ಆರ್‌ಸಿಬಿ ಅಭಿಮಾನಿಗಳನ್ನು ಬಾಯಿಗೆ ಬಂದಂತೆ ಬೈದು, ಸಿಕ್ಕ ಸಿಕ್ಕಲ್ಲೆಲ್ಲಾ ಧರ್ಮದೇಟು ತಿಂದ ಧೋನಿ ಅಭಿಮಾನಿ!

Published : May 03, 2025, 05:51 PM ISTUpdated : May 03, 2025, 05:53 PM IST
ಆರ್‌ಸಿಬಿ ಅಭಿಮಾನಿಗಳನ್ನು ಬಾಯಿಗೆ ಬಂದಂತೆ ಬೈದು, ಸಿಕ್ಕ ಸಿಕ್ಕಲ್ಲೆಲ್ಲಾ ಧರ್ಮದೇಟು ತಿಂದ ಧೋನಿ ಅಭಿಮಾನಿ!

ಸಾರಾಂಶ

ಧೋನಿ ಅಭಿಮಾನಿಯೊಬ್ಬ ಆರ್‌ಸಿಬಿ ಅಭಿಮಾನಿಗಳನ್ನು ಅವಹೇಳನ ಮಾಡಿದ್ದಕ್ಕೆ ಪ್ರತಿಯಾಗಿ ಆರ್‌ಸಿಬಿ ಅಭಿಮಾನಿಗಳು ಆತನಿಗೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪರಸ್ಪರ ಆರೋಪ-ಪ್ರತ್ಯಾರೋಪಗಳು ಮುಂದುವರೆದಿವೆ.

ಬೆಂಗಳೂರು (ಮೇ 03): ಬೆಂಗಳೂರಿನಲ್ಲಿ ಇಂದು ಸಂಜೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ನಡುವೆ ರೋಚಕ ಐಪಿಎಲ್ ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಸಿಎಸ್‌ಕೆ ತಂಡದ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯೊಬ್ಬ, ಆರ್‌ಸಿಬಿ ತಂಡದ ಕನ್ನಡಾಭಿಮಾನಿಗಳಿಗೆ ಬಾಯಿಗೆ ಬಂದಂತೆ ಅಶ್ಲೀಲ ಪದಗಳನ್ನು ಬಳಸಿ ಬೈದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲಿಯೇ ಆರ್‌ಸಿಬಿಗೆ ಬೈದ ಧೋನಿ ಅಭಿಮಾನಿಯನ್ನು ಸಿಕ್ಕ, ಸಿಕ್ಕಲ್ಲೆಲ್ಲಾ ಹಿಡಿದು ಥಳಿಸುತ್ತಿದ್ದಾರೆ. ಇದೀಗ ಆತನನ್ನು ಥಳಿಸುವ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭವಾದ ನಂತರ ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಹಲವು ರಾಜ್ಯಗಳನ್ನು ಪ್ರತಿನಿಧಿಸುವ ಐಪಿಎಲ್ ತಂಡದ ಭಾಗವಾಗಿದ್ದಾರೆ. ಆದ್ದರಿಂದ ಇಡೀ ಭಾರತ ತಂಡದ ಕ್ರಿಕೆಟಿಗರನ್ನು ಬೆಂಬಲಿಸುತ್ತಿದ್ದ ಅಭಿಮಾನಿಗಳು ಇದೀಗ ತಮ್ಮ ರಾಜ್ಯದಿಂದ ಐಪಿಎಲ್ ಪ್ರತಿನಿಧಿಸುವ ತಂಡಗಳನ್ನು ಹಾಗೂ ಅದರಲ್ಲಿ ಉತ್ತಮವಾಗಿ ಆಟವಾಡುವ ಕ್ರಿಕೆಟಿಗನಿಗೆ ಪ್ರೀತಿ ಮತ್ತು ಅಭಿಮಾನವನ್ನು ತೋರಿಸುತ್ತಿದ್ದಾರೆ. ಇನ್ನು ಕರ್ನಾಟಕವನ್ನು ಪ್ರತಿನಿಧಿಸುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ 18 ವರ್ಷ ಸೋತರೂ ತಂಡಕ್ಕೆ ಭಾರೀ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕಳೆದ 15 ವರ್ಷಗಳಿಂದ 'ಈ ಸಲ ಕಪ್ ನಮ್ದೇ..., ಜೈ ಆರ್‌ಸಿಬಿ' ಎಂಬ ಘೋಷಣೆಗಳು ನಿರಂತರವಾಗಿ ಬರುತ್ತಲೇ ಇವೆ.

ಆದರೆ, ಇದೀಗ ಖಟ್ಟರ್ ಆರ್‌ಸಿಬಿ ಅಭಿಮಾನಿಗಳಿಗೆ ಸಿಎಸ್‌ಕೆ ತಂಡದ ಕ್ಯಾಪ್ಟನ್ ಧೋನಿ ಅಭಿಮಾನಿ ಜಗದೀಶ್ ಎಂ ಗುಡಿಮನಿ,  ವುಮೆನ್ಸ್ ಪ್ರೀಮಿಯರ್ ಲೀಗ್ (ಡಬ್ಲ್ಯೂಪಿಎಲ್‌) ನಡೆಯುವಾಗ ವಿಡಿಯೋ ಮಾಡುತ್ತಾ 'ಏನ್ರಿಪಾ ಆರ್‌ಸಿಬಿ ಬೋ***, ಯಾಕೆ ನಿಮ್ಮ ಲೇಡೀಸ್ ಡಬ್ಲ್ಯೂಪಿಎಲ್ ಟೀಮ್ ಹೊರಗೋಯ್ತೇನು? ಈ ಸಲನೂ ಕಪ್ ನಿಮ್ದೇ ಅಂತೀರಲ್ಲೋ.., ಯುಪಿ ವಾರಿಯರ್ಸ್ ಅವರು ನಿಮಗೆ ಕೈಗೆ ಸರಿಯಾಗಿ *** ಕೊಟ್ಟು ಕಳುಹಿಸಿದ್ದಾರೆ ಎಂದು ಬೈದಿದ್ದಾರೆ. ಈ ವಿಡಿಯೋ ನೋಡಿದ ಮೂವರು ಆರ್‌ಸಿಬಿ ಅಭಿಮಾನಿಗಳು, ವಾಪಸ್ ಬೈದಿದ್ದಾರೆ.
ಪುನಃ ಮೂವರು ಆರ್‌ಸಿಬಿ ಅಭಿಮಾನಿಗಳ ಫೋಟೋವನ್ನು ಹಂಚಿಕೊಂಡು ಅದಕ್ಕೆ, 'ಇಲ್ಲಿ ಕಾಣಿಸ್ತಿದ್ದಾರಲ್ಲ ಈ ಆರ್‌ಸಿಬಿ ಫ್ಯಾನ್ಸ್, ಕಚಡಾ ಪಟ್ಟಿ ಆಯುವ ಸೂ*** ಆಗಿದ್ದಾರೆ. ನನ್ನ ಬಗ್ಗೆ ವಿಡಿಯೋ ಮಾಡಲು ನಿಮಗೆ ಲಾಯಕ್ ಇಲ್ಲ, ನೀವು ಬಾತ್‌ರೂಮ್ ತೊಳೆಯುವವರು ಇದ್ದಂಗಿದ್ದೀರಿ ಎಂದೆಲ್ಲಾ, ತೀರಾ ಅಶ್ಲೀಲವಾಗಿ ಬೈದಿದ್ದರು. 

ಇದಾದ ನಂತರ ಧೋನಿ ಅಭಿಮಾನಿ 'ಜಗದೀಶ್ ಎಂ. ಗುಡಿಮನಿ ಎಂಬ ವ್ಯಕ್ತಿಯನ್ನು ಹುಡುಕಿಕೊಂಡು ಹೋದ ಆರ್‌ಸಿಬಿ ಅಭಿಮಾನಿಗಳು ಕಾರಿನಲ್ಲಿ ಹೋಗುವಾಗ ಹಿಡಿದಿದ್ದಾರೆ. ನಂತರ ಗುಂಪು ಸೇರಿಕೊಂಡು ಚೆನ್ನಾಗಿ ಥಳಿಸಿದ್ದಾರೆ. ಇನ್ನುಮುಂದೆ ಜೀವನದಲ್ಲಿ ಎಂದಿಗೂ ಆರ್‌ಸಿಬಿ ಬಗ್ಗೆ ವಿಡಿಯೋ ಮಾಡುವುದಿಲ್ಲ ಎಂದು ಕಾಲಿಗೆ ಬಿದ್ದು ಬೇಡಿಕೊಳ್ಳುವಂತೆ ಮಾಡಿದ್ದಾರೆ. ಇದರ ಜೊತೆಗೆ ಬೇರೆ ಕಡೆ ಸಿಕ್ಕಿದಾಗಲೂ ಜಗದೀಶನನ್ನು ಹಿಡಿದು ಥಳಿಸಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿವೆ.

ಆರ್‌ಸಿಬಿ ಅಭಿಮಾನಿಗಳಿಗೆ ಬೈದಿದ್ದ ಧೋನಿ ಅಭಿಮಾನಿಗೆ ಥಳಿಸಿದ ವಿಡಿಯೋ ವೈರಲ್ ಆಗುತ್ತಿವೆ. ಅದರಲ್ಲಿ, ಆದಿ ನಾರಾಯಣ ಎನ್ನುವ ವ್ಯಕ್ತಿಯ ವಿರಾಟ್ ಕೊಹ್ಲಿ ಫ್ಯಾನ್ ಆದಿನಾರಾಯಣ ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದಲೂ ಒಂದು ವಿಡಿಯೋ ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ ಒಂದು ದಿನದಲ್ಲಿ ಒಂದು ಮಿಲಿಯನ್‌ಗೂ ಅಧಿಕಲ ವೀಕ್ಷಣೆಗಳು ಹಾಗೂ ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ನೂರಾರು ಜನರು ಕಾಮೆಂಟ್‌ಗಳನ್ನು ಮಾಡಿದ್ದಾರೆ. ಅದರಲ್ಲಿ ಒಬ್ಬರು ನನ್ನ ಆತ್ಮ ಈಗ ತೃಪ್ತಿ ಆಯಿತು ಎಂದು ಹೇಳಿದ್ದಾರೆ. ಇನ್ನು ಕೆಲವರು ನೀವು ಹೊಡೆದಿದ್ದು, ಕಡಿಮೆ ಆಯ್ತು, ಇನ್ನೂ ಹೊಡಿಬೇಕಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ನೀವು ಕರ್ನಾಟಕದವರು ಆಗಿದ್ದುಕೊಂಡು ಸುಮ್ನೆ ಕ್ರಿಕೆಟ್ ನೋಡಿಕೊಂಡು ಇರಬೇಕು. ಅದನ್ನು ಬಿಟ್ಟು ಕರ್ನಾಟಕ ರಾಜ್ಯ ಪ್ರತಿನಿಧಿಸುವ ಆರ್‌ಸಿಬಿ ತಂಡದ ಬಗ್ಗೆ ಮಾತನಾಡೋದು ಯಾಕೆ ಬೇಕಿತ್ತು' ಎಂದು ಬುದ್ಧಿ  ಹೇಳಿದ್ದಾರೆ.

ಇನ್ನು ಈ ಜಗಳದ ಬಗ್ಗೆ ಸಹಿಸಿಕೊಳ್ಳದ ಜಗದೀಶ್ ಮತ್ತೆ ತಮ್ಮ ಮೇಲೆ ಹಲ್ಲೆ ಮಾಡಿದವರನ್ನು ತಿರುಗಿಸಿ ಹೊಡೆಯುವುದಾಗಿ ಮಾತನಾಡಿ ವಿಡಿಯೋ ಮಾಡಿದ್ದಾರೆ. ನನ್ನ ಬೆಂಬಲಕ್ಕೆ ಕೃಷ್ಣಣ್ಣ ನಿಂತಿದ್ದಾರೆ. ನನ್ನೊಂದಿಗೆ ಜಗಳಕ್ಕೆ ಬಂದು ಹಲ್ಲೆ ಮಾಡಿ 20 ರಿಂದ 22 ಜನರು ಇದ್ದೀರಲ್ಲ, ನಿಮ್ಮ ಊರಿಗೆ ಬಂದು ಹೊಡೆಯುತ್ತೇನೆ. ಅದಕ್ಕಾಗಿಯೇ ನಾನು ಸಿದ್ಧತೆ ಮಾಡಿಕೊಂಡಿದ್ದೀನಿ ಎಂದು ಹೇಳಿ ವಿಡಿಯೋ ಹಂಚಿಕೊಂಡಿದ್ದಾನೆ.

ಕ್ರಿಕೆಟ್ ತಂಡ ಅಭಿಮಾನಿಗಳು ಪರ ವಿರೋಧ ಮಾತನಾಡುತ್ತಾ ಹಲ್ಲೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟಕ್ಕೆ ಹೋಗಲಿದ್ದು, ಪೊಲೀಸರು ಕೂಡಲೇ ಸಂಬಂಧಪಟ್ಟ ಆರೋಪಿಗಳನ್ನು ಹಾಗೂ ಅಶ್ಲೀಲವಾಗಿ ಮಾತನಾಡುತ್ತಿರುವ ಆರೋಪಿಯನ್ನೂ ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ