
ನವದೆಹಲಿ(ಮಾ.23): ಭಾರತದಲ್ಲಿ ಮಾರಕ ಕೊರೋನಾ ವೈರಸ್ ಪ್ರಕರಣ 400ರ ಗಡಿ ದಾಟಿದೆ. ಜನರಲ್ಲಿ ಮನೆಯಿಂದ ಹೊರಬರಬೇಡಿ ಎಂದರೆ ಕೇಳುತ್ತಿಲ್ಲ. ಕರ್ಫ್ಯೂ ಮುಗಿದ ಬೆನ್ನಲ್ಲೇ ಜನರು ಮನೆಯಿಂದ ಹೊರಬಂದಿದ್ದಾರೆ. ಇದೀಗ ಜನರ ನಡತೆಗೆ ಬಿಜೆಪಿ ಎಂಪಿ ಗೌತ್ ಗಂಭೀರ್ ಗರಂ ಆಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಗಂಭೀರ್, ಖಡಕ್ ಸಂದೇಶ ರವಾನಿಸಿದ್ದಾರೆ.
ಕನ್ನಿಕಾ ಕಪೂರ್ ಇದ್ದ ಹೋಟೆಲ್‌ನಲ್ಲೇ ಉಳಿದುಕೊಂಡಿದ್ದರು ಆಫ್ರಿಕಾ ಕ್ರಿಕೆಟಿಗರು..!
ನೀವು ಹೋಗಿ ಹಾಗೂ ನಿಮ್ಮ ಕುಟುಂಬವನ್ನು ಕರೆದೊಯ್ಯಿರಿ. ಅದು ಕ್ವಾರೆಂಟೈನ್ ಅಥವಾ ಜೈಲೋ ಅನ್ನೋದು ನಿರ್ಧರಿಸಿ. ಸಮಾಜದಲ್ಲಿನ ಇತರರಿಗೆ ಸೋಂಕು ಹರಡಬೇಡಿ. ಮನೆಯಲ್ಲೇ ಇರಿ. ನಮ್ಮ ಹೋರಾಟ ಉದ್ಯೋಗ, ಬ್ಯುಸಿನೆಸ್ ಅಲ್ಲ, ಇದು ಬದುಕಿನ ಹೋರಾಟ. ತುರ್ತು ಹಾಗೂ ಅಗತ್ಯ ಸೇವೆ ಭ್ಯವಿದೆ. ಲಾಕ್‌ಡೌನ್..ಜೈ ಹಿಂದ್ ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
ಗಂಭೀರ್ ಈ ರೀತಿ ಗರಂ ಆಗಲೂ ಕಾರಣ ಜನರ ನಿರ್ಲಕ್ಷ್ಯ. ಅದೆಷ್ಟು ಬಾರಿ ಮನವಿ ಮಾಡಿದರೂ ಜನರು ಮಾತ್ರ ಗಂಭೀರವಾಗಿ ತೆಗೆದುಕೊಂಡಿಲ್ಲ. ಕೊರೋನಾ ವೈರಸ್ ಹರಡದಂತೆ ತಡೆಯಲು ಜನರ ಸಂಪರ್ಕ ನಿಲ್ಲಬೇಕು. ಸ್ವಯಂ ದಿಗ್ಬಂಧನದಲ್ಲಿದ್ದರೆ ಸೋಂಕು ಹರಡುವನ್ನು ಕನಿಷ್ಟ ತಡೆಯಬಹುದು. ಆದರೆ ಈ ವಿಚಾರವನ್ನ ಬಹುತೇಕರು ಅರ್ಥ ಮಾಡಿಕೊಂಡಿಲ್ಲ. ಇದೀಗ ಅನಗತ್ಯವಾಗಿ ತಿರುಗಾಡುವವರಿಗೆ ಕಠಿಣ ಶಿಕ್ಷೆ ನೀಡಲು ಪೊಲೀಸ್ ಇಲಾಖೆ ಮುಂದಾಗಿದೆ. ಕನಿಷ್ಠ 2 ವರ್ಷ ಜೈಲು ಶಿಕ್ಷೆಗೂ ಗುರಿಯಾಗಬೇಕಾಗುತ್ತೆ. ಹೀಗಾಗಿ ಗಂಭೀರ್ ಮನೆಯಲ್ಲೇ ಇರುತ್ತೀರೋ ಅಥವಾ ಜೈಲು ಸೇರುತ್ತೀರಾ ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.