Latest Videos

ಕಾಲಿನಲ್ಲೇ ಬೌಲಿಂಗ್ ಹೆಗಲನ್ನು ಬಳಸಿ ಬ್ಯಾಟಿಂಗ್: ಕೈಗಳೇ ಇಲ್ಲದ ಈ ಹುಡುಗ ಕಾಶ್ಮೀರಿ ಕ್ರಿಕೆಟ್ ಟೀಮ್‌ನ ನಾಯಕ

By Anusha KbFirst Published Jan 12, 2024, 12:41 PM IST
Highlights

ಕೆಲವರು ದೈಹಿಕವಾಗಿ ಸಮರ್ಥವಾಗಿಯೇ ಇರುತ್ತಾರೆ. ಆದರೂ ತಮ್ಮ ಬದುಕಿಗಾಗಿ ಇನ್ನೊಬ್ಬರಿಗೆ ಅವಲಂಬಿತರಾಗಿರುತ್ತಾರೆ. ಕೆಲಸ ಮಾಡದೇ ವಿಧಿಯನ್ನು ಶಪಿಸುತ್ತಿರುತ್ತಾರೆ. ಆದರೆ ಈ ಹುಡುಗನಿಗೆ ಸಂಪೂರ್ಣವಾಗಿ ಎರಡು ಕೈಗಳಿಲ್ಲ. ಆದರೆ ಈತ ಕ್ರಿಕೆಟ್ ಆಡುವ ರೀತಿ ನೋಡಿದರೆ ನೀವು ಬೆರಗಾಗುವುದಂತೂ ಪಕ್ಕಾ. 

ಅನಂತ್‌ನಾಗ್‌: ಕೆಲವರು ದೈಹಿಕವಾಗಿ ಸಮರ್ಥವಾಗಿಯೇ ಇರುತ್ತಾರೆ. ಆದರೂ ತಮ್ಮ ಬದುಕಿಗಾಗಿ ಇನ್ನೊಬ್ಬರಿಗೆ ಅವಲಂಬಿತರಾಗಿರುತ್ತಾರೆ. ಕೆಲಸ ಮಾಡದೇ ವಿಧಿಯನ್ನು ಶಪಿಸುತ್ತಿರುತ್ತಾರೆ. ಆದರೆ ಈ ಹುಡುಗನಿಗೆ ಸಂಪೂರ್ಣವಾಗಿ ಎರಡು ಕೈಗಳಿಲ್ಲ. ಆದರೆ ಈತ ಕ್ರಿಕೆಟ್ ಆಡುವ ರೀತಿ ನೋಡಿದರೆ ನೀವು ಬೆರಗಾಗುವುದಂತೂ ಪಕ್ಕಾ. 

ಈ ಯುವಕನ ಹೆಸರು ಅಮೀರ್ ಹುಸೈನ್ ಲೊನ್, ಜಮ್ಮು ಕಾಶ್ಮೀರದ ಬಿಜ್ಬೆಹರಾದ ವಘಮ್ ಗ್ರಾಮದ ನಿವಾಸಿಯಾದ ಹುಟ್ಟುತ್ತಲೇ ಕೈಗಳಿಲ್ಲದೇ ಹುಟ್ಟಿದವರೇನು ಅಲ್ಲ,. ಆದರೂ ಇವರ ಬದುಕುವ ಛಲವೇನು ಕಡಿಮೆಯದಲ್ಲ, ಕ್ರಿಕೆಟ್‌ನಲ್ಲಿ ಈತನ ಅತೀವವಾದ ಆಸಕ್ತಿಯನ್ನು ನೋಡಿದ ಈತನ ಶಿಕ್ಷಕರು ಈತನನ್ನು ಕಾಶ್ಮೀರದ ಪ್ಯಾರಾ ಕ್ರಿಕೆಟ್ ಟೀಮ್‌ಗೆ ಪರಿಚಯಿಸಿದ್ದರು. ಸಿಕ್ಕ ಅವಕಾಶವನ್ನು ಚೆನ್ನಾಗೆ ಬಳಸಿಕೊಂಡ ಈತ ಈಗ ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಐಕನಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

ಕೈ ಇಲ್ಲದ ಪ್ಯಾರಾ ಆರ್ಚರ್ ಶೀತಲ್‌ ದೇವಿಗೆ ವಿಶ್ವ ನಂ.1 ಪಟ್ಟ..!

24 ವರ್ಷದ ಅಮೀರ್ ಹುಸೈನ್ ಲೋನ್ ಅವರು 2013ರಿಂದಲೂ ಜಮ್ಮು ಕಾಶ್ಮೀರ ಕ್ರಿಕೆಟ್ ತಂಡಕ್ಕೆ ಆಡುತ್ತಿದ್ದಾರೆ. ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡೋದಕ್ಕೂ ಕೈಗಳು ಬೇಕು. ಬ್ಯಾಟಿಂಗ್ ಮಾಡೋದಕ್ಕೂ ಕೈಗಳು ಬೇಕು, ಕ್ಯಾಚ್ ಹಿಡಿಯೋಕು ಕೈಗಳು ಬೇಕು. ಆದರೆ ಕೈ ಗಳಿಲ್ಲದ ಈ ಹುಡುಗನೋರ್ವ ಕ್ರಿಕೆಟ್ ಆಡೋದು ಹೇಗೆ ಎಂಬ ಸಂಶಯ ಎಲ್ಲರಿಗೂ ಬರುವುದು ಸಹಜ. ಆದರೆ ಅಮೀರ್ ಅವರು ತಮ್ಮ ಹೆಗಲು ಹಾಗೂ ಕತ್ತಿನ ಮಧ್ಯದಲ್ಲಿ ಬ್ಯಾಟ್ ಇರಿಸಿಕೊಂಡು ಬ್ಯಾಟಿಂಗ್ ಮಾಡುತ್ತಾರೆ. ಕಾಲನ್ನು ಬಳಸಿ ಬೌಲಿಂಗ್ ಮಾಡುತ್ತಾರೆ. ಎನ್ನಚರಿ ಅಲ್ವಾ?

ಹುಟ್ಟುವಾಗ ಎಲ್ಲರಂತೆ ಸಹಜವಾಗಿ ಎರಡು ಕೈಗಳ ಸಮೇತವೇ ಹುಟ್ಟಿದ ಅಮೀರ್ ಕೈಗಳು ಇಲ್ಲವಾದುದು ಒಂದು ದುರಂತದಲ್ಲಿ.  ತಾವು 8 ವರ್ಷದವರಿದ್ದಾಗ ತನ್ನ ತಂದೆಯ ಮಿಲ್ಲೊಂದರಲ್ಲಿ ಇದ್ದ ಯಂತ್ರವೊಂದಕ್ಕೆ ಸಿಲುಕಿ ಅಮೀರ್ ತಮ್ಮ ಎರಡು ಕೈಗಳನ್ನು ಕಳೆದುಕೊಂಡಿದ್ದರು. ಆದರೆ ಈ ಆಘಾತದಿಂದ ನಿಧಾನವಾಗಿ ಚೇತರಿಸಿಕೊಂಡ ಇವರು ಎಲ್ಲವನ್ನು ಕಾಲುಗಳಿಂದ ಮಾಡಲು ಅಭ್ಯಾಸ ಮಾಡಿಕೊಂಡರು. ಎಲ್ಲೂ ಗೆಲ್ಲುವ ಛಲ ಬಿಡದ ಆಮೀರ್ ಈಗ ಕಾಶ್ಮೀರ ಪ್ಯಾರಾ ಕ್ರಿಕೆಟ್ ತಂಡದ ನಾಯಕರಾಗಿದ್ದಾರೆ. ಕೈಗಳೇ ಇಲ್ಲದ ಆಮೀರ್ ಮಾಡಿದ ಈ ಸಾಧನೆ ಯಾವುದಕ್ಕೂ ಕಡಿಮೆ ಏನಲ್ಲ.

ಪ್ಯಾರಾ ಒಲಂಪಿಕ್‌: ಪ್ರಧಾನಿ ಮೋದಿಗೆ ಭಾರತದಲ್ಲೇ ಸಿಗದಂಥ ಗಿಫ್ಟ್ ಕೊಟ್ಟ ಚಿನ್ನದ ಹುಡುಗಿ ರಕ್ಷಿತಾ ರಾಜು!

ಇದೇ ಕಾರಣಕ್ಕೆ ಈತನ ಜೀವನಾಧರಿತ ಕತೆಯನ್ನು ಸಿನಿಮಾ ಮಾಡಲು ಬಾಲಿವುಡ್‌ನ ಚಲನಚಿತ್ರ ನಿರ್ಮಾಣ ಸಂಸ್ಥೆ ಪಿಕಲ್ ಎಂಟರ್‌ಟೈನ್‌ಮೆಂಟ್‌ ಮುಂದೆ ಬಂದಿದೆ. ಅಮೀರ್ ಹೆಸರಿನ ಈ ಸಿನಿಮಾಗೆ ಬಿಗ್ ಬ್ಯಾಟ್ ಸಂಸ್ಥೆ ಬಂಡವಾಳ ಹೂಡುತ್ತಿದ್ದು, ಮಹೇಶ್ ವಿ ಭಟ್ ನಿರ್ದೇಶನ ಮಾಡಲಿದ್ದಾರೆ. ಆದರೆ ಇವರ ಪಾತ್ರದಲ್ಲಿ ಯಾರು ನಟನೆ ಮಾಡುತ್ತಾರೆ ಎಂಬುದು ಇನ್ನು ಖಚಿತವಾಗಿಲ್ಲ.

ಅದೇನೇ ಇರಲಿ ಒಬ್ಬರು ಕೈಗಳಿಲ್ಲದ ವ್ಯಕ್ತಿ ಈ ಮಟ್ಟದ ಸಾಧನೆ ಮಾಡ್ತಾನೆ ಎಂದರೆ ಕೈಕಾಲು ಸರಿ ಇರುವ ನಾವು ನೀವು ಬದುಕಿನಲ್ಲಿ ಸಾಧಿಸುವುದಕ್ಕೆ ಹಿಂಜರಿದರೆ ವಿಧಿಯನ್ನು ಶಪಿಸುತ್ತಾ ಕೂತರೆ ಅದು ಮೂರ್ಖತನವೇ ಸರಿ ಏನಂತೀರಾ?

| Anantnag, J&K: 34-year-old differently-abled cricketer from Waghama village of Bijbehara. Amir Hussain Lone currently captains Jammu & Kashmir's Para cricket team. Amir has been playing cricket professionally since 2013 after a teacher discovered his cricketing talent… pic.twitter.com/hFfbOe1S5k

— ANI (@ANI)

 

click me!