ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಬಿಗ್ ಶಾಕ್; ಶೇ.80 ರಷ್ಟು ಸಂಭಾವನೆ ಕಟ್!

By Suvarna NewsFirst Published Feb 5, 2020, 8:31 PM IST
Highlights

ನ್ಯೂಜಿಲೆಂಡ್ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿದೆ. ಈ ಮೂಲಕ ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿದೆ. ಈ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಮತ್ತೊಂದು ಶಾಕ್ ಎದುರಾಗಿದೆ. ಪಂದ್ಯದ ಸಂಭಾವನೆಯ ಶೇಕಡಾ  80 ರಷ್ಟು ಕಡಿತವಾಗಲಿದೆ. 
 

ಹ್ಯಾಮಿಲ್ಟನ್(ಫೆ.05): ಟೀಂ ಇಂಡಿಯಾ ಕ್ರಿಕೆಟಿಗರು ಮೊದಲ ಏಕದಿನ ಪಂದ್ಯದ ಸೋಲಿನ ನೋವಿನಿಂದ ಹೊರಬಂದಿಲ್ಲ. ಅಷ್ಟರಲ್ಲೇ ಪಂದ್ಯದ ಸಂಭಾವನೆಯ ಶೇಕಡಾ 80ರಷ್ಟು ಕಡಿತಗೊಳ್ಳುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಹೌದು, ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಮಾಡಿದ ಭಾರತಕ್ಕೆ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: ರಾಸ್ ಟೇಲರ್ ಶತಕ: ಟೀಂ ಇಂಡಿಯಾಗೆ ಸೋಲಿನ ಆಘಾತ..!

ನಿಧಾನಗತಿಯಲ್ಲಿ ಓವರ್ ಮಾಡಿದ ಕಾರಣಕ್ಕೆ ಟೀಂ ಇಂಡಿಯಾಗೆ ಶೇಕಡಾ 80 ರಷ್ಟು ದಂಡ ವಿಧಿಸಿದೆ. ನಿಗದಿತ ಸಮಯದಲ್ಲಿ ಪಂದ್ಯ ಮುಗಿಸಬೇಕಿದ್ದ ಟೀಂ ಇಂಡಿಯಾ ಸ್ಲೋ ಓವರ್‌ನಿಂದ ದಂಡಕ್ಕೆ ಗುರಿಯಾಗಿದೆ. ಸ್ಲೋ ಓವರ್ ರೇಟ್ ಮಾಡಿರುವುದನ್ನು ನಾಯಕ ವಿರಾಟ್ ಕೊಹ್ಲಿ ಒಪ್ಪಿಂಕೊಂಡಿದ್ದಾರೆ. ಹೀಗಾಗಿ ವಿಚಾರಣೆಯ ಅಗತ್ಯವಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಒಂದು ಸೋಲು, ಹಲವು ಅಪಖ್ಯಾತಿಗೆ ಗುರಿಯಾದ ಟೀಂ ಇಂಡಿಯಾ!.

ಟೀಂ ಇಂಡಿಯಾ ಐಸಿಸಿ ಕೋಡ್ ಆಫ್ ಕಂಡಕ್ಟ್ 2.22 ನಿಯಮ ಉಲ್ಲಂಘಿಸಿದೆ.  ಹೀಗಾಗಿ ಪಂದ್ಯ ಶೇಕಡಾ  80 ರಷ್ಟು ದಂಡ ವಿಧಿಸಲಾಗಿದೆ ಎಂದು ಮ್ಯಾಚ್ ರೆಫ್ರಿ ಹೇಳಿದ್ದಾರೆ. ಟಿ20 ಸರಣಿಯ 4 ಮತ್ತು 5ನೇ ಪಂದ್ಯದಲ್ಲಿ ಸ್ಲೋ ಓವರ್ ರೇಟ್ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಪಂದ್ಯ ಶೇಕಡಾ 40 ಹಾಗೂ 20ರಷ್ಟು ದಂಡ ವಿಧಿಸಲಾಗಿತ್ತು.

click me!