ಏಕದಿನ ವಿಶ್ವಕಪ್ ಮಹಾಸಮರ ಗೆಲ್ಲಲು ಇಂಗ್ಲೆಂಡ್​ ಮಾಸ್ಟರ್ ಪ್ಲಾನ್..!

By Naveen Kodase  |  First Published Aug 17, 2023, 6:00 PM IST

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಕೊನೆಗೂ  ಅಂದುಕೊಂಡಿದ್ದನ್ನ ಸಾಧಿಸಿದೆ. ಆಲ್​ರೌಂಡರ್​ ಬೆನ್ ಸ್ಟೋಕ್ಸ್​ನ ಮತ್ತೆ ಏಕದಿನ ತಂಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ವರ್ಕ್​ಲೋಡ್ ಮತ್ತು ಟೆಸ್ಟ್​ ಕ್ರಿಕೆಟ್​ಗೆ ಹೆಚ್ಚು ಹೊತ್ತು ನೀಡುವ ಕಾರಣದಿಂದಾಗಿ, ಕಳೆದ ವರ್ಷ ಬೆನ್​ ಸ್ಟೋಕ್ಸ್​ ಒನ್​ಡೇ ಕ್ರಿಕೆಟ್​ನಿಂದ ರಿಟೈರ್ ಆಗಿದ್ರು. ಆದ್ರೀಗ, ಬೆನ್​ಸ್ಟೋಕ್ಸ್ ತಮ್ಮ ನಿರ್ಧಾರವನ್ನ ಬದಲಿಸಿದ್ದಾರೆ.


ಲಂಡನ್(ಆ.17) ಏಕದಿನ ವಿಶ್ವಕಪ್ ಟೂರ್ನಿಗೆ 50 ದಿನ ಮಾತ್ರ ಬಾಕಿ ಉಳಿದಿದೆ. ಭಾರತದಲ್ಲಿ ನಡೆಯೋ ಮಹಾಸಮರಕ್ಕಾಗಿ ಎಲ್ಲಾ ತಂಡಗಳು ಭರ್ಜರಿಯಾಗಿ ರೆಡಿಯಾಗ್ತಿವೆ. ಅದರಲ್ಲೂ ಹಾಲಿ ಚಾಂಪಿಯನ್ ಇಂಗ್ಲೆಂಡ್​, ವಿಶ್ವಕಪ್​ ತನ್ನಲ್ಲೇ ಉಳಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದೆ. ತಂಡಕ್ಕೆ ಗುಡ್​ಬೈ ಹೇಳಿದ್ದ ಆಟಗಾರನನ್ನ ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. ಆ ಮೂಲಕ ಎದುರಾಳಿ ತಂಡಗಳಿಗೆ ಸ್ಟ್ರಾಂಗ್ ವಾರ್ನಿಂಗ್ ನೀಡಿದೆ. 

ಏಕದಿನ ತಂಡಕ್ಕೆ ಮ್ಯಾಚ್​ ವಿನ್ನರ್ ಬೆನ್​ಸ್ಟೋಕ್ಸ್​ ಕಮ್​ಬ್ಯಾಕ್..! 

Tap to resize

Latest Videos

ಯೆಸ್, ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಕೊನೆಗೂ  ಅಂದುಕೊಂಡಿದ್ದನ್ನ ಸಾಧಿಸಿದೆ. ಆಲ್​ರೌಂಡರ್​ ಬೆನ್ ಸ್ಟೋಕ್ಸ್​ನ ಮತ್ತೆ ಏಕದಿನ ತಂಡಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ. ವರ್ಕ್​ಲೋಡ್ ಮತ್ತು ಟೆಸ್ಟ್​ ಕ್ರಿಕೆಟ್​ಗೆ ಹೆಚ್ಚು ಹೊತ್ತು ನೀಡುವ ಕಾರಣದಿಂದಾಗಿ, ಕಳೆದ ವರ್ಷ ಬೆನ್​ ಸ್ಟೋಕ್ಸ್​ ಒನ್​ಡೇ ಕ್ರಿಕೆಟ್​ನಿಂದ ರಿಟೈರ್ ಆಗಿದ್ರು. ಆದ್ರೀಗ, ಬೆನ್​ಸ್ಟೋಕ್ಸ್ ತಮ್ಮ ನಿರ್ಧಾರವನ್ನ ಬದಲಿಸಿದ್ದಾರೆ. ಮತ್ತೆ 50 ಓವರ್​ ಫಾರ್ಮೆಟ್​ ಆಡಲು ರೆಡಿಯಾಗಿದ್ದಾರೆ. ಇಂಗ್ಲೆಂಡ್​​ ಕ್ರಿಕೆಟ್ ಬೋರ್ಡ್​​ನ ಪ್ರಯತ್ನಕ್ಕೆ ಫಲ ಸಿಕ್ಕಿದೆ. 

ಭಾರತ-ಪಾಕಿಸ್ತಾನ ಏಷ್ಯಾಕಪ್ ಟಿಕೆಟ್ ಖರೀದಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಇಂಗ್ಲೆಂಡ್​, ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಕಿವೀಸ್​ ನೆಲದಲ್ಲಿ 4 ಪಂದ್ಯಗಳ ಏಕದಿನ ಮತ್ತು ಟಿ20 ಸರಣಿ ಆಡಲಿದೆ. ಇದಕ್ಕಾಗಿ ಏಕದಿನ ತಂಡದಲ್ಲಿ ಸ್ಟೋಕ್ಸ್​​ಗೆ ಸ್ಥಾನ ಕಲ್ಪಿಸಿದೆ. ಇದರೊಂದಿಗೆ ಸ್ಟೋಕ್ಸ್​ ಏಕದಿನ ವಿಶ್ವಕಪ್ ಮೆಗಾಟೂರ್ನಿಯಲ್ಲಿ ಆಡೋದು ಕನ್ಫರ್ಮ್ ಆಗಿದೆ. 

ಸ್ಟೋಕ್ಸ್ ರೀಎಂಟ್ರಿಯಿಂದ ಎದುರಾಳಿ ಪಡೆಗಳಿಗೆ ನಡುಕ ಶುರು..! 

ಯೆಸ್,  ಬೆನ್​ಸ್ಟೋಕ್ಸ್ ರೀಎಂಟ್ರಿಯಿಂದ ಇಂಗ್ಲೆಂಡ್​ ತಂಡದ ಬಲ ಹೆಚ್ಚಿದೆ. ಎದುರಾಳಿ ತಂಡಗಳಿಗೆ ನಡುಕ ಶುರುವಾಗಿದೆ.  ಯಾಕಂದ್ರೆ, ಸಾಮಾನ್ಯ ಪ್ಲೇಯರ್ ಅಲ್ಲ. ಇಂಗ್ಲೆಂಡ್ ತಂಡದ ರಿಯಲ್ ಮ್ಯಾಚ್ ವಿನ್ನರ್. 2019ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸ್ಟೋಕ್ಸ್​, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ್ರು. ಆ ಮೂಲಕ ಇಂಗ್ಲೆಂಡ್​ಗೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟಿದ್ರು. 

World Cup 2023: ವಿಶ್ವಕಪ್‌ ಟೂರ್ನಿಗೆ ಇಂಗ್ಲೆಂಡ್ ಸಂಭಾವ್ಯ ತಂಡ ಪ್ರಕಟ; 2 ಸ್ಟಾರ್ ಆಟಗಾರರಿಗಿಲ್ಲ ಸ್ಥಾನ..!

ಟೂರ್ನಿಯಲ್ಲಿ 11 ಪಂದ್ಯಗಳನ್ನಾಡಿದ್ದ ಈ ಎಡಗೈ ಬ್ಯಾಟ್ಸ್​​ಮನ್, 66.43ರ ಸರಾಸರಿಯಲ್ಲಿ 465 ರನ್ ಸಿಡಿಸಿದ್ರು. ಅಲ್ಲದೇ ನ್ಯೂಜಿಲೆಂಡ್ ವಿರುದ್ಧದ ಫೈನಲ್​ ಫೈಟ್​ನಲ್ಲಿ ಅಜೇಯ 84 ರನ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ರು. ಇನ್ನು ಬೌಲಿಂಗ್​ನಲ್ಲಿ 7 ವಿಕೆಟ್ ಬೇಟೆಯಾಡಿದ್ರು. ಈ ಅಂಕಿಅಂಶಗಳೇ ಸ್ಟೋಕ್ಸ್ ಎಂತಾ ಗ್ರೇಟ್ ಪ್ಲೇಯರ್ ಅನ್ನೋದನ್ನ ಹೇಳುತ್ವೆ. 

ಭಾರತದಲ್ಲಿ ಸ್ಟೋಕ್ಸ್ ಅದ್ಭುತ ದಾಖಲೆ..! 

ಯೆಸ್, ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾಗೆ  ಸ್ಟೋಕ್ಸ್​ರಿಂದ ಸಂಕಷ್ಟ ತಪ್ಪಿದ್ದಲ್ಲ. ಯಾಕಂದ್ರೆ, ಸ್ಟೋಕ್ಸ್ ಭಾರತದಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಭಾರತದಲ್ಲಿ 6 ಏಕದಿನ ಪಂದ್ಯಗಳನ್ನಾಡಿರೋ ಸ್ಟೋಕ್ಸ್, 51.00ಸರಾಸರಿಯಲ್ಲಿ 255 ರನ್ ಸಿಡಿಸಿದ್ದಾರೆ. ಇದ್ರಲ್ಲಿ 3 ಅರ್ಧಶತಕ ಸೇರಿವೆ. ಹೀಗಾಗಿ ಟೀಮ್ ಇಂಡಿಯಾ ಸ್ಟೋಕ್ಸ್ ಆಟಕ್ಕೆ ಬ್ರೇಕ್ ಹಾಕಲು ಪರ್​ಫಕ್ಟ್​ ಗೇಮ್​ಪ್ಲಾನ್ ರೂಪಿಸಬೇಕಿದೆ. 

ಅದೇನೆ ಇರಲಿ, ಸ್ಟೋಕ್ಸ್​ ಏಕದಿನ ಕ್ರಿಕೆಟ್​ಗೆ ಕಮ್​ಬ್ಯಾಕ್ ಮಾಡಿರೋದು ನಿಜಕ್ಕೂ ಇಂಗ್ಲೆಂಡ್​​ಗೆ ವರವಾಗುತ್ತಾ..? ಇಂಗ್ಲೆಂಡ್​ ಕ್ರಿಕೆಟ್ ಬೋರ್ಡ್​​ನ ಪ್ಲಾನ್ ವರ್ಕೌಟ್ ಆಗುತ್ತಾ..?  ಅನ್ನೋದನ್ನ ಕಾದು ನೋಡ್ಬೇಕಿದೆ.

click me!