ಶಿವಂ ದುಬೆ ಮಿಂಚಿನ ಇನ್ನಿಂಗ್ಸ್‌, ಅಫ್ಘಾನಿಸ್ತಾನ ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸಿದ ಭಾರತ!

By Santosh Naik  |  First Published Jan 11, 2024, 10:41 PM IST

ಶಿವಂ ದುಬೆ ಅದ್ಭುತ ಆಲ್ರೌಂಡ್‌ ಆಟದ ನೆರವಿನಿಂದ ಟೀಮ್ ಇಂಡಿಯಾ ಪ್ರವಾಸಿ ಅಫ್ಘಾನಿಸ್ತಾನ ತಂಡವನ್ನು ಮೊದಲ ಟಿ20 ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಮಣಿಸಿದೆ.
 


ಮೊಹಾಲಿ (ಜ.11): ಪ್ರವಾಸಿ ಅಫ್ಘಾನಿಸ್ತಾನ ತಂಡವನ್ನು ಟೀಮ್‌ ಇಂಡಿಯಾ ಮೊದಲ ಟಿ20 ಪಂದ್ಯದಲ್ಲಿ ಏಕಪಕ್ಷೀಯವಾಗಿ 6 ವಿಕೆಟ್‌ಗಳಿಂದ ಮಣಿಸಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಅಫ್ಘಾನಿಸ್ತಾನ ತಂಡ ನಿಗದಿತ ಓವರ್‌ಗಳಲ್ಲಿ 158 ರನ್‌ ಪೇರಿಸಿತು. ಪ್ರತಿಯಾಗಿ ಭಾರತ ತಂಡ ಇನ್ನೂ 15 ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್‌ ನಷ್ಟಕ್ಕೆ 159 ರನ್‌ ಬಾರಿಸಿ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆಗೇರಿತು. ಆಲ್ರೌಂಡರ್‌ ಶಿವಂ ದುಬೆ 40 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ಗಳಿದ್ದ ಅಜೇಯ 60 ರನ್‌ ಬಾರಿಸಿ ಟೀಮ್‌ ಇಂಡಿಯಾ ಗೆಲುವಿಗೆ ಕಾರಣರಾದರು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರ ಜೀವನಶ್ರೇಷ್ಠ ಮೊತ್ತವಾಗಿದೆ. ಕೇವಲ 38 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ  ಎಡಗೈ ಬ್ಯಾಟ್ಸ್‌ಮನ್‌, ಬೌಲಿಂಗ್‌ ವೇಳೆ ಎರಡು ಓವರ್‌ ಎಸೆದು 9 ರನ್‌ ನೀಡಿದ 1 ವಿಕೆಟ್‌ ಉರುಳಿಸಿದ್ದರು. ಇನ್ನೊಂದೆಡೆ ರಿಂಕು ಸಿಂಗ್‌ 9 ಎಸೆತಗಳಲ್ಲಿ ಅಜೇಯ 16 ರನ್‌ ಬಾರಿಸಿದರು.

IND vs AFG 1st T20I: ಟಾಸ್‌ ವೇಳೆ ಪ್ಲೇಯಿಂಗ್‌ ಇಲೆವೆನ್‌ ಮರೆತು ಹೋದ ರೋಹಿತ್‌ ಶರ್ಮ

ಪಂಜಾಬ್‌ ಕ್ರಿಕೆಟ್‌ ಸಂಸ್ಥೆ ಐಎಸ್‌ ಬಿಂದ್ರಾ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಜಿತೇಶ್‌ ಶರ್ಮ 20 ಎಸೆತಗಳಲ್ಲಿ 31 ರನ್‌ ಬಾರಿಸಿ ಮಿಂಚಿದ್ದರು. ಸರಣಿಯ 2ನೇ  ಪಂದ್ಯದ ಭಾನುವಾರ ಇಂದೋರ್‌ನಲ್ಲಿ ನಡೆಯಲಿದೆ. 2019ರಲ್ಲಿ ಭಾರತದ ಪರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರೂ, ಶಿವಂ ದುಬೆ ತಂಡದಲ್ಲಿ ಉತ್ತಮ ಎನಿಸುವಂಥ ನಿರ್ವಹನೆ ನೀಡಿರಲಿಲ್ಲ. ಆದರೆ, ಗುರುವಾರ ತಮಗೆ ಸಿಕ್ಕ ಅವಕಾಶವನ್ನೂ ಉತ್ತಮವಾಗಿ ಬಳಸಿಕೊಂಡಲು. ಮೊದಲಿಗೆ ಬೌಲಿಂಗ್‌ನಲ್ಲಿ ಗಮನಸೆಳೆದ ಅವರು  ಆ ಬಳಿಕ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಗೆಲುವಿನ ಇನ್ನಿಂಗ್ಸ್‌ ಆಡಿದರು. ಶಿವಂ ದುಬೆ ಅವರ ಆಟದಲ್ಲಿ ಐಪಿಎಲ್‌ನ ಅನುಭವ ಕಾಣಿಸಿತು. ಐಪಿಎಲ್‌ನಲ್ಲಿ ಅವರು ಎಂಎಸ್‌ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್‌ ಪರವಾಗಿ ಆಡುತ್ತಿದ್ದಾರೆ.

Latest Videos

ವಮಿಕಾಗೆ ಅಂಥದ್ದೇನಾಗಿದೆ..? ಮಗಳ ಮುಖ ತೋರಿಸಲು ವಿರಾಟ್ ಕೊಹ್ಲಿಗೆ ಅಂಜಿಕೆಯೇಕೆ..? ಇಲ್ಲಿದೆ ಕಾರಣ!

click me!