ಭುವಿ ಬಗ್ಗೆ ಬಿಗ್‌ ಅಪ್‌ಡೇಟ್ಸ್‌ ಕೊಟ್ಟ ಬಿಸಿಸಿಐ, ನಾಳೆಯ ಪಂದ್ಯಕ್ಕೂ ಮೊದಲೇ ಫ್ಯಾನ್ಸ್‌ ಫುಲ್‌ ಖುಷ್

Published : Oct 21, 2026, 10:33 PM IST
Bhuvneshwar Kumar return

ಸಾರಾಂಶ

ನಾಲ್ಕು ವರ್ಷಗಳ ಬಳಿಕ ಭುವನೇಶ್ವರ್‌ ಕುಮಾರ್‌ ಟೀಂ ಇಂಡಿಯಾಗೆ ಕಂಬ್ಯಾಕ್‌ ಮಾಡಿದ್ದು, ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿದ್ದಾರೆ. ಜಸ್‌ಪ್ರಿತ್‌ ಬುಮ್ರಾ ಅನುಪಸ್ಥಿತಿಯಲ್ಲಿ ಭುವಿ ಎಂಟ್ರಿ ತಂಡದ ನಿರೀಕ್ಷೆಗಳನ್ನು ಹೆಚ್ಚಿಸಿದೆ. ಬಿಸಿಸಿಐ ಅವರ ಅಭ್ಯಾಸದ ವಿಡಿಯೋ ಹಂಚಿಕೊಂಡಿದ್ದು, ಸ್ವಿಂಗ್‌ಗೆ ನೆರವಾಗುವ ಪಿಚ್‌ನಲ್ಲಿ ಅವರ ಆಟದ ಕುತೂಹಲ ಮೂಡಿದೆ.

ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಕಂಬ್ಯಾಕ್‌ ಮಾಡಿರುವ ಭುವನೇಶ್ವರ್‌ ಕುಮಾರ್‌ ನ್ಯೂಜಿಲೆಂಡ್‌ ಪ್ರವಾಸದ ಕೇಂದ್ರಬಿಂದು. ಟೀಂ ಇಂಡಿಯಾ ನ್ಯೂಜಿಲೆಂಡ್‌ ವಿರುದ್ಧ ಐದು ಟಿ20 ಪಂದ್ಯಗಳನ್ನ ಆಡಲಿದೆ. ನಾಳೆಯಿಂದ ಪಂದ್ಯ ಆರಂಭವಾಗಲಿದ್ದು, ಬಿಸಿಸಿಐ ಭುವನೇಶ್ವರ್‌ ಕುಮಾರ್‌ ಬಗ್ಗೆ ಬಿಗ್‌ ಅಪ್‌ಡೇಟ್ಸ್‌ ನೀಡಿದೆ.

ಟೀಂ ಇಂಡಿಯಾ ನ್ಯೂಜಿಲೆಂಡ್‌ ಪ್ರವಾಸದಲ್ಲಿ ಜಸ್‌ಪ್ರಿತ್‌ ಬುಮ್ರಾರನ್ನು ಬಿಟ್ಟು ಆಡಲಿದೆ. ಇದರಿಂದ ತಂಡಕ್ಕೆ ಕೊಂಚ ಹಿನ್ನಡೆ ಆಗಬಹುದು ಎಂದು ಹೇಳಲಾಗುತ್ತಿದ್ದರೂ ಭುವನೇಶ್ವರ್‌ ಕುಮಾರ್‌ ಅವರ ಎಂಟ್ರಿಯಿಂದಾಗಿ ನಿರೀಕ್ಷೆಗಳು ಹೆಚ್ಚಾಗಿವೆ. ಫ್ಯಾನ್ಸ್‌ ಭುವಿ ಅವರ 2.O ಆಟವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಇದರ ಮಧ್ಯೆ ಬಿಸಿಸಿಐ ಅಭಿಮಾನಿಗಳ ಎಕ್ಸೈಟ್‌ಮೆಂಟ್‌ ಅನ್ನು ಹೆಚ್ಚಿಸಿದೆ. ಭುವಿ ಅವರು ಮೈದಾನದಲ್ಲಿ ಬೆವರು ಇಳಿಸುತ್ತಿರುವ ವಿಡಿಯೋವನ್ನು ಬಿಸಿಸಿಐ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ.

4 ವರ್ಷಗಳ ಬಳಿಕ ಕಂಬ್ಯಾಕ್

ನಾಲ್ಕು ವರ್ಷಗಳ ಬಳಿಕ ತಂಡಕ್ಕೆ ಮರಳಿರುವ ಭುವಿಗೆ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿಕೊಳ್ಳಲು ಒಳ್ಳೆಯ ಅವಕಾಶ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅವರು, ಅದಕ್ಕೆ ತಕ್ಕಂತೆ ಪ್ರಯತ್ನ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ ಬಿಸಿಸಿಐ ಹಂಚಿಕೊಂಡ ವಿಡಿಯೋದಲ್ಲಿ ಟೀಂ ಇಂಡಿಯಾ ಜರ್ಸಿ ತೊಟ್ಟು ಪ್ರ್ಯಾಕ್ಟಿಸ್‌ ಮಾಡುತ್ತಿದ್ದಾರೆ. ಇತ್ತೀಚೆಗೆ ಟೀಂ ಇಂಡಿಯಾ ವೆಸ್ಟ್‌ ವಿಂಡೀಸ್‌ ವಿರುದ್ಧ ಟಿ20 ಸಿರೀಸ್‌ ಆಡಿತ್ತು. ಈ ವೇಳೆ ಅರ್ಷದೀಪ್‌ ಸಿಂಗ್‌ ಗಾಯ ಹಿನ್ನೆಲೆಯಲ್ಲಿ ಐದನೇ ಪಂದ್ಯಕ್ಕೆ ಭುವಿಯನ್ನು ಸೇರಿಕೊಳ್ಳಲಾಯಿತು. ಆದರೆ ಮಳೆಯ ಕಾರಣ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯ ಯಾವುದೇ ಫಲಿತಾಂಶ ಕಾಣದ ರದ್ದಾಯಿತು. ಈ ವೇಳೆ ಭುವಿಗೆ ಬೌಲಿಂಗ್‌ ಮಾಡಲು ಅವಕಾಶ ಸಿಕ್ಕಿರಲಿಲ್ಲ. ಟೀಂ ಇಂಡಿಯಾ ಜರ್ಸಿಯಲ್ಲಿ ಮತ್ತೊಮ್ಮೆ ಭುವಿ ನೋಡಿದ ಫ್ಯಾನ್ಸ್‌ ಫುಲ್‌ ಖುಷಿಯಾಗಿದ್ದಾರೆ..

ನ್ಯೂಜಿಲೆಂಡ್‌ ವಿರುದ್ಧ ಟೀಂ ಇಂಡಿಯಾ ನಾಳೆಯಿಂದ ಟಿ20 ಪಂದ್ಯವನ್ನು ಆಡಲಿದೆ. ನಾಳೆ ಕ್ರೈಸ್ಟ್ ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆಯಲಿದೆ. ನ್ಯೂಜಿಲೆಂಡ್‌ನ ಈ ಪಿಚ್‌ ಭುವಿಗೆ ಹೆಚ್ಚು ಪ್ರಯೋಜನಕಾರಿ ಆಗಲಿದೆ ಎಂದು ನಂಬಲಾಗಿದೆ. ಪಿಚ್‌ ಸ್ವಿಂಗ್‌ ಮಾಡೋರಿಗೆ ತುಂಬಾ ಆಗಲಿದೆ ಅನ್ನOದನ್ನು ನ್ಯೂಜಿಲೆಂಡ್‌ನ ಕ್ಯಾಪ್ಟನ್‌ ಒಪ್ಪಿಕೊಂಡಿದ್ದಾರೆ. ಭುವಿ ಅವರು ಕಳೆದ ಎರಡು ಐಪಿಎಲ್‌ನಲ್ಲಿ ಅದ್ಭುತ ಬೌಲಿಂಗ್‌ ದಾಳಿ ನಡೆಸಿ ತಂಡಕ್ಕೆ ಕಂಬ್ಯಾಕ್‌ ಮಾಡಿದ್ದಾರೆ. ಭುವಿ ತಂಡಕ್ಕೆ ಮರಳಿರೋದು ಆನೆ ಬಲ ಬಂದಂತಾಗಿದೆ. ಯುವ ಬೌಲರ್‌ಗಳಿಗೆ ತಂಡದಲ್ಲಿ ಹೊಸ ಸ್ಪೂರ್ತಿ ಸಿಗಲಿದೆ. ನಾಳೆ ಅವರು ಹೇಗೆ ಸಾಮರ್ಥ್ಯವನ್ನು ಸಾಬೀತು ಮಾಡಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸದ್ಯಕ್ಕೆ ಟೀಂ ಇಂಡಿಯಾ ಬಾಗಿಲು ಬಂದ್? ನೇರವಾಗಿ ಪ್ಲೇಯಿಂಗ್ 11ಗೆ ಬರೋಕಾಗಲ್ಲ: ವೈಭವ್ ಬಗ್ಗೆ ಶ್ರೇಯಸ್ ಅಯ್ಯರ್ ಹೇಳಿದ್ದೇನು?
IPL 2027: ಹಾರ್ದಿಕ್ ಪಾಂಡ್ಯ ಟ್ರೇಡ್‌ ಮಾಡಿಕೊಳ್ಳಲು ರೆಡಿಯಾದ 3 ತಂಡಗಳು..! ಯಾರ ಜತೆ ಮುಂಬೈ ಇಂಡಿಯನ್ಸ್‌ ಡೀಲ್?