ಕೊರೋನಾದಿಂದ ರದ್ದಾದ ಪಂದ್ಯದ ಬದಲು ಇಂಗ್ಲೆಂಡ್ ಟೆಸ್ಟ್ ಆಯೋಜಿಸಲು BCCIಗೆ ಪತ್ರ!

By Suvarna NewsFirst Published Aug 17, 2020, 7:21 PM IST
Highlights

ಬಂಗಾಳ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೆ ಹೊಸ ಮನವಿ ಮಾಡಿದೆ. ಕೊರೋನಾ ವೈರಸ್ ಕಾರಣ ಭಾರತದ ಪ್ರವಾಸದಲ್ಲಿದ್ದ ಸೌತ್ ಆಫ್ರಿಕಾ ತಂಡ ಏಕದಿನ ಸರಣಿ ಮೊಟಕುಗೊಳಿಸಿ ತವರಿಗೆ ವಾಪಾಸ್ಸಾಗಿತ್ತು. ಇದೀಗ ಈ ರದ್ದಾದ ಪಂದ್ಯದ ಬದಲು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಆಯೋಜಿಸಲು ಅನುಮತಿ ನೀಡುವಂತೆ ಬಂಗಾಳ ಕ್ರಿಕೆಟ್ ಸಂಸ್ಥೆ ಹೊಸ ಬೇಡಿಕೆ ಇಟ್ಟಿದೆ.

ಕೋಲ್ಕತಾ(ಆ.17): ಬಂಗಾಳ ಕ್ರಿಕೆಟ್ ಸಂಸ್ಥೆ ಹೊಸ ಬೇಡಿಕೆಯನ್ನು ಮುಂದಿಟ್ಟಿದೆ. ಈ ಕುರಿತು ಬಿಸಿಸಿಐಗೆ ಪತ್ರ ಬರೆದಿರುವ ಬಂಗಾಳ ಕ್ರಿಕಟ್ ಸಂಸ್ಥೆ, ರದ್ದಾಗಿರುವ ಪಂದ್ಯದ ಬದಲು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಆಯೋಜನೆ ಬಂಗಾಳ ಕ್ರಿಕೆಟ್ ಸಂಸ್ಛೆಗೆ ನೀಡಬೇಕು ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅವಿಶೇಕ್ ದಾಲ್ಮಿಯಾ ಮನವಿ ಮಾಡಿದ್ದಾರೆ.

ಸೆ.19 ರಿಂದ ಭಾರತೀಯರಲ್ಲಿ ಕೊರೋನಾ ಭಯ ಮಾಯ: ಭವಿಷ್ಯ ನುಡಿದ ಸಚಿನ್ ತೆಂಡುಲ್ಕರ್!.

ಮಾರ್ಚ್ 15 ಹಾಗೂ 18 ರಂದು ಲಕ್ನೋ ಹಾಗೂ ಕೋಲ್ಕತಾದಲ್ಲಿ ಆಯೋಜಿಸಿದ್ದ ಭಾರತ-ಸೌತ್ ಆಫ್ರಿಕಾ ಸರಣಿ ಕೊರೋನಾ ವೈರಸ್ ಕಾರಣ ರದ್ದಾಗಿತ್ತು. ಇದಾದ ಬಳಿಕ ಪ್ರಮುಖ ಟೂರ್ನಿಗಳು ರದ್ದಾಗಿದೆ. ಕೊರೋನಾ ವೈರಸ್ ಕಾರಣ ಆರ್ಥಿಕ ನಷ್ಟ ಎದುರಾಗಿದೆ. ಬಿಸಿಸಿಐ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಯೋಜಿಸಬೇಕು. ಈ ಮೂಲಕ ಬಂಗಾಳಕ್ಕೆ ಟೆಸ್ಟ್ ಪಂದ್ಯ ಆಯೋಜಿಸಲು ಅನುತಮಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಭಾರತ ಕಂಪನಿ ಮುಂದೆ ಬರದಿದ್ದರೆ IPL ಟೈಟಲ್ ಸ್ಪಾನ್ಸರ್‌ಗೆ ಪತಂಜಲಿ ಸಿದ್ಧ: ರಾಮ್‌ದೇವ್

ವೇಳಾಪಟ್ಟಿ ಪ್ರಕಾರ 2021ರಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿನ ಟೆಸ್ಟ್ ಪಂದ್ಯವನ್ನು ಕೋಲ್ಕತಾದಲ್ಲಿ ಆಯೋಜಿಸಲು ಬಿಸಿಸಿಐ ಅನುವು ಮಾಡಿಕೊಡಬೇಕು ಎಂದು ಅವಿಶೇಕ್ ದಾಲ್ಮಿಯಾ ಮನವಿ ಮಾಡಿದ್ದಾರೆ. ಇದರೊಂದಿಗೆ ಪಂದ್ಯ ರದ್ದಾದ ಕಾರಣ ಆಗಿರುವ ನಷ್ಠ ಸರಿದೂಗಿಸಲು ಬಿಸಿಸಿಐಗ ಮನವಿ ಮಾಡಲಾಗಿದೆ.
 

click me!