ಇಂದಿನಿಂದ ಭಾರತ vs ಕಿವೀಸ್‌ ಟಿ20 ಚಾಲೆಂಜ್‌; ಟೀಂ ಇಂಡಿಯಾದ ಪ್ಲಸ್‌ ಮತ್ತು ಮೈನಸ್‌ ಏನು?

Kannadaprabha News   | Kannada Prabha
Published : Oct 22, 2026, 08:46 AM IST
Team India

ಸಾರಾಂಶ

ವೆಸ್ಟ್‌ಇಂಡೀಸ್‌ ಸರಣಿ ಮುಗಿದ ಬೆನ್ನಲ್ಲೇ ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ 5 ಪಂದ್ಯಗಳ ಟಿ20 ಸರಣಿಗೆ ಸಜ್ಜಾಗಿದೆ. ಯುವ ಪಡೆಯೊಂದಿಗೆ ಕಣಕ್ಕಿಳಿಯುತ್ತಿರುವ ಟೀಂ ಇಂಡಿಯಾಗೆ ಬಲಿಷ್ಠ ಕಿವೀಸ್ ಆಟಗಾರರಿಂದ ಕಠಿಣ ಸವಾಲು ಎದುರಾಗುವ ಸಾಧ್ಯತೆಯಿದೆ. 4 ವರ್ಷಗಳ ಬಳಿಕ ಭುವನೇಶ್ವರ್‌ ಕುಮಾರ್‌ ತಂಡಕ್ಕೆ ಮರಳಿರುವುದು ಬೌಲಿಂಗ್‌ ವಿಭಾಗದ ಬಲ ಹೆಚ್ಚಿಸಿದೆ.

ಕ್ರೈಸ್ಟ್‌ಚರ್ಚ್‌: ವೆಸ್ಟ್‌ಇಂಡೀಸ್‌ ವಿರುದ್ಧ ಸರಣಿ ಮುಗಿದು 4 ದಿನಗಳಾಗುತ್ತಲೇ ಭಾರತ ತಂಡ ಈಗ ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿಗೆ ಸಜ್ಜಾಗಿದೆ. ಗುರುವಾರದಿಂದ ಉಭಯ ತಂಡಗಳ ನಡುವೆ ನ್ಯೂಜಿಲೆಂಡ್‌ನಲ್ಲಿ 5 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ.

ಭಾರತ ಕಳೆದೆರಡು ಟಿ20 ಸರಣಿಗಳಲ್ಲಿ ಗೆದ್ದಿದೆ. ಆದರೆ ಈಗ ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳುತ್ತಿರುವುದರಿಂದ ತಂಡಕ್ಕೆ ಅಲ್ಲಿ ಕಠಿಣ ಸವಾಲು ಎದುರಾಗುವುದು ಖಚಿತ. ಹೀಗಾಗಿ ಸರಣಿ ಗೆಲುವಿಗಾಗಿ ತಂಡ ಭಾರೀ ಪರಿಶ್ರಮ ಪಡಬೇಕಿದೆ. ಭಾರತ ಕೊನೆ ಬಾರಿ ನ್ಯೂಜಿಲೆಂಡ್‌ನಲ್ಲಿ ಟಿ20 ಆಡಿದ್ದು 2022ರಲ್ಲಿ. ಮಳೆ ಪೀಡಿತ ಆ ಸರಣಿಯಲ್ಲಿ ಭಾರತ 1-0 ಅಂತರದಲ್ಲಿ ಗೆದ್ದಿತ್ತು. ಅಲ್ಲದೆ, ಈ ಬಾರಿ ತಂಡ ವಿಶ್ವ ಚಾಂಪಿಯನ್‌ ಪಟ್ಟದೊಂದಿಗೆ, ಹೆಚ್ಚಿನ ಯುವ ಪ್ರತಿಭೆಗಳೊಂದಿಗೆ ಆಡುತ್ತಿರುವುದರಿಂದಾಗಿ ಸಹಜವಾಗಿಯೇ ತಂಡ ಸರಣಿ ಗೆಲುವಿನ ವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಆದರೆ ತಂಡಕ್ಕೆ ಅನುಭವಿಗಳ ಕೊರತೆ ಉಂಟಾಗಬಹುದು.

ಭಾರತ ತಂಡಕ್ಕೆ ಸ್ಥಿರತೆಯೇ ಸವಾಲು

ಭಾರತ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿದ್ದರೂ, ಸ್ಥಿರತೆ ಕಾಯ್ದುಕೊಳ್ಳಲು ಹಲವು ಬ್ಯಾಟರ್ಸ್‌ ವಿಫಲರಾಗುತ್ತಿದ್ದಾರೆ. ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌, ತಿಲಕ್‌ ವರ್ಮಾ, ಶ್ರೇಯಸ್‌, ಇಶಾನ್‌ ಕಿಶನ್‌ ಸ್ಥಿರ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಆಲ್ರೌಂಡ್‌ ವಿಭಾಗದಲ್ಲಿ ಅಕ್ಷರ್‌ ಪಟೇಲ್‌, ಶಿವಂ ದುಬೆ, ನಿತೀಶ್‌ ತಂಡಕ್ಕೆ ನೆರವಾಗಬೇಕಿದೆ.

4 ವರ್ಷಗಳ ಬಳಿಕ ಭಾರತ ಟಿ20 ತಂಡಕ್ಕೆ ಮರಳಿರುವ ಭುವನೇಶ್ವರ್‌ ಕುಮಾರ್‌, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ಅವರು ತಂಡಕ್ಕೆ ಮರಳಿರುವುದು ಬೌಲಿಂಗ್‌ ಪಡೆಯ ಆತ್ಮವಿಶ್ವಾಸ ಹೆಚ್ಚಿಸಿದೆ.

ಜಯದ ವಿಶ್ವಾಸ:

ನ್ಯೂಜಿಲೆಂಡ್‌ ತಂಡದಲ್ಲಿ ವಿಶ್ವಶ್ರೇಷ್ಠ ಬ್ಯಾಟರ್ಸ್‌ ಹಾಗೂ ಬೌಲರ್‌ಗಳಿದ್ದು, ಈ ಸರಣಿಯಲ್ಲಿ ಭಾರತಕ್ಕೆ ಕಠಿಣ ಸವಾಲು ನೀಡುವುದು ಖಚಿತ. ಫಿನ್‌ ಆ್ಯಲೆನ್‌, ಟಿಮ್‌ ಸೀಫರ್ಟ್‌ ಸ್ಫೋಟಕ ಆಟ, ಡೆವೋನ್‌ ಕಾನ್‌ವೇ, ಡ್ಯಾರಿಲ್‌ ಮಿಚೆಲ್‌, ಗ್ಲೆನ್‌ ಫಿಲಿಪ್ಸ್‌ ಬ್ಯಾಟಿಂಗ್‌ ತಂಡದ ಬಲ. ನಾಯಕ ಮಿಚೆಲ್‌ ಸ್ಯಾಂಟ್ನರ್‌ ಹಾಗೂ ಬ್ರೇಸ್‌ವೆಲ್‌ ಆಲ್ರೌಂಡ್‌ ಆಟದ ಮೂಲಕ ತಂಡಕ್ಕೆ ಗೆಲುವು ತಂದುಕೊಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಜೇಮಿಸನ್‌, ಮ್ಯಾಟ್‌ ಹೆನ್ರಿ, ಫರ್ಗ್ಯೂಸನ್‌ ಇದ್ದಾರೆ.

ಪಂದ್ಯ ಆರಂಭ: ಮಧ್ಯಾಹ್ನ 12.30ಕ್ಕೆ

ಪ್ರಸಾರ: ಸೋನಿ ಸ್ಪೋರ್ಟ್ಸ್‌, ಸೋನಿ ಲೈವ್‌.

02 ಸರಣಿ: ಭಾರತ ತಂಡ ನ್ಯೂಜಿಲೆಂಡ್‌ನಲ್ಲಿ ಆಡಿದ ಕೊನೆ 2 ಟಿ20 ಸರಣಿಯಲ್ಲೂ ಗೆದ್ದಿದೆ. ಈಗ ಹ್ಯಾಟ್ರಿಕ್‌ ವಿಶ್ವಾಸದಲ್ಲಿದೆ.

08 ಪಂದ್ಯ: ನ್ಯೂಜಿಲೆಂಡ್‌ನಲ್ಲಿ ನಡೆದ ಕೊನೆ 8 ಅಂ.ರಾ. ಟಿ20 ಪಂದ್ಯಗಳ ಪೈಕಿ ಒಂದರಲ್ಲೂ 200+ ರನ್‌ ದಾಖಲಾಗಿಲ್ಲ.

ಜಿಂಬಾಬ್ವೆ ವಿರುದ್ಧ ಭಾರತ ಮಹಿಳೆಯರು ಕ್ಲೀನ್‌ಸ್ವೀಪ್‌

ರಾಯ್ಪುರ: ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಭಾರತ ಮಹಿಳಾ ತಂಡ 3-0 ಅಂತರದಲ್ಲಿ ಕ್ಲೀನ್‌ಸ್ವೀಪ್‌ ಮಾಡಿಕೊಂಡಿದೆ. ಮಂಗಳವಾರ ನಡೆದ 3ನೇ ಪಂದ್ಯದಲ್ಲಿ ಭಾರತ 92 ರನ್‌ಗಳಿಂದ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿದ ಭಾರತ 7 ವಿಕೆಟ್‌ಗೆ 216 ರನ್‌ ಸಿಡಿಸಿತು. ನಾಯಕಿ ಸ್ಮೃತಿ ಮಂಧನಾ ಬ್ಯಾಟಿಂಗ್‌ಗೆ ಆಗಮಿಸಲಿಲ್ಲ. ಶಫಾಲಿ 69, ಮಾಜಿ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಔಟಾಗದೆ 91 ರನ್‌ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ಜಿಂಬಾಬ್ವೆ 7 ವಿಕೆಟ್‌ಗೆ 124 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭುವಿ ಬಗ್ಗೆ ಬಿಗ್‌ ಅಪ್‌ಡೇಟ್ಸ್‌ ಕೊಟ್ಟ ಬಿಸಿಸಿಐ, ನಾಳೆಯ ಪಂದ್ಯಕ್ಕೂ ಮೊದಲೇ ಫ್ಯಾನ್ಸ್‌ ಫುಲ್‌ ಖುಷ್
ಸದ್ಯಕ್ಕೆ ಟೀಂ ಇಂಡಿಯಾ ಬಾಗಿಲು ಬಂದ್? ನೇರವಾಗಿ ಪ್ಲೇಯಿಂಗ್ 11ಗೆ ಬರೋಕಾಗಲ್ಲ: ವೈಭವ್ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು?