ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯನ್ನಾಡಲು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಭಾನುವಾರ ಕಾಂಗರೂ ನಾಡಿಗೆ ಹಾರಲಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಪರ್ತ್: ಭಾರತ ತಂಡದ ಖಾಯಂ ನಾಯಕ ರೋಹಿತ್ ಶರ್ಮಾ ಭಾನುವಾರ ಮುಂಬೈನಿಂದ ಆಸ್ಟ್ರೇಲಿಯಾದ ಪರ್ತ್‌ಗೆ ತೆರಳಲಿದ್ದಾರೆ. ತಮ್ಮ ಪತ್ನಿ 2ನೇ ಮಗುವಿಗೆ ಜನ್ಮ ನೀಡಿದ ಕಾರಣ ರೋಹಿತ್ ಶರ್ಮಾ ಭಾರತದಲ್ಲೇ ಉಳಿದಿದ್ದು, ಮೊದಲ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ. ಭಾನುವಾರ ಪರ್ತ್‌ಗೆ ತೆರಳಿ ತಂಡ ಕೂಡಿ ಕೊಳ್ಳಲಿದ್ದು, 2ನೇ ಟೆಸ್ಟ್‌ಗೆ ಲಭ್ಯವಿರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ರೋಹಿತ್ ಶರ್ಮಾ ಕೆಲ ದಿನಗಳಿಂದ ಮುಂಬೈನಲ್ಲೇ ಅಭ್ಯಾಸ ನಡೆಸುತ್ತಿದ್ದಾರೆ. ಇದೀಗ ಭಾನುವಾರ ರೋಹಿತ್ ಶರ್ಮಾ, ಕಾಂಗರೂ ನಾಡಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವರದಿಯಾಗಿದೆ. ಪರ್ತ್ ಟೆಸ್ಟ್ ಬಳಿಕ ಡಿಸೆಂಬರ್ 06ರಿಂದ ಅಡಿಲೇಡ್ ಓವಲ್ ಮೈದಾನದಲ್ಲಿ ಪಿಂಕ್ ಬಾಲ್ ಟೆಸ್ಟ್ ಪಂದ್ಯವು ನಡೆಯಲಿದೆ. ಇನ್ನು ಡಿಸೆಂಬರ್ 14ರಿಂದ ಗಾಬಾದಲ್ಲಿ ಮೂರನೇ ಟೆಸ್ಟ್ ಪಂದ್ಯವು ನಡೆದರೆ, ಡಿಸೆಂಬರ್ 26ರಿಂದ ಐತಿಹಾಸಿಕ ಮೆಲ್ಬೊರ್ನ್ ಸ್ಟೇಡಿಯಂನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವು ನಡೆಯಲಿದೆ. ಇನ್ನು ಜನವರಿ 03ರಿಂದ ಸಿಡ್ನಿ ಕ್ರಿಕೆಟ್ ಸ್ಟೇಡಿಯಂನಲ್ಲಿ 5ನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ನಡೆಯಲಿದೆ.
undefined
ಪರ್ತ್ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ; ಆರಂಭದಲ್ಲೇ ಶಾಕ್!
ಗದ್ದಲ, ಟೀಕೆಗೆ ಕಿವಿಗೊಡಬೇಡಿ: ಗೌತಿಗೆ ಶಾಸ್ತ್ರಿ ಸಲಹೆ
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗೂ ಮುನ್ನ ಭಾರತದ ಕೋಚ್ ಗೌತಮ್ ಗಂಭೀರ್‌ಗೆ ಮಾಜಿ ಕೋಚ್ ರವಿ ಶಾಸ್ತ್ರಿ ಸಲಹೆ ನೀಡಿದ್ದು, ಹೊರಗಿನ ಗದ್ದಲ, ಟೀಕೆಗೆ ಕಿವಿಗೊಡಬೇಡಿ ಎಂದಿದ್ದಾರೆ.
'ಸ್ಟಾರ್‌ಸ್ಪೋರ್ಟ್ ಪ್ರೆಸ್ ರೂಂ' ವಿಡಿಯೋ ಕಾನ್ಸರೆನ್ಸ್‌ನಲ್ಲಿ ಮಾತನಾಡಿದ ಶಾಸ್ತ್ರಿ 'ಗಂಭೀರ್ ಸರಣಿ ವೇಳೆ ಶಾಂತಚಿತ್ತವಾಗಿರಬೇಕು. ಹೊರಗಿನ ಗದ್ದಲ, ಟೀಕೆಗೆ ಕಿವಿಗೊಡಬಾರದು' ಎಂದಿದ್ದಾರೆ.
ಶಾಸ್ತ್ರಿ ಜೊತೆ ಕ್ರಿಕೆಟಿಗ ಚೇತೇಶ್ವರ ಪೂಜಾರ ಕೂಡಾ ಕಾನ್ಸರೆನ್ಸ್‌ನಲ್ಲಿ ಪಾಲ್ಗೊಂಡರು. 'ಕೆ.ಎಲ್.ರಾಹುಲ್ ಭಾರತದ ಪ್ರತಿಭಾವಂತ ಆಟಗಾರ. ಈ ಸರಣಿಯಲ್ಲಿ ಭಾರತ ಗೆಲ್ಲಬೇಕಿದ್ದರೆ ರಾಹುಲ್ ಪ್ರದರ್ಶನ ನಿರ್ಣಾಯಕ ಎಂದರು.
ಟಿ20 ಕ್ರಿಕೆಟ್‌ನಲ್ಲಿ ನಂ.1 ಆಲ್ರೌಂಡರ್ ಆಗಿ ಹೊರಹೊಮ್ಮಿದ ಹಾರ್ದಿಕ್ ಪಾಂಡ್ಯ! ತಿಲಕ್ ವರ್ಮಾ ಲಾಂಗ್ ಜಂಪ್
ಟಿ20: ಹಾರ್ದಿಕ್ ಪಾಂಡ್ಯ ಮತ್ತೆ ನಂ.1 ಆಲ್ರೌಂಡರ್
ದುಬೈ: ಭಾರತದ ತಾರಾ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಐಸಿಸಿ ಟಿ20 ಆಲ್ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ್ದಾರೆ. ಬುಧವಾರ ಪ್ರಕಟಗೊಂಡ ನೂತನ ಪಟ್ಟಿಯಲ್ಲಿ ಹಾರ್ದಿಕ್ 2 ಸ್ಥಾನ ಪ್ರಗತಿ ಸಾಧಿಸಿದರು.
ಇನ್ನು ಬ್ಯಾಟರ್‌ಗಳ ಪಟ್ಟಿಯಲ್ಲಿ ಒಂದೇ ಬಾರಿ 69 ಸ್ಥಾನ ಏರಿಕೆ ಕಂಡ ತಿಲಕ್ ವರ್ಮಾ ಜೀವನಶ್ರೇಷ್ಠ 3ನೇ ಸ್ಥಾನ ಪಡೆದಿದ್ದಾರೆ. ಲಿಸಂಜು ಸ್ಯಾಮ್ಸನ್ 17 ಸ್ಥಾನ ಜಿಗಿತ ಕಂಡು 22ನೇ ಸ್ಥಾನ ಪಡೆದಿದ್ದಾರೆ. ತಿಲಕ್ ಮತ್ತು ಸಂಜು ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ತಲಾ 2 ಶತಕ ಬಾರಿಸಿದ್ದರು.