
ನವದೆಹಲಿ (ಫೆ.22): ಟೀಂ ಇಂಡಿಯಾ (Team India) ಆರಂಭಿಕ ಆಟಗಾರ ಕೆಎಲ್ ರಾಹುಲ್ (KL Rahul) ತಮ್ಮ ಸಹಾಯ ಗುಣದ ಮೂಲಕ ಗಮನಸೆಳೆದಿದ್ದಾರೆ. 11 ವರ್ಷದ ಉದಯೋನ್ಮುಖ ಕ್ರಿಕೆಟಿಗ ಅಪರೂಪದ ರಕ್ತದ ಕಾಯಿಲೆಯಿಂದ ಬಳಲುತ್ತಿದ್ದ. ಈತನಿಗೆ ತುರ್ತು ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ (ಬಿಎಂಟಿ) ಅಗತ್ಯವಿತ್ತು ಅದಕ್ಕಾಗಿ 31 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಮಗನ ಚಿಕಿತ್ಸೆಗಾಗಿ ಒಟ್ಟು 35 ಲಕ್ಷ ರೂಪಾಯಿ ಅಗತ್ಯವಿದ್ದ ಕಾರಣಕ್ಕಾಗಿ ಕಳೆದ ಡಿಸೆಂಬರ್ ನಲ್ಲಿ ವಿಮಾ ಏಜೆಂಟ್ ಆಗಿರುವ ವರದ್ ನಲವಾಡೆ (Varad Nalawade) ಅವರ ತಂದೆ ಸಚಿನ್ (Sachin) ಹಾಗೂ ತಾಯಿ ಸ್ವಪ್ನಾ ಝಾ (Swapna ) ಅಭಿಯಾನ ಆರಂಭಿಸಿದ್ದರು. ಈ ಅಭಿಯಾನಕ್ಕೆ ಕೈಜೋಡಿಸಿದ್ದ ಸಂಸ್ಥೆಯ ಸಂಪರ್ಕ ಬೆಳೆಸಿದ ಕೆಎಲ್ ರಾಹುಲ್ ಟೀಮ್, ವರದ್ ಅವರ ಆರೋಗ್ಯದ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆದು ಹಣಕಾಸಿನ ನೆರವು ನೀಡಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ಐದನೇ ತರಗತಿಯ ಶಾಲಾ ಬಾಲಕ ವರದ್ ನಲವಾಡೆ ಅಪರೂಪದ ರಕ್ತದ ಕಾಯಿಲೆಯಾದ ಅಪ್ಲ್ಯಾಸ್ಟಿಕ್ ಅನೀಮಿಯಾದಿಂದ (aplastic anaemia) ಬಳಲುತ್ತಿದ್ದಾರೆ ಎಂದು ಮುಂಬೈನ ಜಸ್ಲೋಕ್ ಆಸ್ಪತ್ರೆ (Mumbai’s Jaslok Hospital) ತಿಳಿಸಿತ್ತು. ಆ ಬಳಿಕ ಅಲ್ಲಿನ ಹೆಮಟಾಲಜಿಸ್ಟ್‌ಗಳ ಆರೈಕೆಯಲ್ಲಿದ್ದ. ವರದ್ ಅವರ ರಕ್ತದ ಪ್ಲೇಟ್‌ಲೆಟ್ ಮಟ್ಟಗಳು ತುಂಬಾ ಕಡಿಮೆಯಾಗಿದ್ದು, ಅವರ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕುಗಳಿಗೆ ಹೆಚ್ಚು ಒಳಗಾಗುತ್ತದೆ. ಸಾಮಾನ್ಯ ಜ್ವರವೂ ಗುಣವಾಗಲು ತಿಂಗಳುಗಟ್ಟಲೆ ಹಿಡಿಯುತ್ತಿತ್ತು. ವರದ್ ಅವರ ಸ್ಥಿತಿಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಶಾಶ್ವತವಾಗಿ ಉಳಿಯುವ ಚಿಕಿತ್ಸೆ ಎಂದು ವೈದ್ಯರು ಹೇಳಿದ್ದರು.
ರಾಹುಲ್ ಅವರು ಅಗತ್ಯ ಸಂದರ್ಭದಲ್ಲಿ ಮಾಡಿದ ಸಹಾಯದಿಂದ ವರದ್ ಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಪ್ರಸ್ತುತ ಚೇತರಿಕೆಯ ಹಂತದಲ್ಲಿದ್ದಾರೆ. ದೇಣಿಗೆ ಕುರಿತು ಮಾತನಾಡಿದ ರಾಹುಲ್, "ವರದ್ ಅವರ ಸ್ಥಿತಿಯ ಬಗ್ಗೆ ನನಗೆ ತಿಳಿದಾಗ, ನನ್ನ ತಂಡವು ಗಿವ್‌ಇಂಡಿಯಾದೊಂದಿಗೆ ಸಂಪರ್ಕ ಸಾಧಿಸಿತ್ತು. ಇದರಿಂದ ನಾವು ಅವರಿಗೆ ಯಾವುದೇ ರೀತಿಯಲ್ಲಿ ಸಹಾಯ ಮಾಡಬಹುದು ಎನ್ನುವುದನ್ನು ಅರಿತುಕೊಂಡೆವು" ಎಂದು ರಾಹುಲ್ ಹೇಳಿದ್ದಾರೆ.
"ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಮತ್ತು ಅವರು ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ನನಗೆ ಖುಷಿಯಾಗಿದೆ. ವರದ್ ಅವರು ಬೇಗನೆ ಚೇತರಿಸಿಕೊಂಡು ಕ್ರಿಕೆಟ್ ಗೆ ಮರಳುತ್ತಾರೆ ಮತ್ತು ಅವರ ಕನಸುಗಳನ್ನು ನನಸಾಗಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ನನ್ನ ಕೊಡುಗೆಯು ಹೆಚ್ಚು ಹೆಚ್ಚು ಜನರಿಗೆ ಸಹಾಯ ಮಾಡಲು ಪ್ರೇರೇಪಣೆ ನೀಡುತ್ತದೆ ಎಂದು ಭಾವಿಸುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.
“ವರದ್ ಅವರ ಶಸ್ತ್ರಚಿಕಿತ್ಸೆಗೆ ಇಷ್ಟು ದೊಡ್ಡ ಮೊತ್ತವನ್ನು ದೇಣಿಗೆ ನೀಡಿದ ಕೆಎಲ್ ರಾಹುಲ್ ಅವರಿಗೆ ನಾವು ಕೃತಜ್ಞರಾಗಿರುತ್ತೇವೆ. ಆದರೆ ಅವರಿಗೆ ಇಷ್ಟು ಕಡಿಮೆ ಅವಧಿಯಲ್ಲಿ ಬಿಎಂಟಿ ಶಸ್ತ್ರಚಿಕಿತ್ಸೆ ಮಾಡುವುದು ಅಸಾಧ್ಯವಾಗಿತ್ತು. ಆದರೆ, ಇದೆಲ್ಲ ಸಾಧ್ಯವಾಗಿದ್ದು ರಾಹುಲ್ ಅವರಿಂದ' ಎಂದು ವರದ್ ಅವರ ತಾಯಿ ಸ್ವಪ್ನಾ ಹೇಳಿದ್ದಾರೆ.
IPL Player Salaries : ಐಪಿಎಲ್ ಅಂದ್ರೆ ಸುಮ್ನೆ ಅಲ್ಲ, ಇವ್ರು ಕೊಡೋ ಸ್ಯಾಲರಿ ಮುಂದೆ ಬೇರೆ ಟಿ20 ಲೀಗ್ ಇಲ್ಲ!
ರಾಹುಲ್ ಅವರ ದೇಣಿಗೆ ಕುರಿತು ಮಾತನಾಡಿದ ಗಿವ್ಇಂಡಿಯಾ ಸಿಒಒ ಸುಮಿತ್ ತಯಾಲ್: “ಹುಡುಗ ವರದ್ ಅವರಿಗೆ ಹೊಸ ಜೀವನ ನೀಡಿದ ಕೆಎಲ್ ರಾಹುಲ್ ಅವರ ಉದಾರತೆಗೆ ಕೃತಜ್ಞರಾಗಿದ್ದೇವೆ. ಕೆಎಲ್ ರಾಹುಲ್ ರಂಥ ಕ್ರಿಕೆಟ್ ಐಕಾನ್ ಇಷ್ಟು ದೊಡ್ಡ ಮೊತ್ತವನ್ನು ದೇಣಿಗೆ ನೀಡಿದಾಗ, ಲಕ್ಷಾಂತರ ಇತರ ಜನರಿಗೆ ಇದು ದೇಣಿಗೆ ವಿಚಾರದಲ್ಲಿ ಪ್ರೇರಣೆ ನೀಡುತ್ತದೆ' ಎಂದು ಹೇಳಿದ್ದಾರೆ.
Team India Cricketer ವೆಂಕಟೇಶ್ ಅಯ್ಯರ್ ಕುರಿತಂತೆ ಅಚ್ಚರಿಯ ಹೇಳಿಕೆ ನೀಡಿದ ವಾಸೀಂ ಜಾಫರ್..!
ವರದ್ ಅವರಿಗೆ ಸಹಾಯ ಮಾಡಲು ಟೀಂ ಇಂಡಿಯಾ ಕ್ರಿಕೆಟಿಗ ಬರುತ್ತಾರೆ ಎಂದು ಅವರ ಕುಟುಂಬ ಊಹೆಯನ್ನೇ ಮಾಡಿರಲಿಲ್ಲ. ಭವಿಷ್ಯದಲ್ಲಿ ಟೀಂ ಇಖಡಿಯಾ ಪರವಾಗಿ ಆಡುವ ಆಸೆ ಹೊಂದಿರುವ ವರದ್, ತಮ್ಮ ಜೀವವನ್ನು ಉಳಿಸಿದ ವ್ಯಕ್ತಿಯನ್ನೇ ಅದರ್ಶವಾಗಿಟ್ಟುಕೊಳ್ಳುವ ಅವಕಾಶವನ್ನೂ ಹೊಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.