Cricket: ಫಿಲ್ಡಿಂಗ್‌ ವೇಳೆ ಡಿಕ್ಕಿ: ಯುವ ಕ್ರಿಕೆಟಿಗನ ತಲೆಗೆ ಬಲವಾದ ಪೆಟ್ಟು!

By Kannadaprabha NewsFirst Published Nov 16, 2021, 8:15 AM IST
Highlights

*ಫಿಲ್ಡಿಂಗ್‌ ಮಾಡುವಾಗ ಡಿಕ್ಕಿ
*ಮೆದುಳಿಗೆ ಬಲವಾದ ಪೆಟ್ಟು
*ಗಂಭೀರ ಗಾಯಗೊಂಡ ಪ್ರಜ್ವಲ್

ಹುಬ್ಬಳ್ಳಿ(ನ.16): ಕೆಎಸ್‌ಸಿಎ (KSCA) ಮೊದಲ ಡಿವಿಷನ್‌ ಕ್ರಿಕೆಟ್‌ (First Division Cricket) ಟೂರ್ನಿಯ ಪಂದ್ಯದ ಫೀಲ್ಡಿಂಗ್‌ನಲ್ಲಿದ್ದ (Fielding) ಆಟಗಾರರು ಪರಸ್ಪರ ಡಿಕ್ಕಿಯಾದ ಪರಿಣಾಮ ಪ್ರಜ್ವಲ್‌ ಶಿರೋಳ (Prajwal Shirol) ಎಂಬಾತ ಪ್ರಜ್ಞಾ ಹೀನನಾಗಿ ಮೈದಾನದಲ್ಲಿ ಕುಸಿದು ಬಿದ್ದ ಘಟನೆ ಶನಿವಾರ (ನ.13) ನಡೆದಿದೆ. ಗಂಭೀರ ಗಾಯಗೊಂಡ ಆತನಿಗೆ ಶಸ್ತ್ರಚಿಕಿತ್ಸೆ (Operation) ನಡೆಸಲಾಗಿದ್ದು, ಸಧ್ಯ ಐಸಿಯುನಲ್ಲಿ (ICU) ಚಿಕಿತ್ಸೆ ಮುಂದುವರಿದಿದ್ದು, ಚೇತರಿಸಿಕೊಂಡಿದ್ದಾರೆ. ಇಲ್ಲಿನ ರಾಜನಗರದ ಮೈದಾನದಲ್ಲಿ ನಡೆಯುತ್ತಿರುವ ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (Hubli Cricket Academy) ‘ಎ’-ಧಾರವಾಡದ ಎಸ್‌ಡಿಎಂ ‘ಬಿ’ ತಂಡಗಳ ನಡುವೆ ಶನಿವಾರ ಪಂದ್ಯದ ವೇಳೆ ದುರ್ಘಟನೆ ನಡೆದಿದೆ.

19ನೇ ಓವರ್‌ನಲ್ಲಿ ಫೀಲ್ಡಿಂಗ್‌ ಮಾಡುವಾಗ ಕವರ್ಸ್‌ (covers) ಹಾಗೂ ಪಾಯಿಂಟ್‌ (Point Fielder) ಕ್ಷೇತ್ರದ ನಡುವೆ ಎಸ್‌ಡಿಎಂ (SDM) ತಂಡದ ಪ್ರಜ್ವಲ್‌ ಶಿರೋಳ ಮತ್ತು ಪ್ರಜ್ವಲ್‌ ಬೋರಣ್ಣನವರ ಡಿಕ್ಕಿಯಾದರು. ಪ್ರಜ್ವಲ್‌ ಶಿರೋಳ ಕಿವಿ ಮತ್ತು ಹಣೆಗೆ ಪ್ರಜ್ವಲ್‌ ಬೋರಣ್ಣನವರ ಮೊಣಕಾಲು ಜೋರಾಗಿ ಬಡಿದ ಪರಿಣಾಮ ಪ್ರಜ್ಞಾ ಹೀನರಾಗಿ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಸ್ಥಳದಲ್ಲಿದ್ದವರು ಪ್ರಜ್ವಲರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಕ್ಯಾ‌ನಿಂಗ್‌ (Scaning) ಮಾಡಿದಾಗ ಮೆದುಳಿಗೆ ಬಲವಾಗಿ ಪೆಟ್ಟು ಬಿದ್ದಿರುವುದು ಕಂಡುಬಂತು. ತಲೆಬುರುಡೆ ಮೆದುಳಿಗೆ (Head Injury) ತಾಕಿತ್ತು. ಹೀಗಾಗಿ ತಕ್ಷಣವೆ ಶಸ್ತ್ರ- ಚಿಕಿತ್ಸೆ ಮಾಡಲಾಗಿದೆ. ಮಂಗಳವಾರದ ವರೆಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸುವುದಾಗಿ ವೈದ್ಯರು ತಿಳಿಸಿದರು.

Indonesia Badminton Tournament : ಸಿಂಧು, ಶ್ರೀಕಾಂತ್‌, ಲಕ್ಷ್ಯಾ ಸೇನ್ ಪದಕದ ಭರವಸೆ!

ಕೆಎಸ್‌ಸಿಎ ಪ್ರಜ್ವಲ ಶಿರೋಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು (Cost) ಭರಿಸಲಿದೆ ಎಂದು ಧಾರವಾಡ (Dharwad) ವಲಯದ ಚೇರಮನ್‌ (Chairman) ವೀರಣ್ಣ ಸವಡಿ ತಿಳಿಸಿದರು. ಈ ಹಿಂದೆ ನಡೆದ 19 ವರ್ಷದ ಒಳಗಿನವರ ವಿಭಾಗದ ರಾಜ್ಯ ಟೂರ್ನಿಯಲ್ಲಿ ಪ್ರಜ್ವಲ ಶಿರೋಳ ಧಾರವಾಡ ವಲಯವನ್ನು ಪ್ರತಿನಿಧಿಸಿದ್ದರು. ಗಂಭೀರ ಗಾಯವಾಗಿದ್ದರೂ ಅದೃಷ್ಟವಶಾತ್‌ ಪ್ರಜ್ವಲ ಚೇತರಿಸಿಕೊಂಡಿದ್ದಾರೆ. ಸಧ್ಯ ಮಾತನಾಡುತ್ತಿದ್ದು, ಕೈಕಾಲು ಅಲುಗಾಡಿಸುತ್ತಿದ್ದಾರೆ ಎಂದರು.

ಸಾವಿನ ವದಂತಿ ಬೆನ್ನಲ್ಲೇ ಚಿನ್ನ ಗೆದ್ದ ನಿಶಾ ದಹಿಯಾ! 

ಬುಧವಾರವಷ್ಟೇ ಗುಂಡೇಟಿನಿಂದ ಮೃತಪಟ್ಟಿದ್ದಾರೆ ಎಂದು ಸುದ್ದಿಯಾಗಿದ್ದ ಅಂಡರ್‌-23 ವಿಶ್ವ ಚಾಂಪಿಯನ್‌ ಕಂಚು ವಿಜೇತೆ ನಿಶಾ ದಹಿಯಾ (Nisha Dahiya) ಗುರುವಾರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ (National Wrestling Championship) ಚಿನ್ನ ಜಯಿಸಿದ್ದಾರೆ. ಮಹಿಳೆಯರ 65 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ನಿಶಾ, ಪಂಜಾಬ್‌ನ (punjab) ಜಸ್‌ಪ್ರೀತ್‌ ಕೌರ್‌ರನ್ನು ಕೇವಲ 30 ಸೆಕೆಂಡ್‌ಗಳಲ್ಲಿ ಮಣಿಸಿ ಚಿನ್ನ (Gold) ಗೆದ್ದುಕೊಂಡರು. ಇದರೊಂದಿಗೆ ನಿಶಾ ದಹಿಯಾ ಸತತ ಎರಡನೇ ಬಾರಿಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ (championship) ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಗೆಲುವಿನ ಬಳಿಕ ಪ್ರತಿಕ್ರಿಯಿಸಿದ ನಿಶಾ, ‘ಹತ್ಯೆ ವದಂತಿ ಬಳಿಕ ನಾನು ತುಂಬಾ ಒತ್ತಡದಲ್ಲಿದೆ. ನಿದ್ರಿಸಲೂ ಸಾಧ್ಯವಾಗಲಿಲ್ಲ. ಆದರೆ ಚಾಂಪಿಯನ್‌ಶಿಪ್‌ ಅಭಿಯಾನ ಉತ್ತಮ ಹಾಗೂ ಸಂತೋಷದಿಂದ ಮುಕ್ತಾಯಗೊಂಡಿದೆ’ ಎಂದಿದ್ದಾರೆ.

National Sports Awards : ನೀರಜ್ ಚೋಪ್ರಾ, ಲೊವ್ಲಿನಾ ಸೇರಿ 12 ಮಂದಿಗೆ ಖೇಲ್ ರತ್ನ ಪ್ರಶಸ್ತಿ ಪ್ರದಾನ!

ಸರ್ಬಿಯಾದ ಬೆಲ್ಗ್ರೇಡ್‌ನಲ್ಲಿ ನವೆಂಬರ್ 05ರಂದು ನಡೆದ ಅಂಡರ್‌-23 ವಿಶ್ವ ಚಾಂಪಿಯನ್‌ ಕ್ರೀಡಾಕೂಟದಲ್ಲಿ 72 ಕೆ.ಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ನಿಶಾ ದಹಿಯಾ ಕಂಚಿನ ಪದಕ ಜಯಿಸಿದ್ದರು. ಇದರ ಬೆನ್ನಲ್ಲೇ ಅಂಡರ್‌-23 ವಿಶ್ವ ಚಾಂಪಿಯನ್‌ ಸ್ಪರ್ಧೆಯಲ್ಲಿ ಪಾಲ್ಗೊಂಡ ಕುಸ್ತಿಪಟುಗಳನ್ನು ಅಭಿನಂದಿಸಿದ್ದರು.

click me!