IPL 2021: ಟ್ರೋಫಿ ಗೆದ್ದುಕೊಟ್ಟು ಬದಿಯಲ್ಲಿ ನಿಂತ ಕ್ಯಾಪ್ಟನ್ ಕೂಲ್‌ ಎಂ ಎಸ್ ಧೋನಿ..!

By Suvarna News  |  First Published Oct 16, 2021, 6:59 PM IST

* ಕೆಕೆಆರ್‌ ಮಣಿಸಿ ನಾಲ್ಕನೇ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್‌

* ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯ

* ಟ್ರೋಫಿ ಗೆದ್ದ ಬಳಿಕ ಬದಿಯಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟ ಧೋನಿ


ಬೆಂಗಳೂರು(ಅ.16): ವಿಶ್ವ ಕ್ರಿಕೆಟ್ ಕಂಡ ಕೂಲ್ ಕ್ಯಾಪ್ಟನ್‌ ಮಹೇಂದ್ರ ಸಿಂಗ್ ಧೋನಿ (MS Dhoni) ಮತ್ತೊಮ್ಮೆ ಐಪಿಎಲ್‌ನಲ್ಲಿ ಜಾದೂ ಮಾಡಿದ್ದಾರೆ. 2020ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಬಾರಿಗೆ ಪ್ಲೇ ಆಫ್‌ಗೇರಲು ವಿಫಲವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು (Chennai Super Kings) 2021ರಲ್ಲಿ ಬಲಿಷ್ಠ ತಂಡಗಳಿಗೆ ಮಣ್ಣುಮುಕ್ಕಿಸಿ ಧೋನಿ ಪಡೆ ನಾಲ್ಕನೇ ಬಾರಿಗೆ ಐಪಿಎಲ್ (IPL 2021) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದೆಲ್ಲಕ್ಕಿಂತ ವಿಶಿಷ್ಠವೆನಿಸಿದ್ದು ಧೋನಿಯ ಮ್ಯಾನರಿಸಂ.
 
ಎಂತಹ ಒತ್ತಡದ ಪರಿಸ್ಥಿತಿಯೇ ಇರಲಿ, ತಾಳ್ಮೆಗೆಡದೇ ಮೈದಾನದಲ್ಲಿ ಕೂಲ್ ಆಗಿ ಪರಿಸ್ಥಿತಿಯನ್ನು ನಿಭಾಯಿಸುವ ಧೋನಿಗೆ ಧೋನಿಯೇ ಸಾಟಿ. 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ತಂಡವಾಗಿ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿದ್ದ ಅದೇ ಸಿಎಸ್‌ಕೆ ತಂಡವನ್ನು ಒಂದೇ ವರ್ಷದ ಅಂತರದಲ್ಲಿ ಚಾಂಪಿಯನ್‌ ಪಟ್ಟಕ್ಕೇರಿಸುವುದು ಸುಲಭದ ಮಾತಲ್ಲ. ಒಂದು ವರ್ಷದಲ್ಲಿ ಮೋಯಿನ್ ಅಲಿ (Mooen Ali) ಹಾಗೂ ರಾಬಿನ್ ಉತ್ತಪ್ಪ (Robin Uthappa) ತಂಡ ಸೇರಿಕೊಂಡಿದ್ದು ಬಿಟ್ಟರೆ, ತಂಡದಲ್ಲಿ ಅಂತಹದ್ದೇನು ಮಹತ್ತರ ಬದಲಾವಣೆಗಳಾಗಿರಲಿಲ್ಲ. ಆದರೆ ಧೋನಿ ಎನ್ನುವ ಚಾಣಾಕ್ಷ ನಾಯಕ ತಂತ್ರಗಾರಿಕೆಗೆ ಐಪಿಎಲ್‌ ಕಪ್ ಸಿಎಸ್‌ಕೆ ಪಾಲಾಯಿತು. ಋತುರಾಜ್ ಗಾಯಕ್ವಾಡ್‌, ಫಾಫ್ ಡು ಪ್ಲೆಸಿಸ್‌, ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ (Ravindra Jadeja) ಅವರ ಪ್ರತಿಭೆಯನ್ನು ತಂಡದ ಗೆಲುವಿಗೆ ಬಳಸಿಕೊಳ್ಳುವಲ್ಲಿ ಧೋನಿ ಯಶಸ್ವಯಾದರು. 

2012ರ ಐಪಿಎಲ್‌ ಫಲಿತಾಂಶ 2021ರಲ್ಲಿ ಸಂಪೂರ್ಣ ಉಲ್ಟಾ! ಅಚ್ಚರಿಯಾದ್ರೂ ಇದು ಸತ್ಯ..!

Latest Videos

ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ (Dubai International Stadium) ನಡೆದ ಐಪಿಎಲ್‌ ಫೈನಲ್‌ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ವಿರುದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು 27 ರನ್‌ಗಳ ಅಂತರದ ಗೆಲುವು ಸಾಧಿಸಿತು. ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಧೋನಿ, ತನ್ನ ತಂಡದ ಬಗ್ಗೆ ಮಾತನಾಡುವ ಮುನ್ನ ಎದುರಾಳಿ ತಂಡದ ಪ್ರದರ್ಶನವನ್ನು ಗುಣಗಾನ ಮಾಡುವ ಮೂಲಕ ತಾನೊಬ್ಬ ಶ್ರೇಷ್ಠ ನಾಯಕ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಸಿಎಸ್‌ಕೆ ತಂಡದ ಬಗ್ಗೆ ಮಾತನಾಡುವ ಮುನ್ನ ಕೋಲ್ಕತ ನೈಟ್ ರೈಡರ್ಸ್ ತಂಡದ ಬಗ್ಗೆ ಮಾತನಾಡಲೇ ಬೇಕು. ಮೊದಲಾರ್ಧದಲ್ಲಿ ಕೆಕೆಆರ್ ತಂಡದ ಪ್ರದರ್ಶನದಿಂದ ದ್ವಿತಿಯಾರ್ಧದಲ್ಲಿ ಫೈನಲ್‌ವರೆಗೆ ತಲುವುದು ಸುಲಭ ಸಾಧ್ಯವಲ್ಲ. ಈ ವರ್ಷ ಯಾವುದಾದರೂ ತಂಡ ಐಪಿಎಲ್‌ ಕಪ್ ಎತ್ತಿಹಿಡಿಯುವ ಅರ್ಹತೆ ಹೊಂದಿದೆಯೆಂದರೆ ಅದು ಕೆಕೆಆರ್. ಮೊದಲಾರ್ಧದ ಬಳಿಕ ಸಿಕ್ಕ ಬಿಡುವು ಕೆಕೆಆರ್‌ಗೆ ಅನುಕೂಲವಾಯಿತು ಎಂದೆನಿಸುತ್ತದೆ ಎಂದು ಧೋನಿ ಹೇಳಿದರು.

CSK ವೃದ್ಧರ ಟೀಂ ಎಂದವರಿಗೆ ಗೆಲುವಿನ ಮೂಲಕ ಉತ್ತರಿಸಿದ ಧೋನಿ

ಇದಾದ ಬಳಿಕ ಐಪಿಎಲ್‌ ಟ್ರೋಫಿ ಪಡೆದುಕೊಂಡ ಧೋನಿ, ಸಿಎಸ್‌ಕೆ ಬೌಲರ್‌ ದೀಪಕ್ ಚಹಾರ್ (Deepak Chahar) ಕೈಗಿತ್ತರು. ಬಳಿಕ ಎಂದಿನಂತೆ ಸಹಾಯಕ ಸಿಬ್ಬಂದಿಗಳ ಜತೆ ಮೂಲೆಯಲ್ಲಿ ನಿಂತು ಫೋಟೋಗೆ ಫೋಸ್‌ ನೀಡಿದರು. ಆ ಕ್ಷಣ ಹೇಗಿತ್ತೆಂದರೆ, ಇಗೋ ಟ್ರೋಫಿ, ತಂಡವನ್ನು ಗೆಲ್ಲಿಸಿದ್ದಕ್ಕೆ ಧನ್ಯವಾದಗಳು, ಎಂಜಾಯ್ ಮಾಡಿ ಎನ್ನುವಂತಿತ್ತು.  

ಧೋನಿಯ ಈ ಕ್ಲಾಸ್ ನಡೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

 

Handing the trophy to the team
Moving towards corner for the photograph!

Comeon, this is what msdhoni is known for ❤️❤️❤️❤️ pic.twitter.com/WGlHOJtDrn

— Captain Cool Cults™💛 (@fanboydhoni)

typical dhoni style , handed the trophy to deepak and went to the corner pic.twitter.com/fGSTw3B9EW

— Not so depressed CSK fan (@ashutosh0716)

Picked the Trophy, Handed it to Deepak Chahar & Stood in Corner.
Typical MS Dhoni Things! 👍
.
.
. pic.twitter.com/SpECp5mSQ3

— Cricket Universe (@CricUniverse)

 

 

click me!