ಮಹೇಂದ್ರ ಸಿಂಗ್ ಧೋನಿ ತಮ್ಮ ಕ್ರಿಕೆಟ್ ಪ್ರಾಕ್ಟೀಸ್ ಮುಗಿಸಿದ ಬಳಿಕ ತಮ್ಮ Yamaha RD350 ಬೈಕ್‌ನಲ್ಲಿ ಲಿಫ್ಟ್ ಕೊಡುವ ಮೂಲಕ ಜೀವನದಲ್ಲಿ ಎಂದೆಂದೂ ಅವಿಸ್ಮರಣೀಯವಾಗಿ ಉಳಿಯುವಂತೆ ಗಿಫ್ಟ್ ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ರಾಂಚಿ(ಸೆ.15): ಸಿಂಪ್ಲಿಸಿಟಿಗೆ ಮತ್ತೊಂದು ಹೆಸರೇ ಧೋನಿ ಎನ್ನುವಂತೆ ಟೀಂ ಇಂಡಿಯಾ ಮಾಜಿ ನಾಯಕ ಜೀವನ ಸಾಗಿಸುತ್ತಿದ್ದಾರೆ. ವಿಶ್ವ ಕ್ರಿಕೆಟ್ ಕಂಡಂತಹ ದಿಗ್ಗಜ ನಾಯಕ, ಭಾರತಕ್ಕೆ ಮೂರು ಮಾದರಿಯ ಐಸಿಸಿ ಟ್ರೋಫಿ ಗೆದ್ದ ಜಗತ್ತಿನ ಏಕೈಕ ನಾಯಕ ಎನ್ನುವ ಸಾಧನೆ ಮಾಡಿದ್ದರೂ, ಯಾವುದೇ ಹಮ್ಮುಬಿಮ್ಮು ಇಲ್ಲದೇ ಧೋನಿ ತಮ್ಮ ಲೈಫ್ ಲೀಡ್ ಮಾಡುತ್ತಾ ಬಂದಿದ್ದಾರೆ. ಇದೀಗ ಧೋನಿ ಮತ್ತೊಮ್ಮೆ ತಮ್ಮ ಸರಳತೆಯ ಮೂಲಕ ಗಮನ ಸೆಳೆದಿದ್ದು, ಯುವ ಕ್ರಿಕೆಟಿಗನಿಗೆ ತಮ್ಮದೇ ಬೈಕ್‌ನಲ್ಲಿ ಲಿಫ್ಟ್ ನೀಡಿ ಸುದ್ದಿಯಾಗಿದ್ದಾರೆ.
ಹೌದು, ಧೋನಿ ಈಗಾಗಲೇ ಹಲವು ಬಾರಿ ಪ್ಲೈಟ್‌ನಲ್ಲಿ ತಮ್ಮ ಅಭಿಮಾನಿಗಳ ಜತೆ ಸಿಂಪಲ್ ಆಗಿ ವರ್ತಿಸಿದ್ದನ್ನು ನೋಡಿದ್ದೇವೆ. ಅದೇ ರೀತಿ ತಮ್ಮ ಫಾರ್ಮ್ ಹೌಸ್‌ನಲ್ಲಿ ಕೆಲಸ ಮಾಡುವ ನೌಕರರನ್ನು ಫಾರ್ಮ್ ಹೌಸ್‌ನ ಗೇಟ್‌ವರೆಗೂ ತಾವೇ ಡ್ರಾಪ್ ಮಾಡಿರುವ ವಿಡಿಯೋಗಳನ್ನು ನೋಡಿದ್ದೇವೆ. ಇದೀಗ ತಮ್ಮ Yamaha RD350 ಬೈಕ್‌ನಲ್ಲಿ ಯುವ ಕ್ರಿಕೆಟಿಗನೊಬ್ಬನಿಗೆ ಲಿಫ್ಟ್ ಕೊಟ್ಟಿದ್ದಾರೆ. ಈ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ, ರಾಂಚಿಯ ರಸ್ತೆಗಳಲ್ಲಿ ಯುವ ಕ್ರಿಕೆಟಿಗನನ್ನು ತಮ್ಮ ಬೈಕ್‌ನಲ್ಲಿ ಸುತ್ತಾಡಿಸುವ ಮೂಲಕ ಆತನ ಕನಸು ನನಸು ಮಾಡಿದ್ದಾರೆ.
undefined
Asia Cup 2023 ಪಾಕ್ ಹೃದಯ ಭಗ್ನ, ರೋಚಕವಾಗಿ ಫೈನಲ್‌ಗೆ ಲಗ್ಗೆಯಿಟ್ಟ ಲಂಕಾ..!
ಮಹೇಂದ್ರ ಸಿಂಗ್ ಧೋನಿ ತಮ್ಮ ಕ್ರಿಕೆಟ್ ಪ್ರಾಕ್ಟೀಸ್ ಮುಗಿಸಿದ ಬಳಿಕ ತಮ್ಮ Yamaha RD350 ಬೈಕ್‌ನಲ್ಲಿ ಲಿಫ್ಟ್ ಕೊಡುವ ಮೂಲಕ ಜೀವನದಲ್ಲಿ ಎಂದೆಂದೂ ಅವಿಸ್ಮರಣೀಯವಾಗಿ ಉಳಿಯುವಂತೆ ಗಿಫ್ಟ್ ನೀಡಿದ್ದಾರೆ. ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೀಗಿದೆ ನೋಡಿ ಆ ವಿಡಿಯೋ
Nothing to see here. Just living his best semi retired life and a very lucky young cricketer who got a lift on his RD350. 🏍️ pic.twitter.com/EipYkBptsU
— Jharkhand Jatra (@JharkhandJatraa)ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ ಎಸ್ ಧೋನಿ, 2020ರ ಆಗಸ್ಟ್ 15ರಂದು ದಿಢೀರ್ ಎನ್ನುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಇದಾದ ಬಳಿಕ ಕೇವಲ ಐಪಿಎಲ್ ಟೂರ್ನಿಯಲ್ಲಿ ಮಾತ್ರ ಧೋನಿ ಕಣಕ್ಕಿಳಿಯುತ್ತಿದ್ದು, ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಾ ಬಂದಿದ್ದಾರೆ. 2023ರ ಐಪಿಎಲ್ ಟೂರ್ನಿಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ದಾಖಲೆಯ 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗುವ ಮೂಲಕ ಮುಂಬೈ ಇಂಡಿಯನ್ಸ್ ತಂಡವನ್ನು ಸರಿಗಟ್ಟಿತ್ತು. ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡವು ಕೂಡಾ ಐಪಿಎಲ್‌ನಲ್ಲಿ 5 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ.
Davis Cup 2023 ಬಿಸಿಲಿನ ಬೇಗೆ; ಡೇವಿಸ್ ಕಪ್ ಪಂದ್ಯದ ಸಮಯ ಬದಲಾವಣೆ
ಟೀಂ ಇಂಡಿಯಾ ನಾಯಕ ಎಂ ಎಸ್ ಧೋನಿ ಕೆಲ ದಿನಗಳ ಹಿಂದಷ್ಟೇ ತಮ್ಮ ಕುಟುಂಬದ ಜತೆ ಅಮೆರಿಕ ಪ್ರವಾಸ ಕೈಗೊಂಡಿದ್ದರು. ಅಲ್ಲಿ ಯಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಂ ಪಂದ್ಯವನ್ನು ಕಣ್ತುಂಬಿಕೊಂಡಿದ್ದರು. ಧೋನಿಗೆ ಕ್ರಿಕೆಟ್ ಬಳಿಕ ಗಾಲ್ಫ್ ಎರಡನೇ ನೆಚ್ಚಿನ ಕ್ರೀಡೆ ಎನಿಸಿಕೊಂಡಿದೆ. ಈ ಕಾರಣಕ್ಕಾಗಿ ಧೋನಿಗಾಗಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಗಾಲ್ಫ್ ಪಂದ್ಯವನ್ನು ಆಯೋಜಿಸಿದ್ದರು. ಈ ಫೋಟೋಗಳು ವೈರಲ್ ಆಗಿವೆ. 42 ವರ್ಷದ ಧೋನಿ, ಅಮೆರಿಕ ಪ್ರವಾಸದ ಬಳಿಕ ಇದೀಗ ತವರಿಗೆ ವಾಪಾಸ್ಸಾಗಿದ್ದು, ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದಾರೆ.