2025ರಲ್ಲಿ ಟೀಮ್‌ ಇಂಡಿಯಾದ ಆಡಲಿರುವ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ

Published : Jan 01, 2025, 12:42 PM IST
2025ರಲ್ಲಿ ಟೀಮ್‌ ಇಂಡಿಯಾದ ಆಡಲಿರುವ ಕ್ರಿಕೆಟ್‌ ಸರಣಿಗಳ ವೇಳಾಪಟ್ಟಿ

ಸಾರಾಂಶ

2024ರಲ್ಲಿ ಮಿಶ್ರ ಫಲಿತಾಂಶ ಕಂಡ ಭಾರತ ತಂಡ 2025ರಲ್ಲಿ ಚಾಂಪಿಯನ್ಸ್ ಟ್ರೋಫಿ, ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿ ಮತ್ತು ಏಷ್ಯಾ ಕಪ್‌ ಸೇರಿದಂತೆ ಹಲವು ಪ್ರಮುಖ ಟೂರ್ನಿಗಳನ್ನು ಎದುರಿಸಲಿದೆ.  

ಬೆಂಗಳೂರು (ಜ.1): ಭಾರತದ ತಂಡದ ಪಾಲಿಗೆ 2024 ಅತ್ಯಂತ ಮಿಶ್ರ ವರ್ಷವಾಗಿತ್ತು. ಆದರೆ, 2025ರಲ್ಲಿ ಟೀಮ್‌ ಇಂಡಿಯಾ ಕೆಲವು ಗೆಲುವಿನ ಟಾರ್ಗೆಟ್‌ಗಳನ್ನು ಇರಿಸಿಕೊಂಡಿದೆ. ಅದರಲ್ಲಿ ಮುಖ್ಯವಾಗಿ ಚಾಂಪಿಯನ್ಸ್‌ ಟ್ರೋಫಿ, ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟೆಸ್ಟ್‌ ಸರಣಿ ಹಾಗೂ ಏಷ್ಯಾ ಕಪ್‌. ಬಾಕ್ಸಿಂಗ್‌ ಡೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 184 ರನ್‌ಗಳ ಆಘಾತಕಾರಿ ಸೋಲಿನೊಂದಿಗೆ ರೋಹಿತ್ ಶರ್ಮ ಟೀಮ್‌ 2024ರ ವರ್ಷವನ್ನು ಕೊನೆ ಮಾಡಿದೆ. ಕೆರಿಬಿಯನ್‌ನಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಗೆಲುವು ಕಂಡ ಬಳಿಕ ಟೀಮ್‌ ಇಂಡಿಯಾದ ವಿಶ್ವಾಸ ವೃದ್ಧಿಸಬಲ್ಲ ಗೆಲುವುಗಳು 2024ರಲ್ಲಿ ಸಿಕ್ಕಿಲ್ಲ.

ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಸೋಲು, ನ್ಯೂಜಿಲೆಂಡ್‌ ವಿರುದ್ಧ ತವರಿನ ಟೆಸ್ಟ್‌ ಸರಣಿಯಲ್ಲಿ ಮುಖಭಂಗ ಟೀಮ್‌ ಇಂಡಿಯಾ 2024ರಲ್ಲಿ ಆದ ಎರಡು ದೊಡ್ಡ ಹಿನ್ನಡೆಗಳು. 2024ರಲ್ಲಿ ಆಡಿದ 15 ಟೆಸ್ಟ್‌ ಪಂದ್ಯಗಳ ಪೈಕಿ ಭಾರತ 8 ಗೆಲುವು, 6 ಸೋಲು ಹಾಗೂ 1 ಡ್ರಾ ಕಂಡಿದೆ.

ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ ಅಂತಿಮ ಪಂದ್ಯದೊಂದಿಗೆ ಭಾರತ ತಂಡ 2025ರ ವ್ಷವನ್ನು ಆರಂಭಿಸಲಿದ್ದು, ಸಿಡ್ನಿಯಲ್ಲಿ ಈ ಪಂದ್ಯ ನಡೆಯಲಿದೆ. ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ನ ರೇಸ್‌ನಲ್ಲಿ ಉಳಿಯಲಿ ಭಾರತ ತಂಡಕ್ಕೆ ಈ ಪಂದ್ಯ ಗೆಲ್ಲುವುದು ಅನಿವಾರ್ಯವಾಗಿದೆ. ಸೋಲು ಅಥವಾ ಡ್ರಾ ಕಂಡಲ್ಲಿ ಭಾರತ ತಂಡ ಟೆಸ್ಟ್‌ ಸರಣಿ, ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಮಾತ್ರವಲ್ಲ, ಟೆಸ್ಟ್‌ ಚಾಂಪಿಯನ್‌ಷಿಪ್‌ಗೆ ಫೈನಲ್‌ಗೇರುವ ಅವಕಾಶವನ್ನೂ ಕಳೆದುಕೊಳ್ಳಲಿದೆ.

ಸಿಡ್ನಿ ಟೆಸ್ಟ್‌ ಬಳಿಕ ತಂಡದ ಫೋಕಸ್‌ ಚಾಂಪಿಯನ್ಸ್‌ ಟ್ರೋಫಿಯತ್ತ ಸಾಗಲಿದೆ. ಭಾರತ ತಂಡ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡಲಿದ್ದು, ಫೆ.20 ರಂದು ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.

2025ರಲ್ಲಿ ಭಾರತ ಕ್ರಿಕೆಟ್‌ ತಂಡದ ವೇಳಾಪಟ್ಟಿ: ಚಾಂಪಿಯನ್ಸ್‌ ಟ್ರೋಫಿಗೂ ಮುನ್ನ ಟೀಮ್‌ ಇಂಗ್ಲೆಂಡ್‌ ವಿರುದ್ಧ ಐದು ಟಿ20 ಹಾಗೂ 3 ಏಕದಿನ ಪಂದ್ಯಗಳ ಸರಣಿ ಆಡಲಿದ್ದು, ಜನವರಿ 22 ರಿಂದ ಸರಣಿ ಆರಂಭವಾಗಲಿದೆ. ಅದಾದ ಬಳಿಕ ಭಾರತ ತಂಡ ಐದು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಮಾಡಲಿದೆ. ಆ ಮೂಲಕ ಟೀಮ್‌ ಇಂಡಿಯಾ ನಾಲ್ಕನೇ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಸೈಕಲ್‌ಅನ್ನು ಆರಂಭಿಸಲಿದೆ.

2025ರ 25 ಪ್ರಮುಖ ಕ್ರೀಡೆಗಳ ಮುನ್ನೋಟ; ಹೊಸ ವರ್ಷದಲ್ಲೂ ಕ್ರೀಡಾಪ್ರೇಮಿಗಳಿಗೆ ಭರ್ಜರಿ ಮನರಂಜನೆ

ಭಾರತದ ತವರಿನ ಸೀಸನ್‌ 2024ರ ಅಕ್ಟೋಬರ್‌ನಿಂದ ಆರಂಭವಾಗಲಿದ್ದು, ಏಷ್ಯಾಕಪ್‌ ಹಾಗೂ ವೆಸ್ಟ್‌ ಇಂಡೀಸ್‌ ವಿರುದ್ಧ 2 ಟೆಸ್ಟ್‌ ಪಂದ್ಯಗಳ ಸರಣಿ ನಿಗದಿಯಾಗಿದೆ. 2025ರಲ್ಲಿ ಭಾರತ ಪುರುಷರ ಕ್ರಿಕೆಟ್‌ ತಂಡ ಒಟ್ಟು 18 ಟಿ20, 10 ಟೆಸ್ಟ್‌ ಹಾಗೂ 12 ಏಕದಿನ ಪಂದ್ಯಗಳನ್ನು ದ್ವಿಪಕ್ಷೀಯ ಸರಣಿಗಳಲ್ಲಿ ಆಡಲಿದೆ. ಇದು ಐಸಿಸಿ ಹಾಗೂ ಎಸಿಸಿ ಕ್ರಿಕೆಟ್‌ ಪಂದ್ಯಗಳ ಹೊರತಾದ ಪಂದ್ಯಗಳಾಗಿವೆ.

2024ರ ಶ್ರೇಷ್ಠ ತಂಡವನ್ನು ಪ್ರಕಟಿಸಿದ ಆಸ್ಟ್ರೇಲಿಯಾ; ಟೀಂ ಇಂಡಿಯಾ ವೇಗಿಗೆ ನಾಯಕ ಪಟ್ಟ!

ಭಾರತದ ಸಂಪೂರ್ಣ ವೇಳಾಪಟ್ಟಿ:

ಭಾರತ vs ಆಸ್ಟ್ರೇಲಿಯಾ, 5 ನೇ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ - ಜನವರಿ 3-7 (ಸಿಡ್ನಿ)

ಭಾರತ vs ಇಂಗ್ಲೆಂಡ್ (5 T20Is, 3 ODI)-ಜನವರಿ-ಫೆಬ್ರವರಿ 2025

1 ನೇ T20I: ಜನವರಿ 22 (ಚೆನ್ನೈ)

2 ನೇ T20I: ಜನವರಿ 25 (ಕೋಲ್ಕತ್ತಾ)

3ನೇ T20I: ಜನವರಿ 28 (ರಾಜ್‌ಕೋಟ್)

4 ನೇ T20I: ಜನವರಿ 31 (ಪುಣೆ)

5 ನೇ T20I: ಫೆಬ್ರವರಿ 2 (ಮುಂಬೈ)

1 ನೇ ODI: ಫೆಬ್ರವರಿ 6 (ನಾಗ್ಪುರ)

2ನೇ ODI: ಫೆಬ್ರವರಿ 9 (ಕಟಕ್)

3ನೇ ODI: ಫೆಬ್ರವರಿ 12 (ಅಹಮದಾಬಾದ್)

ಚಾಂಪಿಯನ್ಸ್ ಟ್ರೋಫಿ -- ಫೆಬ್ರವರಿ-ಮಾರ್ಚ್ 2025

ಭಾರತ vs ಬಾಂಗ್ಲಾದೇಶ: ಫೆಬ್ರವರಿ 20 (ದುಬೈ)

ಭಾರತ vs ಪಾಕಿಸ್ತಾನ: ಫೆಬ್ರವರಿ 23 (ದುಬೈ)

ಭಾರತ vs ನ್ಯೂಜಿಲೆಂಡ್: ಮಾರ್ಚ್ 2 (ದುಬೈ)

ಸೆಮಿಫೈನಲ್ (ಅರ್ಹತೆ ಪಡೆದಲ್ಲಿ): ಮಾರ್ಚ್ 4 (ದುಬೈ)

ಅಂತಿಮ (ಅರ್ಹತೆ ಪಡೆದಲ್ಲಿ): ಮಾರ್ಚ್ 9 (ದುಬೈ)

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ (ಅರ್ಹತೆ ಪಡೆದಲ್ಲಿ) – ಜೂನ್ 2025 (ಲಾರ್ಡ್ಸ್ ಕ್ರಿಕೆಟ್ ಗ್ರೌಂಡ್)

ಭಾರತ vs ಇಂಗ್ಲೆಂಡ್ (5 ಟೆಸ್ಟ್)- ಜೂನ್-ಆಗಸ್ಟ್ 2025 (ಪ್ರವಾಸ ಸರಣಿ)
1 ನೇ ಟೆಸ್ಟ್: ಜೂನ್ 20-24 (ಹೆಡಿಂಗ್ಲಿ)

2ನೇ ಟೆಸ್ಟ್: ಜುಲೈ 2-6 (ಎಡ್ಜ್‌ಬಾಸ್ಟನ್)

3ನೇ ಟೆಸ್ಟ್: ಜೂನ್ 10-14 (ಲಾರ್ಡ್ಸ್)

4 ನೇ ಟೆಸ್ಟ್: ಜೂನ್ 23-27 (ಮ್ಯಾಂಚೆಸ್ಟರ್)

5ನೇ ಟೆಸ್ಟ್: ಜುಲೈ 31-ಆಗಸ್ಟ್ 4 (ಓವಲ್)

ಭಾರತ vs ಬಾಂಗ್ಲಾದೇಶ (3 ODS, 3 T20I)-ಆಗಸ್ಟ್ 2025 (ಪ್ರವಾಸ ಸರಣಿ)

ಭಾರತ vs ವೆಸ್ಟ್ ಇಂಡೀಸ್ (2 ಟೆಸ್ಟ್)-ಅಕ್ಟೋಬರ್ 2025

ಏಷ್ಯಾ ಕಪ್ T20 - ಅಕ್ಟೋಬರ್-ನವೆಂಬರ್ 2025

ಭಾರತ vs ಆಸ್ಟ್ರೇಲಿಯಾ (3 ODIಗಳು, 5 T20Iಗಳು) -ನವೆಂಬರ್ 2025 (ಪ್ರವಾಸ ಸರಣಿ)

ಭಾರತ vs ದಕ್ಷಿಣ ಆಫ್ರಿಕಾ (2 ಟೆಸ್ಟ್‌ಗಳು, 3 ODIಗಳು, 5 T20Iಗಳು)- ನವೆಂಬರ್-ಡಿಸೆಂಬರ್ 2025

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್