ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೂ ಮುನ್ನ ಆಸ್ಟ್ರೇಲಿಯಾ ಮಾಧ್ಯಮಗಳಲ್ಲಿ ವಿರಾಟ್ ಕೊಹ್ಲಿ ಗುಣಗಾನ ಆರಂಭವಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಪರ್ತ್: ಭಾರತ-ಆಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ಟೆಸ್ಟ್ ಸರಣಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಸರಣಿಗೆ ಆಸ್ಟ್ರೇಲಿಯಾದ ಸುದ್ದಿ ಪತ್ರಿಕೆಗಳು ದೊಡ್ಡ ಪ್ರಚಾರ ನೀಡುತ್ತಿವೆ. ಆ ದೇಶದ ಬಹುತೇಕ ಪತ್ರಿಕೆಗಳಲ್ಲಿ ವಿರಾಟ್ ಕೊಹ್ಲಿಯನ್ನು ಕೊಂಡಾಡಿ ಬರೆಯಲಾಗಿದೆ.
ಪ್ರತಿಷ್ಠಿತ ದಿ ಡೈಲಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಕೊಹ್ಲಿಯ ದೊಡ್ಡ ಪೋಸ್ಟರ್ ಜೊತೆಗೆ ಹಿಂದಿ ಯಲ್ಲಿ ಇದು ಯುಗಗಳ ಹೋರಾಟ' ಎಂಬ ಶೀರ್ಷಿಕೆ ಅಡಿ ಸುದ್ದಿ ಪ್ರಕಟಿಸಲಾಗಿದೆ. ಕೊಹ್ಲಿಗೆ ಆಸ್ಟ್ರೇಲಿಯಾದಲ್ಲಿ ಇದು ಬಹುತೇಕ ಕೊನೆಯ ಸರಣಿ ಆಗಬಹುದು ಎನ್ನುವ ಕಾರಣಕ್ಕೆ, ಇಷ್ಟೊಂದು ಮಹತ್ವ ನೀಡಲಾಗುತ್ತಿದೆ.
Australian Newspapers welcome Virat Kohli with Hindi. When your Aura is so strong that languages change, borders disappear and rivals become fans pic.twitter.com/r3yXQVyCmv
— Sagar (@sagarcasm)undefined
ಮೊಹಮ್ಮದ್ ಶಮಿ ಇಲ್ವಲ್ಲ, ಭಾರತ 1-3 ಅಂತರದಲ್ಲಿ ಟೆಸ್ಟ್ ಸರಣಿ ಸೋಲುತ್ತದೆ: ರಿಕಿ ಪಾಂಟಿಂಗ್ ಭವಿಷ್ಯ
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಪಂದ್ಯ ನವೆಂಬರ್ 22ರಿಂದ ಪರ್ತ್‌ನಲ್ಲಿ, 2ನೇ ಪಂದ್ಯ ಡಿಸೆಂಬರ್ 6ರಿಂದ ಅಡಿಲೇಡ್‌ನಲ್ಲಿ ನಿಗದಿಯಾಗಿದೆ. ಬಳಿಕ ಬ್ರಿಸ್ಟೇನ್‌ನಲ್ಲಿ ಡಿಸೆಂಬರ್ 14ರಿಂದ 3ನೇ ಟೆಸ್ಟ್, ಮೆಲ್ಬರ್ನ್‌ನಲ್ಲಿ ಡಿಸೆಂಬರ್ 26ರಿಂದ 4ನೇ ಟೆಸ್ಟ್ ಹಾಗೂ 2025ರ ಜನವರಿ 3ರಿಂದ ಸಿಡ್ನಿಯಲ್ಲಿ ಕೊನೆ ಪಂದ್ಯ ನಡೆಯಲಿದೆ.
Just Virat Kohli things. pic.twitter.com/UD74XshdWs
— Mufaddal Parody (@mufaddal_voira)ಪರ್ತ್ ಟೆಸ್ಟ್‌ಗೆ ಅಪಾಯಕಾರಿ ಬೌನ್ಸಿ ಪಿಚ್?
ಪರ್ತ್: ನವೆಂಬರ್ 22ರಿಂದ ಆರಂಭಗೊಳ್ಳಲಿರುವ 5 ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಬೌನ್ಸಿ ಪಿಚ್ ನೊಂದಿಗೆ ಸ್ವಾಗತಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಸಿದ್ಧತೆ ನಡೆಸುತ್ತಿದೆ. ಇಲ್ಲಿನ ಓಪ್ಟಸ್ ಕ್ರೀಡಾಂಗಣದಲ್ಲಿ ನಡೆಯಲಿರುವ ಮೊದಲ ಟೆಸ್ಟ್‌ಗೆ ಹೆಚ್ಚು ವೇಗ ಹಾಗೂ ಬೌನ್ಸ್ ಇರಲಿರುವ ಸಿದ್ಧಗೊಳಿಸಲಾಗುತ್ತಿದೆ ಎಂದು ಪಿಚ್ ಕ್ಯುರೇಟರ್ ಎಚ್ಚರಿಸಿದ್ದಾರೆ.
ಗೌತಮ್ ಗಂಭೀರ್ ಸುದ್ದಿಗೋಷ್ಠಿ ಮಾಡಬಾರದು, ಅವರ ಹೇಳಿಕೆಗಳು ಸರಿಯಿಲ್ಲ: ಸಂಜಯ್ ಮಂಜ್ರೇಕರ್
ಮೊದಲ ಟೆಸ್ಟ್‌ಗೆ ಭಾರತ ತಂಡ ಯಾವುದೇ ಪಂದ್ಯವನ್ನಾಡದೆ ಕಾಲಿಡಲಿದೆ. ತಂಡದೊಳಗೇ ಒಂದು ಅಭ್ಯಾಸ ನಿಗದಿಪಡಿಸಲಾಗಿತ್ತಾದರೂ, ಪ್ರಧಾನ ಕೋಚ್ ಗೌತಮ್ ಗಂಭೀರ್ ನೇತೃತ್ವದ ತಂಡದ ಆಡಳಿತ ಅದನ್ನು ರದ್ದುಗೊಳಿಸಿ, ನೆಟ್ ಅಭ್ಯಾಸದ ಗಮನ ಹರಿಸಲು ನಿರ್ಧರಿಸಿತು.
ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಸೋಮವಾರ ಪರ್ತ್ ತಲುಪಿದ್ದ ಭಾರತೀಯ ಆಟಗಾರರು, ಮಂಗಳವಾರ ಬೆಳಗ್ಗೆಯೇ ಅಭ್ಯಾಸ ಆರಂಭಿಸಿದರು. ಓಪ್ಟಸ್ ಕ್ರೀಡಾಂಗಣದ ಹತ್ತಿರದಲ್ಲೇ ಇರುವ ಪಶ್ಚಿಮ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ (ವಾಕಾ) ಕ್ರೀಡಾಂಗಣದಲ್ಲಿ ಭಾರತ ತಂಡ ಅಭ್ಯಾಸ ನಡೆಸುತ್ತಿದೆ. ಓಪ್ಟಸ್ ಪಿಚ್ ಸಹ ವಾಕಾ ಪಿಚ್ ರೀತಿಯೇ ಹೆಚ್ಚು ಬೌನ್ಸ್ ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.
ಪರ್ತ್ ಟೆಸ್ಟ್‌ಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:
ಪ್ಯಾಟ್ ಕಮಿನ್ಸ್(ನಾಯಕ), ಸ್ಕಾಟ್ ಬೊಲೆಂಡ್, ಅಲೆಕ್ಸ್ ಕ್ಯಾರಿ, ಜೋಶ್ ಹೇಜಲ್‌ವುಡ್, ಟ್ರ್ಯಾವಿಸ್ ಹೆಡ್, ಜೋಶ್ ಇಂಗ್ಲಿಶ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ನೇಥನ್ ಲಯನ್, ಮಿಚೆಲ್ ಮಾರ್ಷ್, ನೇಥನ್ ಮೆಕ್‌ಸ್ವೀನಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್.
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಶುಭ್‌ಮನ್ ಗಿಲ್, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್, ರಿಷಭ್ ಪಂತ್, ಸರ್ಫರಾಜ್ ಖಾನ್, ಧೃವ್ ಜುರೆಲ್, ಆರ್.ಅಶ್ವಿನ್, ರವೀಂದ್ರ ಜಡೇಜಾ, ಮೊಹಮದ್ ಸಿರಾಜ್, ಆಕಾಶ್‌ದೀಪ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್.