ಎಂಪಿ ಆಗಿದ್ರೂ ಐಪಿಎಲ್ ನಲ್ಲಿ ಯಾಕೆ ಕೆಲ್ಸ ಮಾಡ್ತೀರಾ? ಗಂಭೀರ್ ನೀಡಿದ ಉತ್ತರ ಹೀಗಿತ್ತು..!

Published : Jun 04, 2022, 05:52 PM IST
ಎಂಪಿ ಆಗಿದ್ರೂ ಐಪಿಎಲ್ ನಲ್ಲಿ ಯಾಕೆ ಕೆಲ್ಸ ಮಾಡ್ತೀರಾ? ಗಂಭೀರ್ ನೀಡಿದ ಉತ್ತರ ಹೀಗಿತ್ತು..!

ಸಾರಾಂಶ

ಪೂರ್ಣ ಪ್ರಮಾಣದ ರಾಜಕಾರಣಿಯಾಗಿರುವ ನಡುವೆಯೂ ಗೌತಮ್ ಗಂಭೀರ್, ಐಪಿಎಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಸಂಸದರಾಗಿದ್ದ ನಡುವೆಯೂ ಐಪಿಎಲ್ ನಲ್ಲಿ ಯಾಕೆ ಕೆಲಸ ಮಾಡ್ತೀರಾ ಎನ್ನುವ ಪ್ರಶ್ನೆಗೆ ಗೌತಮ್ ಗಂಭೀರ್ ನೀಡಿರುವ ಖಡಕ್ ಉತ್ತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ನವದೆಹಲಿ (ಜೂನ್ 4): ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾದ ಗೌತಮ್ ಗಂಭೀರ್ (Gautam Gambhir), ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ಪೂರ್ಣ ಪ್ರಮಾಣದ ರಾಜಕಾರಣಿಯಾಗಿ ಬದಲಾದರು. ರಾಜಕಾರಣಿಯಾಗಿ ಬದಲಾದರೂ ಅವರು ಕ್ರಿಕೆಟ್ ನೊಂದಿಗೆ ತಮ್ಮ ನಂಟನ್ನು ಇಂದಿಗೂ ಮುಂದುವರಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ (Indian Premier League) ಕಾಮೆಂಟೇಟರ್ ಆಗಿ ಹಾಗೂ ಮೆಂಟರ್ ಆಗಿ ಕಾರ್ಯ ನಿವರ್ಹಿಸುತ್ತಿದ್ದಾರೆ. ಸಂಸದರಾಗಿದ್ದರೂ, ಐಪಿಎಲ್ ಮತ್ತು ಕ್ರಿಕೆಟ್ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪ್ರಶ್ನೆ ಎದುರಾದಾಗ ಗಂಭೀರ್ ನೀಡಿದ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗೌತಮ್ ಗಂಭೀರ್, ಪೂರ್ವ ಡೆಲ್ಲಿ ಲೋಕಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ (Bhartiya Janata Party) ಸಂಸದರಾಗಿದ್ದಾರೆ. ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ರಾಜಕಾರಣಿಯಾಗಿ ಗಾಂಧಿನಗರದಲ್ಲಿ (Gandhi Nagar) ಜನ್ ರಸೋಯಿ ಎನ್ನುವಂಥ ಕಿಚನ್ ಅನ್ನೂ ಆರಂಭಿಸಿದ್ದು, ಇಲ್ಲಿ ಬಡವರಿಗೆ 1 ರೂಪಾಯಿಗೆ ಉತ್ತಮ ಊಟ ಸಿಗುವ ವ್ಯವಸ್ಥೆ ಮಾಡಿದ್ದಾರೆ. ಅದರೊಂದಿಗೆ ತಮ್ಮ ಕ್ಷೇತ್ರದಲ್ಲಿ ದೊಡ್ಡ ಗ್ರಂಥಾಲಯವನ್ನೂ ಸ್ಥಾಪನೆ ಮಾಡಿದ್ದಾರೆ.

ಅದರೊಂದಿಗೆ ಕ್ರಿಕೆಟ್ ನಲ್ಲೂ ಅವರು ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಲಿಂಕ್ ಇಟ್ಟುಕೊಂಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 8 ವರ್ಷವಾಗಿರುವ ಹಿನ್ನಲೆಯಲ್ಲಿ ಇತ್ತೀಚೆಗೆ ಗೌತಮ್ ಗಂಭೀರ್ ಸುದ್ದಿಗೋಷ್ಠಿಯನ್ನು ನಡೆಸಿದ್ದರು. ಇದೇ ವೇಳೆ ಅವರಿಗೆ ಸಂಸದರಾಗಿದ್ದರೂ, ಕ್ರಿಕೆಟ್ ಹಾಗೂ ಐಪಿಎಲ್ ಜೊತೆ ಸಂಬಂಧ ಇಟ್ಟುಕೊಂಡಿರುವುದೇಕೆ ಎನ್ನುವ ಪ್ರಶ್ನೆ ಎದುರಾಯಿತು. ಆದರೆ, ಬಡಜನರಿಗಾಗಿ ನಾನು ಮಾಡುತ್ತಿರುವ ಕೆಲಸ ಮುಂದುವರಿಯಬೇಕಾದಲ್ಲಿ, ಐಪಿಎಲ್ ಹಾಗೂ ಕ್ರಿಕೆಟ್ ನ ಜೊತೆ ನಾನು ಮುಂದುವರಿಯಬೇಕಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.


ಜನ್ ರಸೋಯಿಯಲ್ಲಿ ಅಂದಾಜು 5 ಸಾವಿರ ಮಂದಿ ಊಟ ಮಾಡುತ್ತಾರೆ. ಪ್ರತಿ ತಿಂಗಳಿಗೆ ಅದಕ್ಕಾಗಿ 25 ಲಕ್ಷ ರೂಪಾಯಿ ಖರ್ಚಾಗುತ್ತದೆ. ಅಂದರೆ, ವರ್ಷವೊಂದರಲ್ಲಿ 2.75 ಕೋಟಿ ರೂ. ಇದಕ್ಕಾಗಿಯೇ ಬೇಕು. ಇನ್ನು ಗ್ರಂಥಾಲಯ ಸ್ಥಾಪನೆ ಮಾಡುವ ಸಲುವಾಗಿ 25 ಲಕ್ಷ ರೂಪಾಯಿ ನೀಡಿದ್ದೇನೆ. ಈ ಎಲ್ಲಾ ಕಾರಣಗಳಿಂದಾಗಿ ನಾನು ಐಪಿಎಲ್ ಅಥವಾ ಕ್ರಿಕೆಟ್ ಸಂಬಂಧಿತ ಇತರ ಕೆಲಸಗಳಲ್ಲಿ ಭಾಗಿಯಾಗುತ್ತೇನೆ ಎಂದು ಗಂಭೀರ್ ಹೇಳಿದ್ದಾರೆ.

 

ಈ ಎಲ್ಲದಕ್ಕೂ ನಾನು ನನ್ನ ಸ್ವಂತ ಹಣವನ್ನು ಖರ್ಚು ಮಾಡುತ್ತಿದ್ದೇನೆ. ಸಂಸದರ ನಿಧಿಯ ಹಣವನ್ನು ಬಳಕೆ ಮಾಡಿಲ್ಲ. ನಾನು ಮಾಡುತ್ತಿರುವ ಜನ ರಸೋಯಿ ಕಿಚನ್ ಗೆ ಸಂಸದರ ನಿಧಿಯಿಂದ ಹಣ ಸಿಗುವುದಿಲ್ಲ. ಇನ್ನು ನನ್ನ ಮನೆಯಲ್ಲಿ ಯಾವುದೇ ಹಣದ ಮರವಿಲ್ಲ. ಅಂಥದ್ದೇನಾದರೂ ಇದ್ದಿದ್ದರೆ, ಅಲ್ಲಿಂದ ಕಿತ್ತು ಖರ್ಚು ಮಾಡುತ್ತಿದ್ದೆ ಎಂದಿದ್ದಾರೆ.

ಮುಂದೆ ವಿಶ್ವಕಪ್‌ ಇದೆ, ಹನಿಮೂನ್ ವೇಳೆ ಸೊಂಟ ಹುಷಾರು..! ದೀಪಕ್ ಚಹಾರ್ ಕಾಲೆಳೆದ ಸಹೋದರಿ

ನಾನು ಕೆಲಸ ಮಾಡುವುದರಿಂದ ಮಾತ್ರ, ಆ 5000 ಜನರಿಗೆ ಆಹಾರ ನೀಡಲು ಅಥವಾ ಆ ಗ್ರಂಥಾಲಯವನ್ನು ಸ್ಥಾಪಿಸಲು ನನಗೆ ಸಾಧ್ಯವಾಗುತ್ತದೆ. ನಾನು ಕಾಮೆಂಟರಿ ಮಾಡುತ್ತೇನೆ ಮತ್ತು ಐಪಿಎಲ್‌ನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಲು ನನಗೆ ನಾಚಿಕೆ ಇಲ್ಲ. ನಾನು ಮಾಡುವ ಇವೆಲ್ಲವುಗಳ ಅಂತಿಮ ಗುರಿ ಮಾತ್ರ ಎಲ್ಲರಿಗೂ ತಿಳಿದಿದೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.

ಬರೀ ವೇಗವಾಗಿ ಬೌಲಿಂಗ್ ಮಾಡಿದರೆ ಸಾಲದು! ಉಮ್ರಾನ್ ಮಲಿಕ್ ಕಾಲೆಳೆದ ಪಾಕ್ ವೇಗಿ

2022ರ ಐಪಿಎಲ್ ನಲ್ಲಿ ಸಕ್ರಿಯವಾಗಿ ಮಾಡಿದ್ದ ಗೌತಮ್ ಗಂಭೀರ್, ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಫ್ರಾಂಚೈಸಿಯ ತರಬೇತುದಾರರಲ್ಲಿ ಗಂಭೀರ್ ಕೂಡ ಒಬ್ಬರಾಗಿದ್ದರು. ಗಂಭೀರ್ ಅವರ ಮೇಲ್ವಿಚಾರಣೆಯಲ್ಲಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ತನ್ನ ಮೊದಲ ಆವೃತ್ತಿಯ ಐಪಿಎಲ್ ನಲ್ಲಿಯೇ ಪ್ಲೇ ಆಫ್ ಹಂತಕ್ಕೇರುವಲ್ಲಿ ಯಶಸ್ವಿಯಾಗಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಜಯ್‌ ಹಜಾರೆ ಟ್ರೋಫಿ: ಒಂದೂವರೆ ದಶಕದ ಬಳಿಕ ಡೆಲ್ಲಿ ಪರ ವಿರಾಟ್ ಕೊಹ್ಲಿ ಮೈದಾನಕ್ಕೆ! ಬೆಂಗಳೂರಲ್ಲಿ ನಡೆಯುತ್ತೆ ಮ್ಯಾಚ್‌
ಬೆಂಗಳೂರಲ್ಲಿ ಐಪಿಎಲ್‌ ನಡೆಸಲು ಸಂಪುಟ ಅಸ್ತು