ಚಿಕಿತ್ಸೆ ಫಲಿಸದೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಚೇತನ್ ಚವ್ಹಾಣ್ ನಿಧನ!

By Suvarna NewsFirst Published Aug 16, 2020, 6:31 PM IST
Highlights

ಕೊರೋನಾ ವೈರಸ್ ದೃಢಪಟ್ಟ ಹಿನ್ನಲೆಯಲ್ಲಿ ಆಸ್ಪತ್ರೆ ದಾಖಲಾಗಿದ್ದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಚೇತನ್ ಚವ್ಹಾಣ್ ನಿಧನರಾಗಿದ್ದಾರೆ. 

ಲಕ್ನೋ(ಆ.16): ಬಹು ಅಂಗಾಗ ವೈಫಲ್ಯದಿಂದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಉತ್ತರ ಪ್ರದೇಶ ಸರ್ಕಾರದ ಕ್ಯಾಬಿನೆಟ್ ಮಿನಿಸ್ಟರ್ ಚೇತನ್ ಚವ್ಹಾಣ್ ನಿಧನರಾಗಿದ್ದಾರೆ. 73 ವರ್ಷದ ಚೇತನ್ ಚವ್ಹಾಣ್‌ಗೆ ಕೊರೋನಾ ವೈರಸ್ ದೃಢಪಟ್ಟ ಹಿನ್ನಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಲಕ್ನೋದ ಸಂಜಯ್ ಗಾಂಧಿ ಆಸ್ಪತ್ರೆಯ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೇತನ್ ಚವ್ಹಾಣ್ ಬಹು ಅಂಗಾಂಗ ವೈಫಲ್ಯದಿಂದ ನಿಧನರಾಗಿದ್ದಾರೆ.

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನಿಗೆ ಕೊರೋನಾ ಪಾಸಿಟಿವ್; ಪರಿಸ್ಥಿತಿ ಗಂಭೀರ..!

ಅನಾರೋಗ್ಯ ಕಾರಣ  ಜಲೈ 12 ರಂದು ಆಸ್ಪತ್ರೆ ದಾಖಲಾಗಿದ್ದ ಚೇತನ್ ಚವ್ಹಾಣ್‌ಗೆ ಕೊರೋನಾ ವೈರಸ್ ತಗುಲಿರುವುದು ದೃಢಪಟ್ಟಿತ್ತು. ಭಾನುವಾರ(ಆ.16) ಚಿಕಿತ್ಸೆ ಸ್ಪಂದಿಸದ ಚೇತನ್ ಚವ್ಹಾಣ್ ಅವರ ಕಿಡ್ನಿ ಕೂಡ ವೈಫಲ್ಯಗೊಂಡಿತು. ಬಹು ಅಂಗಾಂಗ ವೈಫಲ್ಯ ಹಾಗೂ ಕೊರೋನಾ ವೈರಸ್‍ನಿಂದ ತೀವ್ರ ಬಳಲಿದ ಟೀಂ ಇಂಡಿಯಾ ಮಾಜಿ ಮ್ಯಾನೇಜರ್ ಚೇತನ್ ಕೊನೆಯುಸಿರೆಳೆದಿದ್ದಾರೆ.

ಟೀಂ ಇಂಡಿಯಾ ಪರ 40 ಟೆಸ್ಟ್ ಪಂದ್ಯ ಆಡಿರುವ ಚೇತನ್ ಚವ್ಹಾಣ್, ದಿಗ್ಗಜ ಸುನಿಲ್ ಗವಾಸ್ಕರ್ ಅವರ ಆರಂಭಿಕ ಯಶಸ್ವಿ ಜೊತೆಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ದೆಹಲಿ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಟೆಸ್ಟ್ ಬ್ಯಾಟ್ಸ್‌ಮನ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದ ಚೇತನ್ ಚವ್ಹಾನ್ 7 ಏಕದಿನ ಪಂದ್ಯ ಆಡಿದ್ದಾರೆ.

click me!