
ದುಬೈ(ಅ.16): 16ನೇ ಆವೃತ್ತಿಯ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ (Asia Cup Cricket Tournament) ಯನ್ನು 2023ರಲ್ಲಿ ಪಾಕಿಸ್ತಾನದಲ್ಲಿ ನಡೆಸಲು ಏಷ್ಯನ್ ಕ್ರಿಕೆಟ್ ಸಮಿತಿ(ಎಸಿಸಿ) ದುಬೈನಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ರಮೀಜ್ ರಾಜಾ ಈ ವಿಚಾರವನ್ನು ಖಚಿತಪಡಿಸಿದ್ದಾರೆ
ಬಿಸಿಸಿಐ (BCCI) ಕಾರ‍್ಯದರ್ಶಿ ಜಯ್ ಶಾ (Jay Shah) ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (Pakistan Cricket Board) (ಪಿಸಿಬಿ) ಏಷ್ಯಾಕಪ್ ಕ್ರಿಕೆಟ್ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸದೇ ಪಾಕಿಸ್ತಾನದಲ್ಲೇ ಆಯೋಜಿಸಬೇಕು ಎಂದು ಕೇಳಿಕೊಂಡಿತು. ಬಳಿಕ ಸಭೆಯಲ್ಲಿ ಸರ್ವಾನುಮತದಿಂದ ಪಾಕ್‌ನಲ್ಲೇ ಟೂರ್ನಿ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಯಿತು. ಈ ವಿಚಾರವನ್ನು ಬಿಸಿಸಿಐ ಹಾಗೂ ಪಿಸಿಬಿ (PCB) ಖಚಿತಪಡಿಸಿದೆ. ಟೂರ್ನಿಯ ವೇಳಾಪಟ್ಟಿ ಇನ್ನಷ್ಟೇ ಪ್ರಕಟಿಸಬೇಕಿದೆ. ಏಷ್ಯಾಕಪ್ ಟೂರ್ನಿ ಏಕದಿನ ಮಾದರಿಯಲ್ಲಿ ನಡೆಯಲಿದೆ. 2018ರಲ್ಲಿ ಸಹಾ ಏಷ್ಯಾಕಪ್ ಟೂರ್ನಿಯು ಏಕದಿನ ಮಾದರಿಯಲ್ಲಿಯೇ ನಡೆದಿತ್ತು. ಇನ್ನು 2020ನೇ ಸಾಲಿನ ಏಷ್ಯಾಕಪ್ ಟೂರ್ನಿಯನ್ನು ಕೋವಿಡ್ 19 (COVID 19) ಬಲಿ ಪಡೆದಿತ್ತು.
Good News: ಟೀಂ ಇಂಡಿಯಾ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆ..!
ಪಾಕ್‌ಗೆ ಹೋಗುತ್ತಾ ಭಾರತ?: ಪಾಕಿಸ್ತಾನ 2008ರಲ್ಲಿ ಕೊನೆಯ ಬಾರಿ ಏಷ್ಯಾ ಕಪ್ ಟೂರ್ನಿ ಆಯೋಜಿಸಿತ್ತು. ಆ ಬಳಿಕ ಆತಿಥ್ಯ ಹಕ್ಕು ಪಡೆದರೂ ಭಾರತ, ಪಾಕಿಸ್ತಾನ (Pakistan) ಕ್ಕೆ ತೆರಳಲು ನಿರಾಕರಿಸಿದ ಕಾರಣ ತಟಸ್ಥ ಸ್ಥಳಗಳಲ್ಲಿ ಟೂರ್ನಿ ನಡೆಸಲಾಗಿತ್ತು. 2023ರಲ್ಲೂ ಭಾರತ ಸರ್ಕಾರ ಬಿಸಿಸಿಐಗೆ ಅನುಮತಿ ನೀಡದಿದ್ದರೆ, ಟೂರ್ನಿಯನ್ನು ಸ್ಥಳಾಂತರಗೊಳಿಸಲೇಬೇಕಾದ ಒತ್ತಡಕ್ಕೆ ಎಸಿಸಿ ಒಳಗಾಗಲಿದೆ. ಭಾರತ ತಂಡವನ್ನು ಕೈಬಿಟ್ಟು ಟೂರ್ನಿ ಆಯೋಜಿಸಿದರೆ ಪ್ರಾಯೋಜಕತ್ವದಿಂದ ದೊಡ್ಡ ಮಟ್ಟದ ಆರ್ಥಿಕ ಲಾಭವಾಗುವುದಿಲ್ಲ ಎಂದು ಎಸಿಸಿ ಹಾಗೂ ಪಿಸಿಬಿಗೆ ತಿಳಿದಿದೆ.
2012ರ ಐಪಿಎಲ್ ಫಲಿತಾಂಶ 2021ರಲ್ಲಿ ಸಂಪೂರ್ಣ ಉಲ್ಟಾ! ಅಚ್ಚರಿಯಾದ್ರೂ ಇದು ಸತ್ಯ..!
ಒಂದು ವೇಳೆ ಭಾರತ ಸರ್ಕಾರ ಟೀಂ ಇಂಡಿಯಾ (Team India) ಏಷ್ಯಾಕಪ್ ಆಡಲು ಪಾಕಿಸ್ತಾನಕ್ಕೆ ತೆರಳಲು ಅನುಮತಿ ನೀಡಿದರೆ, ಬರೋಬ್ಬರಿ 17 ವರ್ಷಗಳ ಬಳಿಕ ಪಾಕ್ ಪ್ರವಾಸ ಮಾಡಿದಂತಾಗುತ್ತದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಪಾಕಿಸ್ತಾನದಲ್ಲೇ ಅಂತಾರಾಷ್ಟ್ರೀಯ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ಆಯೋಜನೆಗೊಳ್ಳುತ್ತಿವೆ. ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ವಿಶ್ವ ಇಲೆವನ್ ಹಾಗೂ ಶ್ರೀಲಂಕಾ ತಂಡಗಳು ಕಳೆದ ಕೆಲವು ವರ್ಷಗಳಲ್ಲಿ ಪಾಕಿಸ್ತಾನ ಪ್ರವಾಸವನ್ನು ಮಾಡಿವೆ. ಹೀಗಿದ್ದೂ ಕಳೆದ ತಿಂಗಳು ನ್ಯೂಜಿಲೆಂಡ್ ಪಾಕಿಸ್ತಾನದಲ್ಲಿ ಸೀಮಿತ ಓವರ್‌ಗಳ ಸರಣಿಯನ್ನಾಡಲು ಬಂದಿಳಿದಿತ್ತು. ಆದರೆ ಭದ್ರತೆಯ ಕಾರಣ ನೀಡಿ ಕಿವೀಸ್ ತಂಡವು ಒಂದೂ ಪಂದ್ಯವನ್ನಾಡದೇ ತವರಿಗೆ ವಾಪಾಸ್ಸಾಗಿತ್ತು. ಇದಾದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ (England Cricket Team) ಕೂಡಾ ಪಾಕ್ ಪ್ರವಾಸದಿಂದ ಹಿಂದೆ ಸರಿದಿತ್ತು.
Bio Bubble: ಫೋಟೋ ಮೂಲಕ ಬಯೋ ಬಬಲ್ ಕಷ್ಟ ವಿವರಿಸಿದ ವಿರಾಟ್ ಕೊಹ್ಲಿ
ಇನ್ನು 2022ರಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ (Australia Cricket Team) ವು ಪಾಕಿಸ್ತಾನ ಪ್ರವಾಸವನ್ನು ಕೈಗೊಳ್ಳಲು ವೇಳಾಪಟ್ಟಿ ನಿರ್ಧರಿತವಾಗಿದೆ. ಈ ಸರಣಿ ನಡೆಯುತ್ತಾ ಇಲ್ಲವೋ ಎನ್ನುವುದರ ಬಳಿಕವಷ್ಟೇ ಪಾಕ್‌ನಲ್ಲಿ ಏಷ್ಯಾಕಪ್ ಆಯೋಜನೆಯ ಭವಿಷ್ಯ ನಿರ್ಧಾರವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.