ಮುಂದೆ ವಿಶ್ವಕಪ್‌ ಇದೆ, ಹನಿಮೂನ್ ವೇಳೆ ಸೊಂಟ ಹುಷಾರು..! ದೀಪಕ್ ಚಹಾರ್ ಕಾಲೆಳೆದ ಸಹೋದರಿ

Published : Jun 04, 2022, 01:55 PM IST
ಮುಂದೆ ವಿಶ್ವಕಪ್‌ ಇದೆ, ಹನಿಮೂನ್ ವೇಳೆ ಸೊಂಟ ಹುಷಾರು..! ದೀಪಕ್ ಚಹಾರ್ ಕಾಲೆಳೆದ ಸಹೋದರಿ

ಸಾರಾಂಶ

* ಜೂನ್ 01ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ವೇಗಿ ದೀಪಕ್ ಚಹಾರ್ * ಹನಿಮೂನ್‌ ಸಿದ್ದತೆಯಲ್ಲಿರುವ ದೀಪಕ್ ಚಹಾರ್‌ಗೆ ಸಹೋದರಿ ಮಾಲ್ತಿ ಚಹಾರ್ ತುಂಟ ಸಲಹೆ * ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವೇಗಿ ದೀಪಕ್ ಚಹಾರ್

ಜೈಪುರ(ಜೂ.04): ಇತ್ತೀಚೆಗಷ್ಟೇ ಟೀಂ ಇಂಡಿಯಾ ವೇಗದ ಬೌಲರ್ ದೀಪಕ್ ಚಹಾರ್ (Team India Pacer Deepak Chahar), ತಮ್ಮ ಗೆಳತಿ ಜಯ ಭಾರದ್ವಾಜ್ (Jaya Bharadwaj) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೀಗ ಹನಿಮೂನ್‌ (Honeymoon) ಸಿದ್ದತೆಯಲ್ಲಿರುವ ದೀಪಕ್ ಚಹಾರ್‌ಗೆ ಸಹೋದರಿ ಮಾಲ್ತಿ ಚಹಾರ್ ತುಂಟ ಸಲಹೆ ನೀಡುವ ಮೂಲಕ ಎಚ್ಚರಿಯನ್ನು ರವಾನಿಸಿದ್ದಾರೆ. ದೀಪಕ್ ಚಹಾರ್ ಹಾಗೂ ಜಯ ಭಾರದ್ವಾಜ್ ಜೂನ್ 01ರಂದು ವಿವಾಹವಾಗಿದ್ದರು. 2021ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ವೇಳೆ ದೀಪಕ್ ಚಹಾರ್ ಸ್ಟೇಡಿಯಂನಲ್ಲಿದ್ದ ಜಯ ಭಾರದ್ವಾಜ್ ಅವರಲ್ಲಿ ಪ್ರೇಮ ನಿವೇದನೆ ಮಾಡಿದ್ದರು.

ಇನ್ನು 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಬೆಂಗಳೂರಿನಲ್ಲಿ ನಡೆದ ಆಟಗಾರರ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ (Chennai Super Kings) ಫ್ರಾಂಚೈಸಿಯು ಬರೋಬ್ಬರಿ 14 ಕೋಟಿ ರುಪಾಯಿ ನೀಡಿ ದೀಪಕ್ ಚಹಾರ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ವೆಸ್ಟ್ ಇಂಡೀಸ್ ವಿರುದ್ದದ 3ನೇ ಟಿ20 ಪಂದ್ಯದ ವೇಳೆ ದೀಪಕ್ ಚಹಾರ್ ಗಾಯಕ್ಕೆ ತುತ್ತಾಗಿದ್ದರು. ಸೊಂಟ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ದೀಪಕ್ ಚಹಾರ್, ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ಆಗಮಿಸಿದ್ದರು. ಸರಿ ಸುಮಾರು ಒಂದು ತಿಂಗಳುಗಳ ಕಾಲ ಎನ್‌ಸಿಎನಲ್ಲಿ ಸೊಂಟ ನೋವಿನಿಂದ ಚೇತರಿಸಿಕೊಳ್ಳಲು ಸಮಯ ತೆಗೆದುಕೊಂಡರು. 15ನೇ ಆವೃತ್ತಿಯ ಐಪಿಎಲ್ (IPL 2022) ಟೂರ್ನಿಗೂ ಮುನ್ನ ದೀಪಕ್ ಚಹಾರ್ ಚೇತರಿಸಿಕೊಳ್ಳಬಹುದು ಎನ್ನುವ ನಿರೀಕ್ಷೆ ಕೂಡಾ ಹುಸಿಯಾಯಿತು. ಹೀಗಾಗಿ 2022ನೇ ಸಾಲಿನ ಐಪಿಎಲ್ ಟೂರ್ನಿಯಿಂದ ದೀಪಕ್ ಚಹಾರ್ ಹೊರಬಿದ್ದಿದ್ದರು. ಇದಾದ ಬಳಿಕ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಯಿಂದಲೂ ದೀಪಕ್ ಚಹಾರ್ ಹೊರಗುಳಿದಿದ್ದಾರೆ.

ಇನ್ನು ಕೆಲ ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ದೀಪಕ್ ಚಹಾರ್ ಅವರಿಗೆ ಸಹೋದರಿ ಮಾಲ್ತಿ ಚಹಾರ್ (Malti Chahar) ತುಂಟ ಸಲಹೆಯನ್ನು ನೀಡಿದ್ದಾರೆ. ತಮ್ಮ ಸಹೋದರ ದೀಪಕ್ ಚಹಾರ್, ಅತ್ತಿಗೆ ಜಯ ಭಾರದ್ವಾಜ್ ಜತೆಗಿರುವ ಫೋಟೋವನ್ನು ಹಂಚಿಕೊಂಡಿರುವ ಮಾಲ್ತಿ ಚಹಾರ್, ಈಗ ಹುಡುಗಿ ನಮ್ಮವರಾಗಿದ್ದಾರೆ. ನಿಮ್ಮಿಬ್ಬರಿಗೂ ಮದುವೆಯ ಶುಭಾಶಯಗಳು. ದೀಪಕ್ ಚಹಾರ್ ಹನಿಮೂನ್ ವೇಳೆ ಸೊಂಟದ ಬಗ್ಗೆ ಗಮನವಿರಲಿ. ಯಾಕೆಂದರೆ ಮುಂದೆ ವಿಶ್ವಕಪ್‌ ಇದೆ ಎಚ್ಚರ ಎಂದು ಮಾಲ್ತಿ ಚಹಾರ್ ಟ್ವೀಟ್ ಮಾಡಿದ್ದಾರೆ.

ನೀನೇ ನನಗೆ ಸರಿಯಾದ ಜೋಡಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಕ್ ಚಹಾರ್

ಟೀಂ ಇಂಡಿಯಾ ತಲೆನೋವು ಹೆಚ್ಚಿಸಿದ ದೀಪಕ್ ಚಹಾರ್ ಗಾಯದ ಸಮಸ್ಯೆ

ದೀಪಕ್ ಚಹಾರ್ ಇನ್ನೂ ಸಂಪೂರ್ಣವಾಗಿ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಮತ್ತಷ್ಟು ವಾರಗಳ ಕಾಲ ಬಲಗೈ ವೇಗಿ ಕ್ರಿಕೆಟ್‌ನಿಂದ ದೂರ ಉಳಿಯುವ ಸಾಧ್ಯತೆ ದಟ್ಟವಾಗಿದೆ. ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ಆಸ್ಟ್ರೇಲಿಯಾದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಜರುಗಲಿದ್ದು, ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ, ಐರ್ಲೆಂಡ್, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ವಿರುದ್ದ ಟಿ20 ಸರಣಿಯನ್ನು ಆಡಲಿದೆ. ಮುಂಬರುವ ದಿನಗಳು ದೀಪಕ್ ಚಹಾರ್ ಪಾಲಿಗೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡುವ ವಿಚಾರದಲ್ಲಿ ಸಾಕಷ್ಟು ಮಹತ್ವದ್ದಾಗಿದೆ. ಸ್ವಿಂಗ್ ಬೌಲಿಂಗ್ ಸ್ಪೆಷಲಿಸ್ಟ್ ಎನಿಸಿಕೊಂಡಿರುವ ದೀಪಕ್ ಚಹಾರ್ ಗಾಯದ ಸಮಸ್ಯೆ ಟೀಂ ಇಂಡಿಯಾ ತಲೆನೋವು ಹೆಚ್ಚುವಂತೆ ಮಾಡಿದ್ದು, ಆದಷ್ಟು ಬೇಗ ದೀಪಕ್ ಚಹಾರ್ ಗುಣಮುಖರಾಗಿ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?