ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ದಿನಾಂಕ ನಿಗದಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ದುಬೈ: 2023-25ರ ಟೆಸ್ಟ್ ವಿಶ್ವ ಚಾಂಪಿಯನ್‌ನ ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್‌ನ ಲಾರ್ಡ್ ಕ್ರೀಡಾಂಗಣ ಆತಿಥ್ಯ ವಹಿಸಲಿದೆ ಎಂದು ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಘೋಷಿಸಿದೆ. ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯ 2025ರ ಜೂನ್ 11ರಿಂದ15ರವರೆಗೆ ನಡೆಯಲಿದೆ. ಇನ್ನು ಜೂನ್ 16 ಮೀಸಲು ದಿನವಾಗಿರಲಿದೆ ಎಂದು ತಿಳಿಸಿದೆ.
2019-21ರ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಸೌತಾಂಪ್ಟನ್, 2021-23ರ ಫೈನಲ್‌ಗೆ ಓವರ್ ಕ್ರೀಡಾಂಗಣ ಆತಿಥ್ಯ ವಹಿಸಿತ್ತು. ಸತತ 3ನೇ ಬಾರಿಯೂ ಇಂಗ್ಲೆಂಡ್‌ನ ಕ್ರೀಡಾಂಗಣದಲ್ಲೇ ಟೆಸ್ಟ್ ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಕಳೆದೆರಡು ಚಾಂಪಿಯನ್‌ಶಿಪ್‌ಗಳಲ್ಲಿ ಭಾರತ ಫೈನಲ್ ಗೇರಿತ್ತು. ಆದರೆ ಕ್ರಮವಾಗಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ: ಆದ್ರೆ ಬೆಂಗಳೂರು ಫ್ಯಾನ್ಸ್‌ಗೆ ನಿರಾಸೆ..!
ಈ ಬಾರಿ ಕೂಟದಲ್ಲಿ ಸದ್ಯ ಭಾರತ ಶೇ.68.52 ಗೆಲುವಿನ ಪ್ರತಿಶತದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ(ಶೇ.62.50) 2ನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ (ಶೇ.50.00), ಬಾಂಗ್ಲಾದೇಶ(ಶೇ.45.83), ಇಂಗ್ಲೆಂಡ್ (ಶೇ.45.00) ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಭಾರತ ಮತ್ತೊಮ್ಮೆ ಫೈನಲ್‌ಗೇರುವ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದೆ. ಕಳೆದೆರಡು ಬಾರಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಭಾರತ ಮೂರನೇ ಬಾರಿ ಫೈನಲ್ ಪ್ರವೇಶಿಸಿ ಟೆಸ್ಟ್ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಬಿಸಿಸಿಐ ಆಯ್ಕೆ ಸಮಿತಿಗೆ ಅಜಯ್ ರಾತ್ರಾ ಸೇರ್ಪಡೆ
ನವದೆಹಲಿ: ಅಜಿತ್ ಅಗರ್ಕರ್ ಮುಖ್ಯಸ್ಥರಾಗಿರುವ ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ಸಮಿತಿಗೆ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ ಸೇರ್ಪಡೆಗೊಂಡಿದ್ದಾರೆ. ಅವರು ಪಶ್ಚಿಮ ವಲಯದ ಸಲೀಲ್ ಅಂಕೋಲಾ ಸ್ಥಾನಕ್ಕೆ ಆಯ್ಕೆಯಾಗಿದ್ದಾಗಿ ಮಂಗಳವಾರ ಬಿಸಿಸಿಐ ಮಾಹಿತಿ ನೀಡಿದೆ.
ಸಮಿತಿಯಲ್ಲಿ ವಿವಿಧ 5 ವಲಯಗಳನ್ನು ಪ್ರತಿನಿಧಿಸುವ ಒಟ್ಟು ಐವರು ಇದ್ದಾರೆ. ಅಜಯ್ ಉತ್ತರ ವಲಯದಿಂದ ಆಯ್ಕೆಯಾಗಿದ್ದಾರೆ. 2023ರ ಫೆಬ್ರವರಿಯಲ್ಲಿ ಉತ್ತರ ವಲಯದ ಚೇತನ್ ಶರ್ಮಾ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಬಳಿಕ ಪಶ್ಚಿಮ ವಲಯದ ಅಗರ್ಕರ್ ಸಮಿತಿಗೆ ಆಯ್ಕೆಯಾಗಿ, ಮುಖ್ಯಸ್ಥರಾಗಿದ್ದರು. ಅಗರ್ಕರ್ ಹಾಗೂ ಸಲೀಲ್ ಇಬ್ಬರೂ ಪಶ್ಚಿಮ ವಲಯದವರಾಗಿದ್ದ ಕಾರಣ, ಸದ್ಯ ಸಲೀಲ್‌ರನ್ನು ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ.
ತವರಲ್ಲೇ ಬಾಂಗ್ಲಾದೇಶ ವಿರುದ್ದ ಪಾಕಿಸ್ತಾನಕ್ಕೆ ಸರಣಿ ಸೋಲು! ಪಾಕ್ ತಂಡವನ್ನು ಟ್ರೋಲ್ ಮಾಡಿದ ಆರ್‌ಸಿಬಿ
ಹರ್ಯಾಣದ ಅಜಯ್ 6 ಟೆಸ್ಟ್, 12 ಏಕದಿನ, 90 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದಾರೆ. ದೇಸಿ ಕ್ರಿಕೆಟ್‌ನಲ್ಲಿ ಅಸ್ಸಾಂ, ಪಂಜಾಬ್, ಉತ್ತರ ಪ್ರದೇಶ ತಂಡಗಳಿಗೆ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ.