
ಲಂಡನ್(ಆ.13): ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ, ಇಂಗ್ಲೆಂಡ್‌ನಲ್ಲಿ ತಮ್ಮ ಭರ್ಜರಿ ಪ್ರದರ್ಶನವನ್ನು ಮುಂದುವರೆಸಿದ್ದಾರೆ. ಸಸೆಕ್ಸ್ ತಂಡದ ಪರ ಕೌಂಟಿ ಚಾಂಪಿಯನ್‌ಶಿಪ್ ಡಿವಿಷನ್ 2ನಲ್ಲಿ ಒಟ್ಟು 5 ಶತಕ ಸಿಡಿಸಿ ಮಿಂಚಿದ್ದ ಚೇತೇಶ್ವರ್ ಪೂಜಾರ, ಇದೀಗ ತಮ್ಮ ಅದೇ ಲಯವನ್ನು ಮುಂದುವರೆಸಿದ್ದಾರೆ. ರಕ್ಷಣಾತ್ಮಕ ಆಟಕ್ಕೆ ಹೆಸರುವಾಸಿಯಾಗಿರುವ ಪೂಜಾರ, ಒಂದೇ ಓವರ್‌ನಲ್ಲಿ ಬರೋಬ್ಬರಿ 22 ರನ್ ಬಾರಿಸಿ ಮಿಂಚಿದ್ದಾರೆ.
ಹೌದು, ಚೇತೇಶ್ವರ್ ಪೂಜಾರ ಸದ್ಯ ರಾಯಲ್ ಲಂಡನ್ ಏಕದಿನ ಕಪ್ ಟೂರ್ನಿಯಲ್ಲಿ ವಾರ್ವಿಕ್‌ಶೈರ್ ಎದುರಿನ ಪಂದ್ಯದಲ್ಲಿ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಸಸೆಕ್ಸ್ ತಂಡದ ನಾಯಕ ಟಾಮ್ ಹೇನ್ಸ್ ಗಾಯಗೊಂಡು ಕೆಲಪಂದ್ಯಗಳಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಚೇತೇಶ್ವರ್ ಪೂಜಾರಗೆ ನಾಯಕತ್ವ ಪಟ್ಟ ಕಟ್ಟಲಾಗಿದೆ.
ಸೆಸೆಕ್ಸ್ ತಂಡವು ಗೆಲ್ಲಲು 311 ರನ್‌ಗಳ ಗುರಿ ಪಡೆದಿತ್ತು. ಪೂಜಾರ ಕ್ರೀಸ್‌ಗಿಳಿಯುವಾಗ ಸಸೆಕ್ಸ್ ತಂಡವು 22 ಓವರ್ ಅಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 122 ರನ್ ಬಾರಿಸಿತ್ತು. ಆ ಬಳಿಕ ಸ್ಪೋಟಕ ಬ್ಯಾಟಿಂಗ್ ನಡೆಸಿದ ಸಸೆಕ್ಸ್ ತಂಡದ ನಾಯಕ ಚೇತೇಶ್ವರ್ ಪೂಜಾರ ಕೇವಲ 79 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಆಕರ್ಷಕ 107 ರನ್ ಚಚ್ಚಿದರು. ಇನ್ನು ಇನಿಂಗ್ಸ್‌ನ 45ನೇ ಓವರ್ ಬೌಲಿಂಗ್ ಮಾಡಿದ ಲಿಯಾಮ್ ನಾರ್ವೆಲ್ ಓವರ್‌ನಲ್ಲಿ 22 ರನ್ ಚಚ್ಚಿದರು. ಸಸೆಕ್ಸ್ ಇನಿಂಗ್ಸ್‌ನ 48ನೇ ಓವರ್‌ನಲ್ಲಿ ಶತಕ ಪೂರೈಸಿದ ಪೂಜಾರ, 49ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು.
75ನೇ ಸ್ವಾತಂತ್ರ್ಯೋತ್ಸವಕ್ಕೆ ದಿಗ್ಗಜರ ಕ್ರಿಕೆಟ್ ಧಮಾಕ.! ದಾದಾಗಿರಿ ಕಣ್ತುಂಬಿಕೊಳ್ಳಲು ಫ್ಯಾನ್ಸ್ ರೆಡಿ
ಚೇತೇಶ್ವರ್ ಪೂಜಾರ ಸ್ಪೋಟಕ ಶತಕದ ಹೊರತಾಗಿಯೂ, ಸಸೆಕ್ಸ್ ತಂಡವು ಗೆಲುವಿನ ನಗೆ ಬೀರಲು ವಿಫಲವಾಯಿತು. ಸಸೆಕ್ಸ್ ತಂಡವು ಕೇವಲ 4 ರನ್‌ಗಳ ಅಂತರದಲ್ಲಿ ರೋಚಕ ಸೋಲು ಅನುಭವಿಸಿತು. ಸದ್ಯ ಸಸೆಕ್ಸ್ ತಂಡವು 'ಎ' ಗುಂಪಿನಲ್ಲಿ 4 ಪಂದ್ಯಗಳನ್ನಾಡಿ 4 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.