ಭಾರತ ‘ಎ’ ತಂಡಕ್ಕೆ ರಾಜ್ಯದ ಶ್ರೇಯಾಂಕ ಪಾಟೀಲ್‌

By Suvarna NewsFirst Published Jun 3, 2023, 12:50 PM IST
Highlights

ಎಸಿಸಿ ಉದ​ಯೋ​ನ್ಮುಖ ಮಹಿ​ಳೆ​ಯರ ಏಷ್ಯಾ​ಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡ ಪ್ರಕಟ
ಪ್ರತಿಭಾನ್ವಿತ ಆಟಗಾರ್ತಿ ಶ್ವೇತಾ ಸೆಹ್ರಾ​ವತ್‌ ನಾಯ​ಕಿ​ಯಾಗಿ ಆಯ್ಕೆ
ಭಾರತ 'ಎ' ತಂಡದಲ್ಲಿ ಸ್ಥಾನ ಪಡೆದ ಆರ್‌ಸಿಬಿ ತಾರೆ ಶ್ರೇಯಾಂಕ ಪಾಟೀಲ್

ನವ​ದೆ​ಹ​ಲಿ(ಜೂ.03): ಹಾಂಕಾಂಗ್‌​ನಲ್ಲಿ ಜೂ.12ರಿಂದ ಆರಂಭ​ವಾ​ಗ​ಲಿ​ರುವ ಎಸಿಸಿ ಉದ​ಯೋ​ನ್ಮುಖ ಮಹಿ​ಳೆ​ಯರ ಏಷ್ಯಾ​ಕಪ್‌ ಕ್ರಿಕೆಟ್‌ ಟೂರ್ನಿಗೆ ಬಿಸಿ​ಸಿಐ ಶುಕ್ರ​ವಾರ 14 ಮಂದಿಯ ಭಾರತ ‘ಎ’ ತಂಡ ಪ್ರಕ​ಟಿ​ಸಿದ್ದು, ಕರ್ನಾ​ಟ​ಕದ ಯುವ ಕ್ರಿಕೆ​ಟರ್‌ ಶ್ರೇಯಾಂಕ ಪಾಟೀಲ್‌ ಸ್ಥಾನ ಗಿಟ್ಟಿ​ಸಿ​ಕೊಂಡಿ​ದ್ದಾರೆ. ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಕನ್ನಡತಿ ಶ್ರೇಯಾಂಕ ಪಾಟೀಲ್ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದರು

ಮೂಲತಃ ಕರ್ನಾ​ಟ​ಕದ, ಸದ್ಯ ಹೈದ​ರಾ​ಬಾ​ದ್‌​ನಲ್ಲಿ ನೆಲೆ​ಸಿರುವ ವಿಕೆಟ್ ಕೀಪರ್ ಬ್ಯಾಟರ್ ಮಮತಾ ಮಡಿ​ವಾಳ ಕೂಡಾ ತಂಡಕ್ಕೆ ಆಯ್ಕೆ​ಯಾ​ಗಿ​ದ್ದಾರೆ. ತಂಡಕ್ಕೆ ಶ್ವೇತಾ ಸೆಹ್ರಾ​ವತ್‌ ನಾಯ​ಕಿ​ಯಾಗಿದ್ದಾರೆ. ಭಾರತ ಜೂ.13ಕ್ಕೆ ಹಾಂಕಾಂಗ್‌, ಜೂ.15ಕ್ಕೆ ಥಾಯ್ಲೆಂಡ್‌, ಜೂ.17ಕ್ಕೆ ಪಾಕಿ​ಸ್ತಾನ ವಿರುದ್ಧ ಸೆಣ​ಸಾ​ಡ​ಲಿದೆ. ಟೂರ್ನಿ​ಯಲ್ಲಿ 8 ತಂಡ​ಗಳು ಪಾಲ್ಗೊ​ಳ್ಳ​ಲಿದ್ದು, ಜೂ.21ರಂದು ಫೈನ​ಲ್‌ ನಡೆ​ಯ​ಲಿ​ದೆ.

ಎಸಿಸಿ ಉದ​ಯೋ​ನ್ಮುಖ ಮಹಿ​ಳೆ​ಯರ ಏಷ್ಯಾ​ಕಪ್‌ ಕ್ರಿಕೆಟ್‌ ಟೂರ್ನಿಗೆ ಭಾರತ ತಂಡ:

ಶ್ವೇತಾ ಸೆಹ್ರಾವತ್(ನಾಯಕಿ), ಸೌಮ್ಯಾ ತಿವಾರಿ(ಉಪನಾಯಕಿ), ತ್ರಿಶಾ ಗೊಂಗಾಡಿ, ಮುಸ್ಕಾನ್ ಮಲಿಕ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಉಮಾ ಚೆಟ್ರಿ(ವಿಕೆಟ್ ಕೀಪರ್), ಮಮತಾ ಮಡಿವಾಳ(ವಿಕೆಟ್ ಕೀಪರ್), ತಿತಾಸ್ ಸಂಧು, ಸೊಪ್ಪಂದಂಡಿ ಯಶಾರಿ, ಕಶಾವೀ ಗೌತಮ್, ಪರ್ಶಾವಿ ಚೋಪ್ರಾ, ಮನ್ನತ್ ಕಶ್ಯಪ್, ಬಿ ಅನುಷಾ.

ಏಕದಿನ: ಲಂಕಾ ವಿರುದ್ಧ ಆಫ್ಘನ್‌ಗೆ 6 ವಿಕೆಟ್‌ ಜಯ

ಹಂಬನ್‌ತೋಟಾ: ಏಕದಿನ ವಿಶ್ವಕಪ್‌ ಅರ್ಹತಾ ಟೂರ್ನಿಗೆ ಸಿದ್ಧತೆ ನಡೆಸುವ ಉದ್ದೇಶದಿಂದ ಅಷ್ಘಾನಿಸ್ತಾನ ವಿರುದ್ಧ ತವರಲ್ಲಿ 3 ಪಂದ್ಯಗಳ ಏಕದಿನ ಸರಣಿ ಆಡುತ್ತಿರುವ ಶ್ರೀಲಂಕಾಕ್ಕೆ ಹಿನ್ನಡೆ ಉಂಟಾಗಿದೆ. ಶುಕ್ರವಾರ ನಡೆದ ಮೊದಲ ಪಂದ್ಯದಲ್ಲಿ ಆಫ್ಘನ್‌ 6 ವಿಕೆಟ್‌ ಜಯ ಸಾಧಿಸಿತು.

WTC Final: ಆಸೀಸ್‌ಗೆ ಭಾರತೀಯ ಸ್ಪಿನ್ನರ್‌ಗಳದ್ದೇ ತಲೆಬಿಸಿ..!

ಚರಿತ್‌ ಅಸಲಂಕಾ ಅವರ 91 ರನ್‌ ಆಟದ ನೆರವಿನಿಂದ ಲಂಕಾ 50 ಓವರಲ್ಲಿ 268ಕ್ಕೆ ಆಲೌಟ್‌ ಆಯಿತು. ಇಬ್ರಾಹಿಂ ಜದ್ರಾನ್‌ 98, ರಹಮತ್‌ ಶಾ 55 ರನ್‌ ಗಳಿಸಿ ತಂಡ 46.5 ಓವರಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿ ತಲುಪಲು ನೆರವಾದರು.

ನಮೀಬಿಯಾ ವಿರುದ್ಧ ರಾಜ್ಯಕ್ಕೆ 9 ವಿಕೆಟ್‌ ಜಯ

ವಿಂಡ್ಹೋಕ್‌: ನಮೀಬಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕರ್ನಾಟಕ ತಂಡ 9 ವಿಕೆಟ್‌ ಜಯ ಸಾಧಿಸಿ, 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್‌ ಮಾಡಿದ ನಮೀಬಿಯಾ, 41.1 ಓವರಲ್ಲಿ 171 ರನ್‌ಗೆ ಆಲೌಟ್‌ ಆಯಿತು. ಜಾನ್‌ ಫ್ರೈಲಿಂಗ್‌ 57 ರನ್‌ ಗಳಿಸಿದರೆ, ವಿದ್ವತ್‌ ಕಾವೇರಪ್ಪ 8.1 ಓವರಲ್ಲಿ 16 ರನ್‌ಗೆ 4, ರಿಶಿ ಬೋಪಣ್ಣ 9 ಓವರಲ್ಲಿ 34 ರನ್‌ಗೆ 3 ವಿಕೆಟ್‌ ಕಿತ್ತರು. 

ಕರ್ನಾಟಕ 35.5 ಓವರಲ್ಲಿ 1 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ನಾಯಕ ಆರ್‌.ಸಮರ್ಥ್‌ ಔಟಾಗದೆ 78, ನಿಕಿನ್‌ ಜೋಸ್‌ ಔಟಾಗದೆ 56, ಎಲ್‌.ಆರ್‌.ಚೇತನ್‌ 37(3 ಬೌಂಡರಿ, 4 ಸಿಕ್ಸರ್‌) ರನ್‌ ಸಿಡಿಸಿದರು.

ಕ್ರಿಕೆಟಿಗ ಋುತುರಾಜ್‌ಗೆ ಇಂದು ಮದುವೆ ಸಂಭ್ರಮ

ಪುಣೆ: ಭಾರತದ ಕ್ರಿಕೆಟಿಗ ಋುತುರಾಜ್‌ ಗಾಯಕ್ವಾಡ್‌ ಶನಿವಾರ ತಮ್ಮ ಬಹುದಿನಗಳ ಪ್ರೇಯಸಿ, ಮಹಾರಾಷ್ಟ್ರ ಕ್ರಿಕೆಟರ್‌ ಉತ್ಕರ್ಷ ಪವಾರ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಗುರುವಾರವೇ ಸಂಪ್ರದಾಯಗಳು ಶುರುವಾಗಿದ್ದು, ಮೆಹೆಂದಿ ಕಾರ‍್ಯಕ್ರಮದ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿವೆ.

click me!