ಬಾಕ್ಸಿಂಗ್ ಡೇ ಟೆಸ್ಟ್: ಭರ್ಜರಿ ಶತಕ ಬಾರಿಸಿದ ಅಜಿಂಕ್ಯ ರಹಾನೆ

By Suvarna News  |  First Published Dec 27, 2020, 12:23 PM IST

ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ 12ನೇ ಟೆಸ್ಟ್ ಶತಕ ಬಾರಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಮೆಲ್ಬರ್ನ್(ಡಿ.27): ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಆಕರ್ಷಕ ಶತಕ ಬಾರಿಸುವ ಮೂಲಕ ಜವಾಬ್ದಾರಿಯುತ ಪ್ರದರ್ಶನ ತೋರಿದ್ದಾರೆ. ಈ ಸಾಲಿನ ಬಾರ್ಡರ್-ಗವಾಸ್ಕರ್ ಟೆಸ್ಟ್‌ ಸರಣಿಯಲ್ಲಿ ದಾಖಲಾದ ಮೊದಲ ಶತಕ ಇದಾಗಿದೆ.

ಟೀಂ ಇಂಡಿಯಾ ಕೇವಲ 63 ರನ್‌ಗಳಿಗೆ 3 ವಿಕೆಟ್‌ ಕಳೆದುಕೊಂಡಾಗ ಕ್ರೀಸ್‌ಗಿಳಿದ ರಹಾನೆ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ನಾಯಕನ ಆಟ ಪ್ರದರ್ಶಿಸಿದ್ದಾರೆ. ಸಾಕಷ್ಟು ಎಚ್ಚರಿಕೆಯಿಂದ ಬ್ಯಾಟ್ ಬೀಸಿದ ರಹಾನೆ 195 ಎಸೆತಗಳನ್ನು ಎದುರಿಸಿ 11 ಬೌಂಡರಿಗಳ ನೆರವಿನಿಂದ ಟೆಸ್ಟ್‌ ವೃತ್ತಿಜೀವನದ 12ನೇ ಶತಕ ಪೂರೈಸಿದರು.

Tap to resize

Latest Videos

ಬಾಕ್ಸಿಂಗ್ ಡೇ ಟೆಸ್ಟ್‌: ನಾಯಕ ರಹಾನೆ ಆಕರ್ಷಕ ಅರ್ಧಶತಕ

💯 for Ajinkya Rahane 💥

India's stand-in skipper completes his eighth Test century away from home!

Can he get them to a dominant position? pic.twitter.com/iGSZfZM8Xc

— ICC (@ICC)

💯

Captain leading from the front. Brings up a brilliant century. His 12th in Test cricket 👏👏 pic.twitter.com/23w9KS57fw

— BCCI (@BCCI)

ಈ ಶತಕದೊಂದಿಗೆ ಅಜಿಂಕ್ಯ ರಹಾನೆ ಕೆಲವು ಅಪರೂಪದ ದಾಖಲೆಗಳು ನಿರ್ಮಿಸಿದ್ದಾರೆ.
* ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಶತಕ ಬಾರಿಸಿದ 12ನೇ ನಾಯಕ ರಹಾನೆ
* ವಿನು ಮಂಕಡ್ ಬಳಿಕ ಮೆಲ್ಬರ್ನ್ ಕ್ರಿಕೆಟ್‌ ಮೈದಾನದಲ್ಲಿ ಶತಕ ಬಾರಿಸಿದ ಎರಡನೇ ಬ್ಯಾಟ್ಸ್‌ಮನ್ ರಹಾನೆ

click me!