
ಅಹಮದಾಬಾದ್(ಮೇ.29): ಭಾರತದ ಮಾಜಿ ಆಟಗಾರ, ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್‌್ಸ ಪರ ಆಡುತ್ತಿರುವ ಅಂಬಟಿ ರಾಯುಡು ಭಾನುವಾರ ಐಪಿಎಲ್‌ಗೆ ವಿದಾಯ ಘೋಷಿಸಿದ್ದಾರೆ. ಕ್ರಿಕೆಟ್‌ಗೆ ವಿದಾಯದ ಬಳಿಕ ರಾಜಕೀಯಕ್ಕೆ ಎಂಟ್ರಿಕೊಡುವುದು ಬಹುತೇಕ ಖಚಿತ ಎನಿಸಿದೆ
ಗುಜರಾತ್ ವಿರುದ್ಧದ ಫೈನಲ್ ಪಂದ್ಯಕ್ಕೂ ಮುನ್ನ ನಿವೃತ್ತಿ ಸುದ್ದಿ ಪ್ರಕಟಿಸಿದ 38 ವರ್ಷದ ರಾಯುಡು, ‘ಈ ಬಾರಿ ಫೈನಲ್ ಐಪಿಎಲ್ನ ನನ್ನ ಕೊನೆ ಪಂದ್ಯ. 14 ಆವೃತ್ತಿ, 11 ಪ್ಲೇ-ಆಫ್, 8 ಫೈನಲ್, 5 ಪ್ರಶಸ್ತಿ...ಇದು ಅದ್ಭುತ ಪಯಣ. ಎಲ್ಲರಿಗೂ ಧನ್ಯವಾದ’ ಎಂದಿದ್ದಾರೆ.
ಅಂಬಟಿ ರಾಯುಡು 2010ರಲ್ಲಿ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ಬಳಿಕ 2017ರವರೆಗೂ ಮುಂಬೈ ಇಂಡಿಯನ್ಸ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದ ರಾಯುಡು, ಮೂರು ಐಪಿಎಲ್ ಟ್ರೋಫಿ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಇದಾದ ಬಳೀಕ 2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡಿಕೊಂಡ ರಾಯುಡು, ಚೆನ್ನೈ ತಂಡವು ಎರಡು ಬಾರಿ ಕಪ್ ಗೆಲ್ಲಲು ಮಹತ್ತರ ಪಾತ್ರವನ್ನು ವಹಿಸಿದ್ದರು.
ಫೈನಲ್ ಪಂದ್ಯ ಹೊರತುಪಡಿಸಿ ಈವರೆಗೆ ಅವರು 203 ಐಪಿಎಲ್ ಪಂದ್ಯಗಳನ್ನಾಡಿದ್ದು, 1 ಶತಕ, 22 ಅರ್ಧಶತಕ ಸೇರಿದಂತೆ 4329 ರನ್ ಕಲೆ ಹಾಕಿದ್ದಾರೆ. ಈ ಬಾರಿ ಅವರು ಚೆನ್ನೈ ಪರ 15 ಪಂದ್ಯಗಳಲ್ಲಿ 139 ರನ್ ಸಿಡಿಸಿದ್ದಾರೆ.
ರಾಯುಡು ರಾಜಕೀಯ ಎಂಟ್ರಿ: ಕೆಲದಿನಗಳ ಹಿಂದಷ್ಟೇ ಅಂಬಟಿ ರಾಯುಡು, ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗಮೋಹನ್ ರೆಡ್ಡಿ ಅವರನ್ನು ಟ್ವೀಟ್‌ವೊಂದರಲ್ಲಿ ಕೊಂಡಾಡಿದ್ದರು. ಕಳೆದ ಬುಧವಾರ ಶ್ರೀಕಕುಲಂ ಜಿಲ್ಲೆಯ ನೌಪದಾ ಸಭಾದಲ್ಲಿ ಆಂಧ್ರ ಮುಖ್ಯಮಂತ್ರಿ ಮಾಡಿದ ಭಾಷಣವನ್ನು ರಾಯುಡು ಗುಣಗಾನ ಮಾಡಿದ್ದರು. " ನಮ್ಮ ಮುಖ್ಯಮಂತ್ರಿ ಜಗನ್ ಅವರ ಮಾತುಗಳು ಅದ್ಭುತವಾಗಿದ್ದವು. ರಾಜ್ಯದ ಪ್ರತಿಯೊಬ್ಬರು ನಿಮ್ಮ ಮೇಲೆ ವಿಶ್ವಾಸ ಹಾಗೂ ನಂಬಿಕೆಯಿಟ್ಟಿದ್ದಾರೆ ಸರ್ ಎಂದು ರಾಯುಡು ಟ್ವೀಟ್ ಮಾಡಿ, ಆಂಧ್ರ ಸಿಎಂ ಪರ ಬ್ಯಾಟ್ ಬೀಸಿದ್ದರು. ಇದೀಗ ಕ್ರಿಕೆಟ್ ಬಳಿಕ ರಾಯುಡು ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಮೊದಲು ಕೆಲವು ಬಾರಿ ಅಂಬಟಿ ರಾಯುಡು, ತಾವು ಸಮಾಜಕ್ಕಾಗಿ ಸೇವೆ ಮಾಡಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದರು. ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, ತಾವು ಜನರ ಸೇವೆ ಮಾಡಲು ಬಯಸುವುದಾಗಿ ತಿಳಿಸಿದ್ದರು. ಇದೇ ವೇಳೆ ಅವಕಾಶ ಸಿಕ್ಕರೇ ರಾಜಕೀಯ ಪಕ್ಷವನ್ನು ಸೇರಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಅಂಬಟಿ ರಾಯುಡು ತಿಳಿಸಿದ್ದರು. ಇದೀಗ ಕ್ರಿಕೆಟ್ ವೃತ್ತಿಜೀವನದ ಸಂಧ್ಯಾಕಾಲದಲ್ಲಿರುವ ಅಂಬಟಿ ರಾಯುಡು 16ನೇ ಆವೃತ್ತಿಯ ಐಪಿಎಲ್ ಬಳಿಕ ಜಗನ್‌ಮೋಹನ್ ರೆಡ್ಡಿ ನೇತೃತ್ವದ YSRCP ಪಕ್ಷ ಸೇರುವ ಸಾಧ್ಯತೆಯಿದೆ ಎನ್ನುವ ಚರ್ಚೆ ಜೋರಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.