ರಣಜಿ ಪಂದ್ಯದಲ್ಲಿ ಹಿಂದಿ ಹೇರಿಕೆ: ಗ್ರಾಚಾರ ಬಿಡಿಸಿದ ಕನ್ನಡಿಗರು

By Suvarna NewsFirst Published Feb 14, 2020, 1:50 PM IST
Highlights

ಹಿಂದಿ ರಾಷ್ಟ್ರ ಭಾಷೆ. ಭಾರತ ಇದಕ್ಕಿಂತ ದೊಡ್ಡ ಭಾಷೆ ಮತ್ತೊಂದಿಲ್ಲ. ಎಲ್ಲರೂ ಹಿಂದಿ ಭಾಷೆ ತಿಳಿದಿರಬೇಕು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದ ವೀಕ್ಷಕ ವಿವರಣೆಗಾರರಿಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಗ್ರಹಚಾರ ಬಿಡಿಸಿದ್ದಾರೆ. ಏನಿದು ವಿವಾದ? ಇಲ್ಲಿದೆ ಸಂಪೂರ್ಣ ವಿವರ..

ಬೆಂಗಳೂರು(ಫೆ.14): ಕರ್ನಾಟಕ-ಬರೋಡಾ ರಣಜಿ ಪಂದ್ಯದ 2ನೇ ದಿನವಾದ ಗುರುವಾರ ವೀಕ್ಷಕ ವಿವರಣೆಗಾರ ಸುಶೀಲ್‌ ದೋಶಿ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. 

ರಣಜಿ ಟ್ರೋಫಿ: ಕರ್ನಾಟಕಕ್ಕೆ ಗೆಲ್ಲಲು 149 ರನ್‌ಗಳ ಗುರಿ

ಸಹ ವೀಕ್ಷಕ ವಿವರಣೆಗಾರ, ‘ಗವಾಸ್ಕರ್‌ ಹಿಂದಿಯಲ್ಲಿ ಕಾಮೆಂಟ್ರಿ ಮಾಡುವುದನ್ನು ಕೇಳುವುದಕ್ಕೆ ಖುಷಿಯಾಗುತ್ತದೆ’ ಎಂದಿದ್ದಕ್ಕೆ ಸುಶೀಲ್‌, ‘ಪ್ರತಿಯೊಬ್ಬ ಭಾರತೀಯನು ಹಿಂದಿ ಕಲಿಯಬೇಕು. ಅದು ನಮ್ಮ ಮಾತೃ ಭಾಷೆ. ಹಿಂದಿಗಿಂತ ಉತ್ತಮ ಭಾಷೆ ಮತ್ತೊಂದಿಲ್ಲ. ನಾವು ಕ್ರಿಕೆಟಿಗರು, ನಾವಿನ್ನೂ ಹಿಂದಿಯಲ್ಲಿ ಮಾತನಾಡಬೇಕೆ ಎಂದು ವರ್ತಿಸುವವರನ್ನು ಕಂಡರೆ ನನಗೆ ಸಿಟ್ಟು ಬರುತ್ತದೆ. ಅವರಿಗೆ ನೀವು ಭಾರತದಲ್ಲಿ ಇದ್ದೀರಿ, ಇಲ್ಲಿನ ಮಾತೃಭಾಷೆ ಮಾತನಾಡಿ ಎಂದು ಹೇಳಲು ಇಚ್ಛಿಸುತ್ತೇನೆ’ ಎಂದರು. 

Did this lunatic commentator just say “Every Indian should know Hindi” ? What on earth do you think you’re ⁦⁩ ? Stop imposing Hindi and disseminating wrong messages. Kindly atone. Every Indian need not know Hindi pic.twitter.com/thS57yyWJx

— Ramachandra.M/ ರಾಮಚಂದ್ರ.ಎಮ್ (@nanuramu)

There is no national language for India, most of the states in India has their own language!! https://t.co/Sa9VPh0rvi

— Kavin Parameswaran (@Kavin_13111991)

ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು, ಬಿಸಿಸಿಐ ಹಾಗೂ ಪಂದ್ಯ ಪ್ರಸಾರ ಮಾಡುತ್ತಿರುವ ಸ್ಟಾರ್‌ ಸ್ಪೋರ್ಟ್ಸ್ ಸಂಸ್ಥೆಯನ್ನು ಗುರಿಯಾಗಿಸಿಕೊಂಡು ಕರ್ನಾಟಕದ ಅಭಿಮಾನಿಗಳು ಟ್ವೀಟ್‌ಗಳನ್ನು ಮಾಡಿದ್ದಾರೆ. ಎಲ್ಲಾ ರಾಜ್ಯಗಳು ತಮ್ಮದೇ ಆದ ಭಾಷೆಯನ್ನು ಹೊಂದಿದೆ. ಭಾರತದಲ್ಲಿ ಯಾವುದೇ ರಾಷ್ಟ್ರ ಭಾಷೆ ಅಂತ ಇಲ್ಲ ಎಂದು ಟ್ವಿಟರ್‌ನಲ್ಲೇ ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ.

My mother tongue is kannada..don't impose Hindi on us

— Munesh Bidar Lakha (@BidarLakha)

Hey you idiots what the hell you're blabbering in the commentary box, India is not equal to Hindi,have some commonsense while speaking,Hindi is not Rashtrabhasha, should sack these clowms from the commentary panel,it's an insult to non hindi speakers https://t.co/YUq56zoMJH

— Prashanth (@prashanthhr01)

For the uninitiated, here you go again: India DOES NOT have a national language, and you can't impose a language or a culture on anyone. If you still do have any doubts, read up on the Constitution and not lousy WhatsApp forwards https://t.co/Iwv37kW1yA

— Arun Venugopal (@scarletrun)

Hey what is this?! Shame. https://t.co/zbXFSqnEGb

— ಯಶಸ್ ಬೆಂಗಳೂರು/Yashas (@ILogicianI)

ಕಿವೀಸ್ ನೆಲದಲ್ಲಿ ಕನ್ನಡ ಕಲರವ: ರಾಹುಲ್-ಪಾಂಡೆ ಮಾತಿಗೆ ಫ್ಯಾನ್ಸ್ ಫುಲ್ ಖುಷ್

ಭಾರತ-ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಹಾಗೂ ಮನೀಶ್ ಪಾಂಡೆ ಜೋಡಿ 5ನೇ ವಿಕೆಟ್‌ಗೆ 107 ರನ್‌ಗಳ ಜತೆಯಾಟವಾಡಿದ್ದರು. ರಾಹುಲ್-ಮನೀಶ್ ಜೋಡಿ ಬ್ಯಾಟಿಂಗ್ ಮಾಡುವ ವೇಳೆ ಕನ್ನಡದಲ್ಲೇ ಮಾತನಾಡಿ ಗಮನ ಸೆಳೆದಿದ್ದರು. ಆ ಕ್ಷಣಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಓಡಿ-ಓಡಿ ಬಾ, ಬರ್ತೀರಾ?, ಬೇಡ-ಬೇಡ, ಬಾ-ಬಾ ಎನ್ನುವಂತಹ ಮಾತುಗಳು ಸ್ಟಂಪ್ಸ್ ಮೈಕ್‌ನಲ್ಲಿ ಸ್ಪಷ್ಟವಾಗಿ ಕೇಳಿಸಿದ್ದವು.  

click me!