಹೈದರಾಬಾದ್ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.
ಐಪಿಎಲ್ ಟೂರ್ನಿಯ ಗರಿಷ್ಠ ಸ್ಕೋರ್
ಎಸ್ಆರ್‌ಹೆಚ್; 287 ರನ್ vs ಆರ್‌ಸಿಬಿ, 2024
ಎಸ್ಆರ್‌ಹೆಚ್; 277 ರನ್ vs ಮುಂಬೈ ಇಂಡಿಯನ್ಸ್, 2024
ಕೆಕೆಆರ್ ; 272 ರನ್ vs ಡಿಸಿ, 2024
undefined
ಟ್ರಾವಿಸ್ ಹೆಡ್ ಶತಕಕ್ಕೆ ಸುಸ್ತಾದ್ರು ಬೌಲರ್ಸ್, ಔಟ್ ಮಾಡೋಕಾಗದೆ ನೊಂದ್ರು ಆರ್‌ಸಿಬಿ ಫ್ಯಾನ್ಸ್!
ಔಟ್ ಮಾಡೋಕಾಗದೆ ನೊಂದ್ರು ಬೌಲರ್ಸ್, ಬಿಸಿಲಿಲ್ಲದಿದ್ದರೂ ಫೀಲ್ಡರ್ಸ್ ಬೆವತರು, ವಿಲ್ಸ್ ಜಾಕ್ಸ್, ರೀಸಿ ಟೊಪ್ಲೆ, ಯಶ್ ಯದಾಳ್, ಲ್ಯೂಕಿ ಫರ್ಗ್ಯೂಸನ್, ವಿಜಯ್ ಕುಮಾರ್ ವೈಶಾಕ್, ಮಹಿಪಾಲ್ ಲೊಮ್ರೊರ್ ಬೌಲಿಂಗ್ ಮಾಡಿ ಸುಸ್ತಾಗಿ ಹೋದರು. ಆದರೆ ಸನ್‌ರೈಸರ್ಸ್ ಅಬ್ಬರ ಮಾತ್ರ ಕಡಿಮೆಯಾಗಲಿಲ್ಲ. ಟ್ರಾವಿಸ್ ಹೆಡ್ ಹಾಗೂ ಅಭಿಷೇಕ್ ಶರ್ಮಾ ನೀಡಿದ ಆರಂಭಕ್ಕೆ ಆರ್‌ಸಿಬಿ ಅಭಿಮಾನಿಗಳು ದಂಗಾಗಿ ಹೋದರು.
ಆರ್‌ಸಿಬಿ ಆರಂಭಿಕ ಹಂತದ ಮೇಲುಗೈ ಸಿಕ್ಕಿದ್ದು 8 ಓವರ್ ಬಳಿಕ. ಅಭಿಷೇಕ್ ಶರ್ಮಾ ವಿಕೆಟ್ ಕಬಳಿಸಿ ಆರ್‌ಸಿಬಿ ಸಂಭ್ರಮಿಸಿತು. ಅಭಿಷೇಕ್ ಶರ್ಮಾ 34 ರನ್ ಸಿಡಿಸಿ ಔಟಾದರು. ಆದರೆ ಹೈದರಾಬಾದ್ ಅಷ್ಟರಲ್ಲೇ 100 ರನ್ ಗಡಿ ದಾಟಿತ್ತು. ಇತ್ತ ಟ್ರಾವಿಸ್ ಹೆಡ್ ಅಬ್ಬರಕ್ಕೆ ದಾಖಲೆ ಪುಡಿಯಾಯಿತು. ಕೇವಲ 39 ಎಸೆತದಲ್ಲಿ ಟ್ರಾವಿಸ್ ಹೆಡ್ ಸೆಂಚುರಿ ಸಿಡಿಸಿದರು.
ಸೆಂಚುರಿ ಸಿಡಿಸಿದ ಬೆನ್ನಲ್ಲೇ ಟ್ರಾವಿಸ್ ಹೆಡ್ ವಿಕೆಟ್ ಪತನಗೊಂಡಿತು. ಆದರೆ ಆರ್‌ಸಿಬಿ ಸಂಭ್ರಮ ಪಡುವ ಸ್ಥಿತಿಯಲ್ಲಿ ಇರಲಿಲ್ಲ. ಕಾರಣ ಹೆನ್ರಿಚ್ ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್ ಆರಂಭಗೊಂಡಿತ್ತು. ಹೆನ್ರಿಚ್ ಮುಟ್ಟಿದ್ದೆಲ್ಲಾ ಸಿಕ್ಸ್. ಆರ್‌ಸಿಬಿ ಬೌಲರ್ಸ್ ಹಾಕಿದ್ದೆಲ್ಲಾ ಬಾಲ್ ಬೌಂಡರಿ ಗೆರೆ ದಾಡುತ್ತಿತ್ತು. ಕೇವಲ 23 ಎಸೆತದಲ್ಲಿ ಹೆನ್ರಿಚ್ ಅರ್ಧಶತಕ ಪೂರೈಸಿದರು.
42ರ ಹರೆಯದಲ್ಲೂ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ ಯಾವ ಭಾರತೀಯನೂ ಮಾಡದ ದಾಖಲೆ ನಿರ್ಮಿಸಿದ ಧೋನಿ..!
ಹನ್ರಿಚ್ ಅಬ್ಬರದ ಬ್ಯಾಟಿಂಗ್ ಮತ್ತೊಂದು ಶತಕದ ಸೂಚನೆಯನ್ನು ನೀಡಿತು. ಹೆನ್ರಿಚ್‌ಗೆ ಆ್ಯಡಿನ್ ಮರ್ಕ್ರಮ್ ಕೂಡ ಸಾಥ್ ನೀಡಿದರು. ಇವರಿಬ್ಬರ ಬ್ಯಾಟಿಂಗ್‌ನಿಂದ ಆರ್‌ಸಿಬಿ ಬೆವತು ಹೋಯಿತು. 31 ಎಸೆತದಲ್ಲಿ 67 ರನ್ ಸಿಡಿಸಿ ಹೆನ್ರಿಚ್ ನಿರ್ಗಮಿಸಿದರು. ಅಷ್ಟರಲ್ಲಾಗಲೆ ಹೈದರಾಬಾದ್ 231 ರನ್ ಸಿಡಿಸಿತ್ತು. ಇನ್ನೂ 3 ಓವರ್ ಬಾಕಿ ಇತ್ತು. ಮರ್ಕ್ರಮ್ ಅಜೇಯ 32 ರನ್ ಹಾಗೂ ಅಬ್ದುಲ್ ಸಮಾದ್ ಅಜೇಯ 37 ರನ್ ಸಿಡಿಸಿದರು. ಈ ಮೂಲಕ 3 ವಿಕೆಟ್ ನಷ್ಟಕ್ಕೆ 287 ರನ್ ಸಿಡಿಸಿದೆ.