ಒಂದೇ ಎಸೆತದಲ್ಲಿ ಬ್ಯಾಟ್ಸ್‌ಮನ್‌ ಎರಡು ಬಾರಿ ರನೌಟ್‌! ವಿಡಿಯೋ ವೈರಲ್

Published : Jan 26, 2021, 03:55 PM IST
ಒಂದೇ ಎಸೆತದಲ್ಲಿ ಬ್ಯಾಟ್ಸ್‌ಮನ್‌ ಎರಡು ಬಾರಿ ರನೌಟ್‌! ವಿಡಿಯೋ ವೈರಲ್

ಸಾರಾಂಶ

ಬಿಗ್‌ಬ್ಯಾಶ್ ಟೂರ್ನಿಯಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಬ್ಯಾಟ್ಸ್‌ಮನ್‌ವೊಬ್ಬ ಒಂದೇ ಎಸೆತದಲ್ಲಿ ಎರಡೆರಡು ಬಾರಿ ರನೌಟ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾನೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಡಿಲೇಡ್(ಜ.26)‌: ಒಂದೇ ಎಸೆತದಲ್ಲಿ ಬ್ಯಾಟ್ಸ್‌ಮನ್‌ ಒಬ್ಬ 2 ಬಾರಿ ರನೌಟ್‌ ಆದ ಅಪರೂಪದ ಪ್ರಸಂಗ ಭಾನುವಾರ ಆಸ್ಪ್ರೇಲಿಯಾದ ಬಿಗ್‌ಬ್ಯಾಶ್‌ ಟಿ20ಯಲ್ಲಿ ನಡೆದಿದೆ. 

ಸಿಡ್ನಿ ಥಂಡರ್‌ ವಿರುದ್ಧದ ಪಂದ್ಯದಲ್ಲಿ ಅಡಿಲೇಡ್‌ ಸ್ಟ್ರೈಕ​ರ್ಸ್ ತಂಡದ ಬ್ಯಾಟ್ಸ್‌ಮನ್‌ ಜ್ಯಾಕ್‌ ವೀಥರಾಲ್ಡ್‌ 2 ಬಾರಿ ರನೌಟ್‌ ಆದ ಆಟಗಾರ. ಫಿಲ್‌ ಸಾಲ್ಟ್‌ ಬಾರಿಸಿದ ಚೆಂಡು ಬೌಲರ್‌ ಕ್ರಿಸ್‌ ಗ್ರೀನ್‌ಗೆ ಕೈಗೆ ತಗುಲಿ ವಿಕೆಟ್‌ಗೆ ಬಡಿಯವ ವೇಳೆಗೆ ವೀಥರಾಲ್ಡ್‌ ಕ್ರೀಸ್‌ ಬಿಟ್ಟಿದ್ದರು.  ಚೆಂಡು ವಿಕೆಟ್‌ಗೆ ಬಡಿದು ಕವರ್‌ ಕ್ಷೇತ್ರದತ್ತ ಹೋದ ಕಾರಣ ರನ್‌ ಕದಿಯಲು ಯತ್ನಿಸಿದ ಜ್ಯಾಕ್‌, ಸ್ಟ್ರೈಕರ್‌ ಬದಿಯಲ್ಲೂ ರನೌಟ್‌ ಆದರು. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಲಂಕಾ ವಿರುದ್ಧ ಇಂಗ್ಲೆಂಡ್‌ 2-0 ಸರಣಿ ಕ್ಲೀನ್‌ ಸ್ವೀಪ್‌

ಅಡಿಲೇಡ್‌ ಸ್ಟ್ರೈಕರ್ಸ್‌ ತಂಡದ ಕೋಚ್ ಜೇಸನ್‌ ಗಿಲೆಸ್ಪಿ, ಈ ರೀತಿಯ ರನೌಟ್‌ ಆಗಿದ್ದು ಇದೇ ಮೊದಲು ಎಂದು ಹೇಳಿದ್ದಾರೆ. ಇನ್ನು ಆಸೀಸ್‌ ಮಾಜಿ ವೇಗಿ ಬ್ರೆಟ್‌ ಲೀ ನಾನು ಯಾವತ್ತಿಗೂ ಒಬ್ಬ ಬ್ಯಾಟ್ಸ್‌ಮನ್‌ ಎರಡೆರಡು ಬಾರಿ ರನೌಟ್ ಆಗಿದ್ದನ್ನು ನೋಡಿಲ್ಲ ಎಂದು ಕಾಮೆಂಟರಿ ವೇಳೆ ಹೇಳಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

2000ರ U19 ವಿಶ್ವಕಪ್ ಹೀರೋ: ಕ್ರಿಕೆಟ್ ಇತಿಹಾಸದ 'ದಿ ಬೆಸ್ಟ್' ಆಲ್‌ರೌಂಡರ್ ಆಗಬೇಕಿದ್ದವನ ದುರಂತ ಕಥೆ!
ಪಾಕಿಸ್ತಾನ ಕೇವಲ 55 ರನ್‌ಗೆ ಆಲೌಟ್, 7 ವಿಕೆಟ್ ಗೆಲುವು ದಾಖಲಿಸಿ ದಾಖಲೆ ಬರೆದ ಭಾರತ ಮಹಿಳಾ ತಂಡ