
ಐರ್ಲೆಂಡ್ (ಜೂ.28) ಟೀಂ ಇಂಡಿಯಾ ಟಿ20 ತಂಡದಲ್ಲಿ ಭಾರಿ ಬದಲಾವಣೆ ಮಾಡಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಾಯಿತು. ಸೂರ್ಯಕುಮಾರ್ ಯಾದವ್‌ಗೆ ಕೊಕ್, ಶ್ರೇಯಸ್ ಅಯ್ಯರ್‌ಗೆ ನಾಯಕತ್ವ, ವೈಭವ್ ಸೂರ್ಯವಂಶಿಗೆ ಸ್ಥಾನ ಸೇರಿದಂತೆ ಒಂದಲ್ಲ, ಎರಡಲ್ಲ. ಆದರೆ ಟೀಂ ಇಂಡಿಯಾ ಐರ್ಲೆಂಡ್ ಪ್ರವಾಸವನ್ನು ಪಿಕ್‌ನಿಕ್ ರೀತಿ ಪರಿಗಣಿಸಿತಾ ಅನ್ನೋ ಅನುಮಾನಗಳು ಬಲವಾಗಿದೆ. ಟಿ20 ರ‍್ಯಾಂಕಿಂಗ್‌ನಲ್ಲಿ 11ನೇ ಸ್ಥಾನದಲ್ಲಿರುವ ಐರ್ಲೆಂಡ್ ವಿರುದ್ದ ಟಿ20 ಚಾಂಪಿಯನ್ ಭಾರತ ಮಂಡಿಯೂರಿದೆ. 2ನೇ ಪಂದ್ಯದಲ್ಲಿ ಕೇವಲ 155 ರನ್ ಟಾರ್ಗೆಟ್ ಚೇಸ್ ಮಾಡಲು ಸಾಧ್ಯವಾಗದೇ ಸೋಲೊಪ್ಪಿಕೊಂಡಿದೆ. ಈ ಮೂಲಕ ಸತತ 2 ಪಂದ್ಯದಲ್ಲಿ ಸೋತು 0-2 ಅಂತರದಿಂದ ಸರಣಿ ಕೈಚೆಲ್ಲಿದೆ. ಇದೇ ಮೊದಲ ಬಾರಿಗೆ ಭಾರತವನ್ನು 2 ಪಂದ್ಯದಳಲ್ಲಿ ಮಣಿಸಿ ಸರಣಿ ಗೆದ್ದ ಸಾಧನೆ ಮಾಡಿದೆ.
ಮೊದಲ ಪಂದ್ಯದ ಸೋಲಿನ ಬಳಿಕ ತೀವ್ರ ಟೀಕೆ ಎದುರಾಗಿತ್ತು. ಹೀಗಾಗಿ 2ನೇ ಪಂದ್ಯದಲ್ಲಿ ಭಾರತ ಬೌನ್ಸ್ ಬ್ಯಾಕ್ ಮಾಡುತ್ತೆ ಅನ್ನೋ ವಿಶ್ವಾಸದಲ್ಲಿತ್ತು. ಇತ್ತ ವೈಭವ್ ಸೂರ್ಯವಂಶಿ ಕಣಕ್ಕಿಳಿಯುತ್ತಾರೆ. ಭಾರತದ ಬ್ಯಾಟಿಂಗ್ ಬಲ ಹೆಚ್ಚಿಸಲಿದ್ದಾರೆ ಅನ್ನೋ ಲೆಕ್ಕಾಚಾರಗಳಿತ್ತು. ಆದರೆ ವೈಭವ್ ಸೂರ್ಯವಂಶಿಗೆ ಸ್ಥಾನ ಸಿಗಲಿಲ್ಲ. ಇತ್ತ ಭಾರತ ಬ್ಯಾಟಿಂಗ್ ಸರಿಯಾಗಲಿಲ್ಲ. ಸಂಜು ಸ್ಯಾಮ್ಸನ್, ಅಭಿಶೇಕ್ ಶರ್ಮಾ ಶೂನ್ಯ. ಇಶಾನ್ ಕಿಶನ್ 12, ನಾಯಕ ಶ್ರೇಯಸ್ ಅಯ್ಯರ್ 10, ಅಕ್ಸರ್ ಪಟೇಲ್ 14, ಶಿವಂ ದುಬೆ 20 ರನ್ ಸಿಡಿಸಿ ಮರಳಿದರು.
ತಿಲಕ್ ವರ್ಮಾ ಹೋರಾಟ ನೀಡಿದ ಹಾಫ್ ಸೆಂಚುರಿ ಸಿಡಿಸಿದರು. ತಿಲಕ್ ವರ್ಮಾ ಹೋರಾಟ ನೀಡದಿದ್ದರೆ ಭಾರತ 100 ರನ್ ಗಡಿ ದಾಟುವುದು ಅಸಾಧ್ಯವಾಗಿತ್ತು. ತಿಲಕ್ ವರ್ಮಾ 46 ಎಸೆತದಲ್ಲಿ 55 ರನ್ ಸಿಡಿಸಿದರು. ಇತರರಿಂದ ಆಗಲೇ ಇಲ್ಲ. ಕೊನೆಯ ಹಂತದಲ್ಲಿ ಹರ್ಷಿತ್ ರಾಣಾ ದಿಟ್ಟ ಹೋರಾಟ ನೀಡಿದರು. ಅಂತಿಮ 6 ಎಸೆತದಲ್ಲಿ ಭಾರತದ ಗೆಲುವಿಗೆ 20 ರನ್ ಅವಶ್ಯಕತೆ ಇತ್ತು. ನೋ ಬಾಲ್, ವೈಡ್ ಅನುಕೂಲವೂ ಭಾರತಕ್ಕೆ ಇತ್ತು. ಆದರೆ ಚೇಸ್ ಮಾಡಲು ಸಾಧ್ಯವಾಗಲಿಲ್ಲ. 10 ಎಸೆತದಲ್ಲಿ 21 ರನ್ ಸಿಡಿಸಿದ ಹರ್ಷಿತ್ ರಾಣಾ ವಿಕೆಟ್ ಪತನಗೊಂಡಿತು.ಅಂತಿ ಎಸೆತದಲ್ಲಿ ಪ್ರಿನ್ಸ್ ಯಾದವ್ ಸಿಕ್ಸರ್ ಸಿಡಿಸಿದರು. ಈ ಮೂಲಕ 9 ವಿಕೆಟ್ ನಷ್ಟಕ್ಕೆ ಭಾರತ 153 ರನ್ ಸಿಡಿಸಿತು. ಐರ್ಲೆಂಡ್ 1 ರನ್ ರೋಚಕ ಗೆಲುವು ದಾಖಲಿಸಿ ಸರಣಿ ವಶಪಡಿಸಿಕೊಂಡಿತು.
ಮೊದಲ ಪಂದ್ಯದಲ್ಲೂ ಭಾರತ ಮುಗ್ಗರಿಸಿತ್ತು. ಐರ್ಲೆಂಡ್ 182 ರನ್ ಸಿಡಿಸಿತ್ತು. ಚೇಸಿಂಗ್ ವೇಳೆ ಅಭಿಶೇಕ್ ಶರ್ಮಾ 20 ಎಸೆತದಲ್ಲಿ 49 ರನ್ ಸಿಡಿಸಿ ಗಮನಸೆಳೆದಿದ್ದರು. ಆದರೆ ಇತರರು ಹೋರಾಟವೇ ಮಾಡಲಿಲ್ಲ. ಪರಿಣಾಮ ಭಾರತ 18.5 ಓವರ್‌ಗಳಲ್ಲಿ 148 ರನ್ ಸಿಡಿಸಿ ಆಲೌಟ್ ಆಯಿತು. ಐರ್ಲೆಂಡ್ ತಂಡ 34 ರನ್ ಗೆಲುವು ಸಾಧಿಸಿತು.ಜೊತೆಗೆ ಇದೇ ಮೊದಲ ಬಾರಿಗೆ ಭಾರತ ಸೋಲಿಸಿ ದಾಖಲೆ ಬರೆಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.