11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ವೇಳಾಪಟ್ಟಿ ಪ್ರಕಟ: ಆದ್ರೆ ಬೆಂಗಳೂರು ಫ್ಯಾನ್ಸ್‌ಗೆ ನಿರಾಸೆ..!
11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಆರಂಭ ಯಾವಾಗ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಆದರೆ ಬೆಂಗಳೂರು ಕಬಡ್ಡಿ ಫ್ಯಾನ್ಸ್‌ಗೆ ನಿರಾಸೆ ಎದುರಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಮುಂಬೈ: 11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಅಕ್ಟೋಬರ್ 18ರಿಂದ ಆರಂಭಗೊಳ್ಳುವುದಾಗಿ ಟೂರ್ನಿಯ ಆಯೋಜಕರು ಘೋಷಿಸಿದ್ದಾರೆ. ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇನ್ನಷ್ಟೇ ಪ್ರಕಟಗೊಳ್ಳಬೇಕಿದೆ.
ಟೂರ್ನಿ ಈ ಬಾರಿ 3 ನಗರಗಳ ಕ್ಯಾರವಾನ್ ಮಾದರಿಯಲ್ಲಿ ಹೈದರಾಬಾದ್, ನೋಯ್ತಾ ಹಾಗೂ ಪುಣೆಯಲ್ಲಿ ನಡೆಯಲಿವೆ. ಅಕ್ಟೋಬರ್18ರಿಂದ ಹೈದರಾಬಾದ್‌ನಲ್ಲಿ ಪಂದ್ಯಗಳು ಆರಂಭಗೊಳ್ಳಲಿದ್ದು, ಬಳಿಕ ನ.10ರಿಂದ ನೋಯ್ಡಾ ಹಾಗೂ ಡಿ.3ರಿಂದ ಪುಣೆಯಲ್ಲಿ ಆಯೋಜನೆಗೊಳ್ಳಲಿವೆ.
𝗣𝗞𝗟 𝗦𝗲𝗮𝘀𝗼𝗻 𝟭𝟭 𝗸𝗮𝗯 𝗵𝗮𝗶? • Well, here’s the answer 😁
— ProKabaddi (@ProKabaddi) September 3, 2024
Get ready for a dhamakedaar season starting from 18th October 💥#ProKabaddiLeague #ProKabaddi #PKL #PKLSeason11 #PKLonStar pic.twitter.com/eleS4CxvL2
ಬೆಂಗಳೂರಲ್ಲಿಲ್ಲ ಪಂದ್ಯ
ಈ ಹಿಂದಿನ ಬಹುತೇಕ ಎಲ್ಲಾ ಆವೃತ್ತಿ ಗಳಲ್ಲೂ ಬೆಂಗಳೂರಿನಲ್ಲಿ ಪಂದ್ಯಗಳು ನಡೆಯುತ್ತಿದ್ದವು. 2021 ರಲ್ಲಿ ಸಂಪೂರ್ಣ ಲೀಗ್ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿತ್ತು. ಕಳೆದೆರಡು ಬಾರಿಯೂ ಕಂಠೀರವ ಕ್ರೀಡಾಂಗಣ ದಲ್ಲಿ ಪಂದ್ಯಗಳು ನಡೆದಿದ್ದವು. ಈ ಬಾರಿ ಇಲ್ಲ.
ತವರಲ್ಲೇ ಬಾಂಗ್ಲಾದೇಶ ವಿರುದ್ದ ಪಾಕಿಸ್ತಾನಕ್ಕೆ ಸರಣಿ ಸೋಲು! ಪಾಕ್ ತಂಡವನ್ನು ಟ್ರೋಲ್ ಮಾಡಿದ ಆರ್‌ಸಿಬಿ
ಪ್ರೊ ಕಬಡ್ಡಿ: 118 ಆಟಗಾರರು ಹರಾಜು, ಮೊದಲ ಬಾರಿ 8 ಆಟಗಾರರಿಗೆ ₹1 ಕೋಟಿಗಿಂತ ಹೆಚ್ಚು ಮೊತ್ತ!
11ನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ಕೆಲ ದಿನಗಳ ಕೊನೆಗೊಂಡಿದ್ದು, ಒಟ್ಟು 118 ಆಟಗಾರರು 12 ತಂಡಗಳಿಗೆ ಹರಾಜಾಗಿದ್ದಾರೆ. ಪಿಕೆಎಲ್ ಇತಿಹಾಸದಲ್ಲೇ ಮೊದಲ ಬಾರಿ 8 ಆಟಗಾರರು ತಲಾ ₹1 ಕೋಟಿಗಿಂತ ಹೆಚ್ಚು ಮೊತ್ತ ಪಡೆದುಕೊಂಡಿದ್ದಾರೆ.
ಈ ಬಾರಿ ಹರಾಜಿನಲ್ಲಿ ಸಚಿನ್(ತಮಿಳ್ ತಲೈವಾಸ್-₹2.15 ಕೋಟಿ) ಅತ್ಯಂತ ದುಬಾರಿ ಆಟಗಾರನಾಗಿ ಹೊರಹೊಮ್ಮಿದರೆ, ಇರಾನ್‌ನ ಮೊಹಮದ್ ರೆಜಾ ಶಾದ್ಲೂ(ಹರ್ಯಾಣ ಸ್ಟೀಲರ್ಸ್ - ₹2.07) ಅತ್ಯಂತ ದುಬಾರಿ ವಿದೇಶಿ ಆಟಗಾರ ಎನಿಸಿಕೊಂಡರು. ಮೊದಲ ದಿನ ಸಚಿನ್ ಹಾಗೂ ಪರ್ದೀಪ್ ನರ್ವಾಲ್‌ರನ್ನು ತಂಡಕ್ಕೆ ಸೇರಿಸಿಕೊಂಡಿದ್ದ ಬೆಂಗಳೂರು ಬುಲ್ಸ್, 2ನೇ ದಿನ ಜೈ ಭಗವಾನ್‌ರನ್ನು ₹63 ಲಕ್ಷ ನೀಡಿ ಖರೀದಿಸಿತು. ಥಾಯ್ಲೆಂಡ್‌ನ ಹಸುನ್, ಪ್ರಮೋತ್ ಕೂಡಾ ಬುಲ್ಸ್ ಸೇರ್ಪಡೆಗೊಂಡರು. ಹರಾಜಿಗೂ ಮುನ್ನ ಎಲ್ಲಾ ತಂಡಗಳು ಕೆಲ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದವು. ಉಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಿದವು.
ರೋಯಿಂಗ್ ಸ್ಪರ್ಧೆಯ ವೇಳೆ ಮೊಬೈಲ್ ಪತ್ತೆ: ಗೆದ್ದಿದ್ದ ಪದಕವನ್ನೇ ಕಳಕೊಂಡ ಇಟಲಿ ಅಥ್ಲೀಟ್
ಲಂಕಾದಲ್ಲಿ ಯೋಗಾಸನ ಸ್ಪರ್ಧೆ: ರಾಜ್ಯಕ್ಕೆ 18 ಪದಕ
ಕೊಲಂಬೊ: ಇತ್ತೀಚೆಗೆ ಕೊಲಂಬೊದಲ್ಲಿ ವರ್ಲ್ಡ್ ಫಿಟ್‌ನೆಸ್ ಫೆಡರೇಶನ್ ಯೋಗಾಸನ ಸ್ಪೋರ್ಟ್ಸ್ ಇಂಟರ್‌ನ್ಯಾಶನಲ್ ಆಯೋಜಿಸಿದ್ದ ಏಷ್ಯಾ ಪೆಸಿಫಿಕ್ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಯೋಗ ಪಟುಗಳು 10 ಚಿನ್ನ, 6 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದಿದ್ದಾರೆ. ಕೂಟದಲ್ಲಿ ಕರ್ನಾಟಕದ 14 ಮಂದಿ ಸೇರಿ ಭಾರತದ ಒಟ್ಟು 55 ಯೋಗ ಪಟುಗಳು ಪಾಲ್ಗೊಂಡಿದ್ದರು.