ಟೆಸ್ಟ್‌ ವಿಶ್ವಕಪ್‌ ಫೈನಲ್‌: ಋತುರಾಜ್ ಔಟ್, ಸ್ಪೋಟಕ ಬ್ಯಾಟರ್ ಯಶಸ್ವಿಗೆ ಜಾಕ್‌ಪಾಟ್

By Naveen KodaseFirst Published May 29, 2023, 9:48 AM IST
Highlights

ಟೆಸ್ಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತ-ಆಸ್ಟ್ರೇಲಿಯಾ ಫೈಟ್
ಭಾರತ ಮೀಸಲು ಆಟಗಾರನಾಗಿ ಸ್ಥಾನ ಪಡೆದ ಯಶಸ್ವಿ ಜೈಸ್ವಾಲ್
ಟೆಸ್ಟ್ ವಿಶ್ವಕಪ್ ಜೂನ್ 07ರಿಂದ ಆರಂಭ
 

ದುಬೈ(ಮೇ.29): ಮುಂಬರುವ ಜೂನ್ 7ರಿಂದ ಲಂಡನ್‌ನ ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಭಾರತ ಹಾಗೂ ಆಸ್ಪ್ರೇಲಿಯಾ ತಂಡಗಳು ಅಂತಿಮ 15 ಆಟಗಾರರ ಪಟ್ಟಿಪ್ರಕಟಿಸಿವೆ. ಈ ಮೊದಲು ಹೆಚ್ಚುವರಿ ಆಟಗಾರರನ್ನು ಒಳಗೊಂಡ ತಂಡ ಪ್ರಕಟಿಸಿದ್ದ ತಂಡಗಳಿಗೆ ಅಂತಿಮ 15ರ ಪಟ್ಟಿಪ್ರಕಟಿಸಲು ಮೇ 28ರ ಗಡುವು ನೀಡಲಾಗಿತ್ತು. ಇದೇ ವೇಳೆ ಮೀಸಲು ಆಟಗಾರರ ಪಟ್ಟಿಯಲ್ಲಿ ಋುತುರಾಜ್‌ ಗಾಯಕ್ವಾಡ್‌ ಬದಲಿಗೆ ಯಶಸ್ವಿ ಜೈಸ್ವಾಲ್‌ ಸ್ಥಾನ ಪಡೆದಿದ್ದಾರೆ. ಗಾಯಕ್ವಾಡ್‌ ಮುಂದಿನ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದು, ತಂಡದಿಂದ ಹೊರಗುಳಿಯಲು ನಿರ್ಧರಿಸಿದ್ದಾಗಿ ತಿಳಿದುಬಂದಿದೆ.

ಚಾಂಪಿಯನ್ ತಂಡಕ್ಕೆ ಸಿಗಲಿದೆ 13.2 ಕೋಟಿ ರುಪಾಯಿ ಬಹುಮಾನ:

2019-21ರ ಚೊಚ್ಚಲ ಆವೃ​ತ್ತಿ​ಯಂತೆಯೇ 2021-23ರ ವಿಶ್ವ ಟೆಸ್ಟ್‌ ಚಾಂಪಿ​ಯ​ನ್‌​ಶಿಪ್‌ನಲ್ಲೂ ಪ್ರಶಸ್ತಿ ವಿಜೇತ ತಂಡಕ್ಕೆ 1.6 ಮಿಲಿ​ಯನ್‌ ಅಮೆರಿಕನ್‌ ಡಾಲ​ರ್‌​(​ಸು​ಮಾರು 13.2 ಕೋಟಿ ರು.) ನಗದು ಬಹು​ಮಾನ ಸಿಗ​ಲಿದೆ ಎಂದು ಐಸಿಸಿ ಶುಕ್ರ​ವಾರ ತಿಳಿ​ಸಿದೆ. ಜೂನ್‌ 7ರಿಂದ ಭಾರತ ಹಾಗೂ ಆಸ್ಪ್ರೇ​ಲಿಯಾ ನಡುವೆ ಟೆಸ್ಟ್ ವಿಶ್ವಕಪ್ ಫೈನಲ್‌ ಪಂದ್ಯ ನಡೆ​ಯ​ಲಿದ್ದು, ರನ್ನ​ರ್‌-ಅಪ್‌ ತಂಡ 8 ಲಕ್ಷ ಅಮೆರಿಕನ್‌ ಡಾಲ​ರ್‌(ಸು​ಮಾರು 6.6 ಕೋಟಿ ರು.) ಪಡೆ​ದು​ಕೊ​ಳ್ಳ​ಲಿದೆ ಎಂದು ಐಸಿಸಿ ಮಾಹಿತಿ ನೀಡಿದೆ.

WTC Final: ಟೆಸ್ಟ್ ವಿಶ್ವಕಪ್ ಚಾಂಪಿಯನ್‌ ತಂಡಕ್ಕೆ ಸಿಗಲಿದೆ ಕೋಟ್ಯಾಂತರ ರುಪಾಯಿ ಬಹುಮಾನ..!

ಕಳೆದ ಆವೃತ್ತಿಯಲ್ಲಿ ರನ್ನರ್‌ ಅಪ್‌ಗೆ ತೃಪ್ತಿಪಟ್ಟ ಭಾರತ: 2019-21ನೇ ಸಾಲಿನ ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿತ್ತು. ಆದರೆ ಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಎಂಟು ವಿಕೆಟ್‌ ಸೋಲು ಅನುಭವಿಸುವ ಮೂಲಕ ರನ್ನರ್ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 

ಮಹಾರಾಷ್ಟ್ರ ಕ್ರಿಕೆಟರ್‌ ಉತ್ಕರ್ಷ ಪವಾರ್‌ ಜೊತೆ ಋುತುರಾಜ್‌ ಮದುವೆ?

ನವದೆಹಲಿ: ಚೆನ್ನೈ ಸೂಪರ್‌ ಕಿಂಗ್‌್ಸನ ತಾರಾ ಕ್ರಿಕೆಟಿಗ ಋುತುರಾಜ್‌ ಗಾಯಕ್ವಾಡ್‌ ಜೂನ್‌ ಮೊದಲ ವಾರದಲ್ಲಿ ತಮ್ಮ ಬಹು ದಿನಗಳ ಗೆಳತಿ ಉತ್ಕರ್ಷ ಪವಾರ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಉತ್ಕರ್ಷ ಸಹ ಕ್ರಿಕೆಟರ್‌ ಆಗಿದ್ದು, ಮಹಾರಾಷ್ಟ್ರ ತಂಡದ ಪರ ಆಡಲಿದ್ದಾರೆ. ಈ ಇಬ್ಬರು ಜಿಮ್‌ನಲ್ಲಿ ಒಟ್ಟಿಗೆ ತೆಗಿಸಿಕೊಂಡಿದ್ದ ಫೋಟೋ ಕೆಲ ದಿನಗಳ ಹಿಂದೆ ವೈರಲ್‌ ಆಗಿತ್ತು. ವಿವಾಹದ ಕುರಿತು ಹೆಚ್ಚಿನ ವಿವರಗಳನ್ನು ಋುತುರಾಜ್‌ ಅಥವಾ ಅವರ ಕುಟುಂಬಸ್ಥರು ಬಹಿರಂಗಪಡಿಸಿಲ್ಲ.

ಭಾರತ ತಂಡ: ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್‌ ಗಿಲ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ, ಅಜಿಂಕ್ಯ ರಹಾನೆ, ಕೆ.ಎಸ್‌.ಭರತ್‌, ಆರ್‌.ಅಶ್ವಿನ್‌, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್‌, ಶಾರ್ದೂಲ್‌ ಠಾಕೂರ್‌, ಮೊಹಮದ್‌ ಶಮಿ, ಮೊಹಮದ್‌ ಸಿರಾಜ್‌, ಉಮೇಶ್‌ ಯಾದವ್‌, ಜಯದೇವ್‌ ಉನಾದ್ಕತ್‌, ಇಶಾನ್‌ ಕಿಶನ್‌.

ಮೀಸಲು ಆಟಗಾರರು: ಯಶಸ್ವಿ ಜೈಸ್ವಾಲ್‌, ಮುಕೇಶ್‌ ಕುಮಾರ್‌, ಸೂರ್ಯಕುಮಾರ್‌ ಯಾದವ್‌.

ಆಸ್ಪ್ರೇಲಿಯಾ ತಂಡ: ಪ್ಯಾಟ್‌ ಕಮಿನ್ಸ್‌(ನಾಯಕ), ಡೇವಿಡ್‌ ವಾರ್ನರ್‌, ಉಸ್ಮಾನ್‌ ಖವಾಜ, ಮಾರ್ಕಸ್‌ ಹ್ಯಾರಿಸ್‌, ಸ್ಟೀವ್‌ ಸ್ಮಿತ್‌, ಮಾರ್ನಸ್‌ ಲಬುಶೇನ್‌, ಟ್ರ್ಯಾವಿಸ್‌ ಹೆಡ್‌, ಕೆಮರೂನ್‌ ಗ್ರೀನ್‌, ಅಲೆಕ್ಸ್‌ ಕೇರಿ, ಜೋಶ್‌ ಇಂಗ್ಲಿಸ್‌, ಮಿಚೆಲ್‌ ಸ್ಟಾರ್ಕ್, ನೇಥನ್‌ ಲಯನ್‌, ಟಾಡ್‌ ಮರ್ಫಿ, ಸ್ಕಾಟ್‌ ಬೋಲೆಂಡ್‌, ಜೋಶ್‌ ಹೇಜಲ್‌ವುಡ್‌.

ಮೀಸಲು ಆಟಗಾರರು: ಮಿಚೆಲ್‌ ಮಾರ್ಷ್‌, ಮ್ಯಾಟ್‌ ರೆನ್ಶಾ.

click me!