ಪಾಕ್ ಪೌರತ್ವ ಪಡೆದ ಬೆನ್ನಲ್ಲೇ ಸ್ಯಾಮಿಗೆ ಕೊರೋನಾ ಶಂಕೆ..!

By Suvarna News  |  First Published Mar 20, 2020, 4:49 PM IST

ಇತ್ತೀಚೆಗಷ್ಟೇ ಪಾಕಿಸ್ತಾನ ಗೌರವ ಪೌರತ್ವ ಪಡೆದ ಡ್ಯಾರನ್ ಸ್ಯಾಮಿಗೆ ಇದೀಗ ಕೊರೋನಾ ವೈರಸ್ ತಗುಲಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.


ಜಮೈಕಾ(ಮಾ.20): ಮದ್ದಿಲ್ಲದ ಮಹಾಮಾರಿ ಎನಿಸಿರುವ ಕೋವಿಡ್ 19 ವೈರಸ್ ಇಡೀ ಜಗತ್ತನ್ನೇ ತಬ್ಬಿಬ್ಬಾಗುವಂತೆ ಮಾಡಿದೆ. ಕೊರೋನಾ ವೈರಸ್ ಭೀತಿ ಕ್ರೀಡಾ ಕ್ಷೇತ್ರಕ್ಕೂ ತಟ್ಟಿದ್ದು, ಈಗಾಗಲೇ ಹಲವು ಟೂರ್ನಿಗಳು ಮುಂದೂಡಲ್ಪಟ್ಟಿವೆ.

ಇಡೀ ಜಗತ್ತನ್ನೇ ಆತಂಕಕ್ಕೆ ದೂಡಿರುವ ಕೊರೋನಾ ವೈರಸ್, ಪಾಕಿಸ್ತಾನ ಸೂಪರ್ ಲೀಗ್ ಮೇಲೂ ಕೆಂಗಣ್ಣು ಬೀರಿದೆ. ಪರಿಣಾಮ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಮುಂದೂಡಲ್ಪಟ್ಟಿವೆ. ವಿದೇಶಿ ಆಟಗಾರನೊಬ್ಬನಿಗೆ ಕೊರೋನಾ ತಗುಲಿದೆ ಎನ್ನುವ ಮಾಹಿತಿ ಆಧರಿಸಿ ಟೂರ್ನಿ ಮುಂದೂಡಲ್ಪಟ್ಟಿದೆ. ಇದೀಗ ಟೂರ್ನಿಯಲ್ಲಿ ಪಾಲ್ಗೊಂಡ ಆಟಗಾರರು, ಸಿಬ್ಬಂದಿ ಸೇರಿದಂತೆ 128 ಮಂದಿಗೆ ಕೊರೋನಾ ತಗುಲಿರುವ ಶಂಕೆ ವ್ಯಕ್ತವಾಗಿತ್ತು.

Tap to resize

Latest Videos

ಖಚಿತವಾಯ್ತು ವಿಂಡೀಸ್‌ ಕ್ರಿಕೆಟಿಗ ಸ್ಯಾಮಿಗೆ ಪಾಕ್‌ ಪೌರತ್ವ..!

ಅದೃಷ್ಠವಶಾತ್ ಬಹುತೇಕ ಎಲ್ಲಾ ಪ್ರಕರಣಗಳು ನೆಗೆಟಿವ್ ಎಂದು ವರದಿಯಾಗಿದೆ. ಆದರೆ ಇತ್ತೀಚೆಗಷ್ಟೇ ಪಾಕಿಸ್ತಾನದ ಗೌರವ ಪೌರತ್ವ ಪಡೆದ ಡ್ಯಾರೆನ್ ಸ್ಯಾಮಿಗೆ ಕೊರೋನಾ ವೈರಸ್ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿತ್ತು. 14 ದಿನಗಳ ಮಟ್ಟಿಗೆ ಪ್ರತ್ಯೇಕವಾಗಿದ್ದು, ಕೊನೆಗೂ ಈಗ ತವರಿಗೆ ಮರಳಿದ್ದರು. ಆದರೆ ಇದೀಗ ಮತ್ತೆ ಡ್ಯಾರನ್ ಸ್ಯಾಮಿ ಹಾಗೂ ಚಾಡ್ವಿಕ್ ವಾಲ್ಟನ್ 14 ದಿನಗಳ ಮಟ್ಟಿಗೆ ಪ್ರತ್ಯೇಕವಾಗಿರಬೇಕಿದೆ.

ಅಂತಾರಾಷ್ಟ್ರೀಯ ಕ್ರಿಕೆಟಿಗನಿಗೂ ತಟ್ಟಿದ ಕೊರೋನಾ ಶಾಕ್..!

ಪೇಶಾವರ್ ಜಲ್ಮಿ ತಂಡದ ಮುಖ್ಯ ಕೋಚ್ ಡ್ಯಾರೆನ್ ಸ್ಯಾಮಿ, ಈಗಷ್ಟೇ ಸೇಂಟ್ ಲೂಸಿಯಾಗೆ ಬಂದಿಳಿದೆ. ನಾನು ಸಮಾಜದಿಂದ ದೂರ ಉಳಿದಿದ್ದೆ, ನಿಯಮಿತವಾಗಿ ಕೈ ತೊಳೆದುಕೊಳ್ಳುತ್ತಿದ್ದೆ. ಮುಖ, ಕೈ, ಮೂಗುಗಳನ್ನು ಮುಟ್ಟಿಕೊಳ್ಳದೇ 14 ದಿನ ಪ್ರತ್ಯೇಕ ಉಳಿದಿದ್ದೆ. ಪಾಕಿಸ್ತಾನ ತೊರೆಯುವ ಮುನ್ನ ನನ್ನ ರಿಸೆಲ್ಟ್ ನೆಗೆಟಿವ್ ಎಂದು ಬಂದಿತು ಎಂದಿದ್ದಾರೆ.

ಇನ್ನು ಕರಾಚಿ ಕಿಂಗ್ಸ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಚಾಡ್ವಿಕ್ ವಾಲ್ಟನ್, 'ತವರಿಗೆ ಮರಳುವುದು ಯಾವಾಗಲೂ ಅದ್ಭುತ ಅನುಭವ. ಆದರೆ ಈ ಬಾರಿ ನನಗೆ ಮಿಶ್ರ ಅನುಭವ ಆಗಿದೆ. ಯಾಕೆಂದರೆ ನಾನೀಗ 14 ದಿನಗಳ ಕಾಲ ಪ್ರತ್ಯೇಕವಾಗಿರಬೇಕಿದೆ' ಎಂದು ಹೇಳಿದ್ದಾರೆ. 
 

ಮಾರ್ಚ್ 20ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!