ಬ್ರ್ಯಾಂಡ್ ಮೌಲ್ಯ ಆಧರಿಸಿ ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆ ವರದಿ ಬಹಿರಂಗವಾಗಿದೆ. ಬಾಲಿವುಡ್, ಕ್ರಿಕೆಟ್ ಸೇರಿದಂತೆ ಹಲವು ದಿಗ್ಗಜ ಸೆಲೆಬ್ರೆಟಿಗಳ ಸಮೀಕ್ಷೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಂ.1 ಸ್ಥಾನ ಪಡೆದಿದ್ದಾರೆ.
ನವದೆಹಲಿ(ಫೆ.06): ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸತತ 3ನೇ ವರ್ಷ ಭಾರತದ ನಂ.1 ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ. 2019ರಲ್ಲಿ ಕೊಹ್ಲಿಯ ಬ್ರಾಂಡ್ ಮೌಲ್ಯ 1691 ಕೋಟಿ ಇದ್ದು, 2018ಕ್ಕೆ ಹೋಲಿಸಿದರೆ ಶೇ.39ರಷ್ಟುಏರಿಕೆಯಾಗಿದೆ.
ಇದನ್ನೂ ಓದಿ: ಕಿವೀಸ್ ಸರಣಿ ಗೆದ್ದು ಧೋನಿ ಸೇರಿದಂತೆ ದಿಗ್ಗಜ ನಾಯಕರನ್ನೇ ಹಿಂದಿಕ್ಕಿದ ಕೊಹ್ಲಿ!
2ನೇ ಸ್ಥಾನದಲ್ಲಿರುವ ಬಾಲಿವುಡ್ ತಾರೆ ಅಕ್ಷಯ್ ಕುಮಾರ್ ಬ್ರಾಂಡ್ ಮೌಲ್ಯ ಕೊಹ್ಲಿಯ ಮೌಲ್ಯದ ಅರ್ಧದಷ್ಟಿದೆ ಎಂದು ಪ್ರತಿಷ್ಠಿತ ಡಫ್ ಅಂಡ್ ಫೆಲ್ಪ್ಸ್ ಸಂಸ್ಥೆ ಸಮೀಕ್ಷೆ ತಿಳಿಸಿದೆ.
ಭಾರತದ ಅಗ್ರ 20 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕೊಹ್ಲಿ ಸೇರಿದಂತೆ ನಾಲ್ವರು ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ 12ನೇ ಸ್ಥಾನದಲ್ಲಿದ್ದ ಎಂ.ಎಸ್.ಧೋನಿ 3 ಸ್ಥಾನಗಳ ಏರಿಕೆ ಕಂಡು 9ನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ: ವಿರುಷ್ಕಾ ಜೋಡಿ ಒಟ್ಟು ಆದಾಯ 1,200 ಕೋಟಿ, ಗಳಿಕೆಯಲ್ಲಿ ಕೊಹ್ಲಿಗಿಲ್ಲ ಸರಿಸಾಟಿ!
ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಹಲವು ವರ್ಷಗಳಾದರೂ ಸಚಿನ್ ತೆಂಡುಲ್ಕರ್ ಇನ್ನೂ ಹಲವು ಬ್ರಾಂಡ್‌ಗಳ ರಾಯಭಾರಿಯಾಗಿ ಮುಂದುವರಿದಿದ್ದಾರೆ. ಅವರು 15ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ 20ನೇ ಸ್ಥಾನ ಪಡೆದಿದ್ದಾರೆ. ಅವರ ಬ್ರಾಂಡ್ ಮೌಲ್ಯ .163 ಕೋಟಿ ಇದೆ ಎಂದು ಸಮೀಕ್ಷೆಯ ವರದಿಯಲ್ಲಿದೆ.
ಕ್ರಿಕೆಟಿಗರ ಬ್ರೌಂಡ್ ಮೌಲ್ಯ (ಕೋಟಿಗಳಲ್ಲಿ)
01 ವಿರಾಟ್ ಕೊಹ್ಲಿ (1691 ಕೋಟಿ)
09 ಎಂ.ಎಸ್.ಧೋನಿ (293 ಕೋಟಿ)
15 ಸಚಿನ್ ತೆಂಡುಲ್ಕರ್ (178 ಕೋಟಿ)
20 ರೋಹಿತ್ ಶರ್ಮಾ (163 ಕೋಟಿ)