ಫುಟ್ಬಾಲ್‌ನಂತೆ ಒದ್ದು ರನೌಟ್‌ ಮಾಡಿದ ಮೋರಿಸ್

Suvarna News   | Asianet News
Published : Jan 19, 2020, 03:02 PM IST
ಫುಟ್ಬಾಲ್‌ನಂತೆ ಒದ್ದು ರನೌಟ್‌ ಮಾಡಿದ ಮೋರಿಸ್

ಸಾರಾಂಶ

RCB ಆಲ್ರೌಂಡರ್ ಕ್ರಿಸ್ ಮೋರಿಸ್ ತಮ್ಮ ಅದ್ಭುತ ಕಾಳ್ಚಳಕದ ಮೂಲಕ ರನೌಟ್ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಿಗ್ ಬ್ಯಾಶ್ ಲೀಗ್‌ನಲ್ಲಿ ಸಿಡ್ನಿ ತಂಡದ ಪರ ಆಡುತ್ತಿರುವ ಮೋರಿಸ್ ಈ ರೀತಿಯಾಗಿ ರನೌಟ್ ಮಾಡಿದ್ದಾರೆ

ಸಿಡ್ನಿ(ಜ.19): ದಕ್ಷಿಣ ಆಫ್ರಿಕಾ ತಂಡದ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌, ಬಿಗ್‌ ಬ್ಯಾಶ್‌ ಲೀಗ್‌ನ ಪಂದ್ಯವೊಂದರಲ್ಲಿ ಎದುರಾಳಿ ತಂಡದ ಆಟಗಾರನನ್ನು ರನೌಟ್‌ ಮಾಡಲು ಚೆಂಡನ್ನು ಫುಟ್ಬಾಲ್‌ನಂತೆ ಒದ್ದಿದ್ದಾರೆ. ನೇರವಾಗಿ ಚೆಂಡು ವಿಕೆಟ್‌ಗಳನ್ನು ಬೀಳಿಸಿದ್ದು ಈ ವಿಡಿಯೋ ವೈರಲ್‌ ಆಗಿದೆ.

IPL ಟೂರ್ನಿಗೂ ಮುನ್ನವೇ ಅಬ್ಬರಿಸಿದ RCB ಹೊಸ ಪ್ರತಿಭೆ..!

2020ರ ಐಪಿಎಲ್‌ನಲ್ಲಿ ಮೋರಿಸ್‌ ಆರ್‌ಸಿಬಿ ತಂಡದಲ್ಲಿ ಆಡಲಿದ್ದಾರೆ. ಶನಿವಾರ ಸಿಡ್ನಿ ಸಿಕ್ಸರ್‌ ಹಾಗೂ ಸಿಡ್ನಿ ಥಂಡರ್ಸ್‌ ನಡುವೆ ನಡೆಯುತ್ತಿದ್ದ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಸಿಡ್ನಿ ಥಂಡರ್ಸ್‌ ಪರ ಆಡುತ್ತಿರುವ ಮೋರಿಸ್‌, ಸಿಡ್ನಿ ಸಿಕ್ಸರ್‌ ತಂಡದ ಡೇನಿಯಲ್‌ ಹ್ಯೂಜಸ್‌ ರನ್ನು ಫುಟ್ಬಾಲ್‌ ಸ್ಕಿಲ್‌ ಮೂಲಕ ರನೌಟ್‌ ಮಾಡಿದ್ದಾರೆ.

ಡಿಸೆಂಬರ್ 19ರಂದು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕ್ರಿಸ್‌ ಮೋರಿಸ್ ಅವರಿಗೆ 10 ಕೋಟಿ ನೀಡಿ ಖರೀದಿಸಿದೆ. ಮುಂಬರುವ 13ನೇ ಆವೃತ್ತಿಯಲ್ಲಿ ಕ್ರಿಸ್ ಮೋರಿಸ್ RCB ಪರ ಆಡಲಿದ್ದಾರೆ.  

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
IPL 2026 ಮಿನಿ ಹರಾಜು: 2 ಕೋಟಿ ಮೂಲ ಬೆಲೆ ಹೊಂದಿದ 5 ಸ್ಟಾರ್ ಆಟಗಾರರಿವರು!