ಶ್ವಾನದ ರೋಚಕ ಫೀಲ್ಡಿಂಗ್, ಬ್ಯೂಟಿಫುಲ್ ಕ್ಯಾಚ್: ಬಿಸಿಸಿಐನಿಂದ ಪಕ್ಕಾ ಕಾಲ್ ಬರುತ್ತೆ ಎಂದ ನೆಟ್ಟಿಗರು

By Anusha Kb  |  First Published Feb 1, 2024, 3:33 PM IST

ನಾವೀಗ ಇಲ್ಲಿ ಶ್ವಾನವೊಂದು ಬಿಂದಾಸ್  ಆಗಿ ಕ್ರಿಕೆಟ್ ಆಡುತ್ತಾ ಫೀಲ್ಡಿಂಗ್ ಮಾಡ್ತಿರುವ  ದೃಶ್ಯದ ಬಗ್ಗೆ ಮಾತನಾಡುತ್ತಿದ್ದು ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ.


ಶ್ವಾನಗಳು ಮನುಷ್ಯನ ಬೆಸ್ಟ್ ಫ್ರೆಂಡ್‌ ಮಕ್ಕಳಿರುವ ಮನೆಯಲ್ಲಿ ಮಕ್ಕಳ ಪ್ರೀತಿಯ ಗೆಳೆಯ, ಮುದ್ದಿನಿಂದ ನೋಡಿಕೊಂಡರೆ ಮಕ್ಕಳ ಆಟ ಊಟ ಎಲ್ಲದರ ಜೊತೆ ಶ್ವಾನ ಜೊತೆಯಾಗುತ್ತದೆ. ಮಕ್ಕಳಂತೆ ಆಟವಾಡುತ್ತದೆ. ಶ್ವಾನಗಳು ಮನುಷ್ಯರಂತೆ ಬುದ್ಧಿವಂತಿಕೆಯಿಂದ ವರ್ತಿಸುವ ಸಾಕಷ್ಟು ವೀಡಿಯೋಗಳನ್ನು ನೀವು ಸಾಮಾಜಿಕ ಜಾಲತಾಣದಲ್ಲಿ ನೋಡಿರುತ್ತೀರಿ ನೋಡುಗರ ಕಣ್ಣಿಗೆ ಹಿತ ನೀಡುವ ಅವುಗಳ ವೀಡಿಯೋಗಳು ಮನಸ್ಸನ್ನು ಹಗುರಾಗಿಸುತ್ತವೆ. ಮನೆಯಲ್ಲೊಂದು ಶ್ವಾನವಿದ್ದರೆ, ಅದರೊಂದಿಗೆ ನೀವು ಸಮಯ ಕಳೆದರೆ ನಿಮಗಿರುವ ಅರ್ಧ ಖಿನ್ನತೆ ಕಳೆದು ಹೋದಂತೆ ಎಂಬುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ.  ಇನ್ನು ಶ್ವಾನಗಳ ಸ್ವಾಮಿನಿಷ್ಠೆಯನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ,  ತನ್ನ ಜೀವ ಕೊಟ್ಟು ಮಾಲೀಕನನ್ನು ರಕ್ಷಿಸಿದ, ಕಾಡು ಪ್ರಾಣಿಗಳಿಂದ ತನ್ನ ಒಡೆಯನನ್ನು ರಕ್ಷಿಸಿದ ಹಲವು ಘಟನೆಗಳು ಈಗಾಗಲೇ ನಡೆದು ಹೋಗಿವೆ. ಹೀಗೆ ಶ್ವಾನಗಳ ಬಗ್ಗೆ ಹೇಳುತ್ತಾ ಹೋದರೆ ಸಾಕಷ್ಟಿದೆ. ಆದರೆ ನಾವೀಗ ಇಲ್ಲಿ ಶ್ವಾನವೊಂದು ಬಿಂದಾಸ್  ಆಗಿ ಕ್ರಿಕೆಟ್ ಆಡುತ್ತಾ ಫೀಲ್ಡಿಂಗ್ ಮಾಡ್ತಿರುವ  ದೃಶ್ಯದ ಬಗ್ಗೆ ಮಾತನಾಡುತ್ತಿದ್ದು ಈ ವೀಡಿಯೋ ಈಗ ಸಖತ್ ವೈರಲ್ ಆಗಿದೆ.

ಇನ್ಸ್ಟಾಗ್ರಾಮ್‌ನಲ್ಲಿ ಈ ಸುಂದರ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ನೋಡುಗರು ಸಾಕಷ್ಟು ತಮಾಷೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಮನೆ ಪಕ್ಕದಲ್ಲೆಲ್ಲೋ ಯುವಕರು ಗಲ್ಲಿ ಕ್ರಿಕೆಟ್ ಆಡುತ್ತಿದ್ದು, ಜೊತೆಯಲ್ಲಿ ಶ್ವಾನವೂ ಇದೆ, ನೀಲಿ ಬಣ್ಣದ್ ಬಟ್ಟೆ ಧರಿಸಿದ ಯುವಕ ಬ್ಯಾಟಿಂಗ್ ಮಾಡುತ್ತಿದ್ದು, ಬೌಲರ್‌  ವೀಡಿಯೋದಲ್ಲಿ ಕಾಣಿಸುತ್ತಿಲ್ಲ, ವಿಕೆಟ್ ಹಿಂದೆ ಒಬ್ಬರು ನಿಂತಿದ್ದು, ಪಕ್ಕದಲ್ಲಿ ಈ ಶ್ವಾನ ಕುಳಿತಿದೆ, ಬ್ಯಾಟ್ ಬೀಸಿದ ಕೂಡಲೇ ತನ್ನತ್ತ ಬಂದ ಚೆಂಡನ್ನು ಗಬಕ್ಕನೇ ಹಾರಿ ಬಾಯಲ್ಲೇ ಶ್ವಾನ ಕ್ಯಾಚ್ ಹಿಡಿದಿದ್ದು, ಶ್ವಾನದ ಈ ಸಧೃಢ ಫೀಲ್ಡಿಂಗ್ ವೀಡಿಯೋ ನೋಡಿದ ಜನ ಮೆಚ್ಚುಗೆಯಿಂದ ಕಾಮೆಂಟ್‌ಗಳ ಸುರಿಮಳೆ ಸುರಿಸಿದ್ದಾರೆ. 

Tap to resize

Latest Videos

ನಾಯಿ ವಾಕಿಂಗ್ ಮಾಡಿಸೋ ಅಭ್ಯಾಸ ಇದ್ಯಾ? ಇದನ್ನೇ ಬ್ಯುಸಿನೆಸ್ ಯಾಕೆ ಮಾಡ್ಬಾರದು?

ಕೆಲವರು ಈ ಶ್ವಾನ ಪಾಕಿಸ್ತಾನ ಫೀಲ್ಡರ್‌ಗಳಿಗಿಂತ ಬೆಟರ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಬಿಸಿಸಿಐನಿಂದ ಶ್ವಾನಕ್ಕೆ 90 ಮಿಸ್‌ಕಾಲ್ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಪಾಕಿಸ್ತಾನದಿಂದ ಫೀಲ್ಡಿಂಗ್ ಕೋಚ್ ಆಗಿ ಬರುವಂತೆ ಈ ಶ್ವಾನಕ್ಕೆ ಕರೆ ಬಂದಿದೆ ಎಂದು ಕಾಮೆಂಟ್ ಮಾಡಿದ್ದಾರೆ, ಹಾಗೆಯೇ ಇನ್ನೊಬ್ಬರು ಶ್ವಾನದ ಲೋಕೇಷನ್ ಯಾವುದು ಎಂದು ಬಿಸಿಸಿಐ ಹುಡುಕಾಡುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಶ್ವಾನ ಬೆಸ್ಟ್ ಫೀಲ್ಡರ್ ಎಂದು ಪ್ರತಿಕ್ರಿಯಿಸಿದ್ದಾರೆ. ಮುಂದಿನ ವಿಶ್ವಕಪ್‌ಗೆ ನಾವು ಈತನನ್ನು ಕರೆದೊಯ್ಯೋಣ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಈತನಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಹೀಗೆ ಈ ಶ್ವಾನದ ಫೀಲ್ಡಿಂಗ್ ನೆಟ್ಟಿಗರನ್ನು ಸಖತ್ ಮೋಡಿ ಮಾಡಿದ್ದು ವೀಡಿಯೋ ಸಖತ್ ವೈರಲ್ ಆಗಿದೆ. 

Abilash Sridhar ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿದ್ದು, ಈಕೆ ಯಾವತ್ತೂ ಕ್ಯಾಚ್ ಮಿಸ್ ಮಾಡುವುದೇ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಆ ಸುಂದರ ವೀಡಿಯೋವನ್ನು ನೀವು ಒಮ್ಮೆ ನೋಡಿ.

ಸಾಯೋ ಮುನ್ನ ತನ್ನೆಲ್ಲ 23 ಕೋಟಿ ರೂ. ಆಸ್ತಿ ಕೊಟ್ಟಿದ್ದು ಇವಳು ಮಕ್ಕಳಿಗಲ್ಲ, ಮೊಮ್ಮಕ್ಕಳಿಗಿಲ್ಲ! ಮತ್ತೆ?

 
 
 
 
 
 
 
 
 
 
 
 
 
 
 

A post shared by Abilash Sridhar (@b_lashh)

 

click me!