Hardik Pandya: ಕೇವಲ ಬ್ಯಾಟರ್‌ ಆಗಲು ಬಯಸುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ

Suvarna News   | Asianet News
Published : Feb 02, 2022, 01:15 PM IST
Hardik Pandya: ಕೇವಲ ಬ್ಯಾಟರ್‌ ಆಗಲು ಬಯಸುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ

ಸಾರಾಂಶ

* ಆಲ್ರೌಂಡರ್‌ ಆಗುವತ್ತ ದಿಟ್ಟ ಹೆಜ್ಜೆಯಿಟ್ಟ ಹಾರ್ದಿಕ್ ಪಾಂಡ್ಯ * ನಾನು ಕೇವಲ ಬ್ಯಾಟರ್ ಎನಿಸಿಕೊಳ್ಳಲು ಬಯಸುವುದಿಲ್ಲ ಎಂದ ಆಲ್ರೌಂಡರ್ * ಅಹಮದಾಬಾದ್ ಫ್ರಾಂಚೈಸಿಯು ತನ್ನ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದೆ

ನವದೆಹಲಿ(ಫೆ.02): ಮುಂದಿನ ಐಪಿಎಲ್‌ನಲ್ಲಿ (IPL 2022) ನಾನು ಬೌಲಿಂಗ್ ಮಾಡುವ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಆದರೆ ಇದರ ಬಗ್ಗೆ ನಮ್ಮ ತಂಡಕ್ಕೆ ಸರಿಯಾದ ಮಾಹಿತಿಯಿದೆ ಎಂದು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಹೇಳಿದ್ದಾರೆ. ಕೇವಲ ಬ್ಯಾಟರ್ ಆಗುವುದಕ್ಕಿಂತಲೂ ಆಲ್ರೌಂಡರ್ ಆಗಿ ಆಡಲು ಬಯಸುತ್ತೇನೆ. ಇದು ಸಾಧ್ಯವಾಗದಿದ್ದರೆ ಮಾತ್ರ ಬ್ಯಾಟರ್ ಆಗಿ ಮುಂದುವರಿಯುತ್ತೇನೆ’ ಎಂದಿದ್ದಾರೆ.  

ಮುಂಬರುವ ಐಪಿಎಲ್‌ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಅಹಮದಾಬಾದ್ ಫ್ರಾಂಚೈಸಿಯು ತನ್ನ ತಂಡದ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಾಂಡ್ಯ, ಹೇಗೆ ಉತ್ತಮ ನಾಯಕನಾಗುವುದು ಎನ್ನುವುದರ ಬಗ್ಗೆ ಯಾವುದೇ ಕೈಪಿಡಿ ಇಲ್ಲ. ನಾನು ಯಾವಾಗಲು ಜವಾಬ್ದಾರಿಯನ್ನು ಹೊರಲು ಹಾಗೂ ಹೊಸ ಸವಾಲುಗಳನ್ನು ಸ್ವೀಕರಿಸಲು ಎದುರು ನೋಡುತ್ತಿರುತ್ತೇನೆ. ನಾಯಕನಾಗಿ, ಎಲ್ಲಾ ಆಟಗಾರರಿಗೂ ಅವರದ್ದೇ ಆದ ಸಮಯವನ್ನು ನೀಡಲು ಬಯಸುತ್ತೇನೆ, ಹಾಗೂ ಯಾವುದೇ ವಿಚಾರಗಳನ್ನು ಚರ್ಚಿಸಲು ನನ್ನ ರೂಮ್ ಡೋರ್ ಸದಾ ತೆರೆದಿರುತ್ತದೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಕೆಲವರು ಚೆನ್ನಾಗಿ ಪ್ರದರ್ಶನ ತೋರುತ್ತಿರುತ್ತಾರೆ ಅಂಥವರಿಗೆ ಯಾವುದೇ ನೆರವಿನ ಅಗತ್ಯವಿರುವುದಿಲ್ಲ, ಮತ್ತೆ ಕೆಲವು ಆಟಗಾರರಿಗೆ ನಾಯಕನಿಂದ ಸೂಕ್ತ ಸಲಹೆಯ ಅಗತ್ಯವಿರುತ್ತದೆ. ಅಂತಹವರ ಪಾಲಿಗೆ ನಾನು ಸದಾ ಜತೆಗಿರುತ್ತೇನೆ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ICC U-19 World Cup: ಸೆಮೀಸ್‌ನಲ್ಲಿಂದು ಇಂಡೋ-ಆಸೀಸ್ ಸೆಣಸಾಟ

ಇನ್ನು ತಮ್ಮ ವೈಯುಕ್ತಿಕ ಪ್ರದರ್ಶನದ ಬಗ್ಗೆ ಪ್ರತಿಕ್ರಿಯಿಸಿದ ಪಾಂಡ್ಯ, ಆಲ್ರೌಂಡರ್‌ ಆದರೆ ತಂಡಕ್ಕೆ ಹಲವು ರೀತಿಯಲ್ಲಿ ಪ್ರಯೋಜನವಿದೆ. ಮತ್ತೆ ಆಲ್ರೌಂಡರ್ ಆಗುವತ್ತ ನನ್ನ ಚಿತ್ತ ನೆಟ್ಟಿದ್ದೇನೆ. ಕೇವಲ ಬ್ಯಾಟರ್‌ ಎನಿಸಿಕೊಳ್ಳುವುದಕ್ಕಿಂತ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಲು ಎದುರು ನೋಡುತ್ತೇನೆ ಎಂದು  ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ಪ್ರೇಕ್ಷಕರಿಲ್ಲದೇ ಭಾರತ-ವಿಂಡೀಸ್ ಏಕದಿನ ಸರಣಿ

ಅಹಮದಾಬಾದ್: ಭಾರತ- ವೆಸ್ಟ್‌ಇಂಡೀಸ್ (India vs West Indies) ನಡುವಿನ 3 ಪಂದ್ಯಗಳ ಏಕದಿನ ಸರಣಿ ಪ್ರೇಕ್ಷಕರಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ವಿಚಾರವನ್ನು ಗುಜರಾತ್ ಕ್ರಿಕೆಟ್ ಸಂಸ್ಥೆ(ಜಿಸಿಎ) ಮಂಗಳವಾರ ಖಚಿತಪಡಿಸಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಂದ್ಯಗಳು ಫೆಬ್ರವರಿ 6, 9, 11ಕ್ಕೆ ಮೂರು ಪಂದ್ಯಗಳ ಏಕದಿನ ಸರಣಿಯು ನಡೆಯಲಿವೆ. ಇನ್ನು ಕೋಲ್ಕತಾದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿಗೆ ಶೇ.75 ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ.  

ಕಾಮನ್‌ವೆಲ್ತ್‌ ಕ್ರಿಕೆಟ್‌: ಭಾರತ-ಆಸ್ಟ್ರೇಲಿಯಾ ಮೊದಲ ಪಂದ್ಯ

ದುಬೈ: ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ ಕ್ರಿಕೆಟ್‌ನ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ಆರಂಭಿಕ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ಮಹಿಳಾ ತಂಡಗಳು ಮುಖಾಮುಖಿಯಾಗಲಿವೆ. ಗೇಮ್ಸ್‌ ಜುಲೈ 28ರಿಂದ ಆಗಸ್ಟ್ 8ರವರೆಗೆ ನಡೆಯಲಿದ್ದು, ಟಿ20 ಮಾದರಿಯ ಕ್ರಿಕೆಟ್ ಜುಲೈ 29ಕ್ಕೆ ಆರಂಭವಾಗಲಿದೆ. ಫೈನಲ್ ಪಂದ್ಯ ಅಕ್ಟೋಬರ್ 7ಕ್ಕೆ ನಿಗದಿಯಾಗಿದೆ. ‘ಎ’ ಗುಂಪಿನಲ್ಲಿ ಭಾರತದ ಜೊತೆ ಬಾರ್ಬಡಾಸ್, ಪಾಕಿಸ್ತಾನವಿದ್ದು, ಇಂಗ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ ‘ಬಿ’ ಗುಂಪಿನಲ್ಲಿವೆ.  

ರ‍್ಯಾಂಕಿಂಗ್‌: ಎರಡನೇ ಸ್ಥಾನಕ್ಕೆ ಬಡ್ತಿ ಪಡೆದ ಮಿಥಾಲಿ ರಾಜ್

ದುಬೈ: ಮಂಗಳವಾರ ಬಿಡುಗಡೆಯಾದ ನೂತನ ಏಕದಿನ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಭಾರತದ ನಾಯಕಿ ಮಿಥಾಲಿ ರಾಜ್ (Mithali Raj) 1 ಸ್ಥಾನ ಮೇಲೇರಿ 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಸ್ಮೃತಿ ಮಂಧಾನ 6ನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೌಲಿಂಗ್‌ನಲ್ಲಿ ಜೂಲಾನ್ ಗೋಸ್ವಾಮಿ 2ನೇ ಸ್ಥಾನ ಕಾಯ್ದುಕೊಂಡಿದ್ದು, ದೀಪ್ತಿ ಶರ್ಮಾ ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಒಂದು ಸ್ಥಾನ ಮೇಲಕ್ಕೇರಿ 4ನೇ ಸ್ಥಾನ ಪಡೆದಿದ್ದಾರೆ.  

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?