ದುಬೈನಲ್ಲಿ IPL ಟೂರ್ನಿ ಆಯೋಜನೆ ಬಹುತೇಕ ಖಚಿತ: ಬ್ರಿಜೇಶ್ ಪಟೇಲ್!

By Suvarna NewsFirst Published Jul 21, 2020, 7:51 PM IST
Highlights

ಕೊರೋನಾ ವೈರಸ್ ಕಾರಣ ತಾತ್ಕಾಲಿಕ ರದ್ದಾಗಿದ್ದ ಐಪಿಎಲ್ ಟೂರ್ನಿ ಆಯೋಜನೆಯನ್ನು ಬಿಸಿಸಿಐ ಖಚಿತ ಪಡಿಸಿದೆ. ಇಷ್ಟೇ ಅಲ್ಲ ಸಂಪೂರ್ಣ 60 ಪಂದ್ಯಗಳನ್ನು ಆಯೋಜಿಸಲಾಗುವುದು ಎಂದು ಐಪಿಎಲ್ ಚೇರ್ಮೆನ್ ಬ್ರಿಜೇಷ್ ಪಟೇಲ್ ಹೇಳಿದ್ದಾರೆ. ಇಷ್ಟೇ ಅಲ್ಲ ದುಬೈನಲ್ಲಿ ಆಯೋಜನೆ ಕುರಿತು ಸುಳಿವು ನೀಡಿದ್ದಾರೆ.

ಮುಂಬೈ(ಜು.21): ಟಿ20 ವಿಶ್ವಕಪ್ ಟೂರ್ನಿಯನ್ನು ಐಸಿಸಿ ಮುಂದೂಡಿದ ಬೆನ್ನಲ್ಲೇ  ಐಪಿಎಲ್ ಟೂರ್ನಿ ಆಯೋಜನೆ ಹಾದಿ ಸುಗಮವಾಗಿದೆ. ಇಷ್ಟೇ ಅಲ್ಲ ಬಿಸಿಸಿಐನಲ್ಲಿ ಐಪಿಎಲ್ ಟೂರ್ನಿ ಆಯೋಜನೆ ಕಾರ್ಯ ಚುರುಕುಗೊಂಡಿದೆ. ಇದರ ಬೆನ್ನಲ್ಲೇ ಐಪಿಎಲ್ ಚೇರ್ಮೆನ್ ಬ್ರಿಜೇಷ್ ಪಟೇಲ್ ಟೂರ್ನಿ ಆಯೋಜನೆ ಸ್ಪಷ್ಟಪಡಿಸಿದ್ದಾರೆ. ಇಷ್ಟೇ ಅಲ್ಲ 60 ಪಂದ್ಯಗಳನ್ನು ಆಯೋಜಿಸಲಾಗುವುದು ಎಂದಿದ್ದಾರೆ.

T20 ವಿಶ್ವಕಪ್ ಟೂರ್ನಿ ಮುಂದೂಡಿದ ಐಸಿಸಿ, IPL 2020 ಖಚಿತ!

ಸದ್ಯದ ಮಟ್ಟಿಗೆ ದುಬೈನಲ್ಲಿ ಐಪಿಎಲ್ ಆಯೋಜಿಸುವ ಕುರಿತು ಬಿಸಿಸಿಐ ಚಿಂತಿಸುತ್ತಿದೆ. ಪ್ರೇಕ್ಷಕರ ಪ್ರವೇಶ ನಿರಾಕರಿಸಿ ಟೂರ್ನಿ ನಡೆಸುವ ಕುರಿತು ಚರ್ಚೆ ನಡೆಸಿದ್ದೇವೆ. 8 ಫ್ರಾಂಚೈಸಿಗಳು ಈಗಲೇ ಸಿದ್ಧತೆ ಆರಂಭಿಸಿದೆ. ವಿದೇಶಿ ಆಟಗಾರರು ನೇರವಾಗಿ ದುಬೈಗೆ ಆಗಮಿಸಲಿದ್ದಾರೆ. ಭಾರತೀಯ ಆಟಗಾರರಿಗೆ 2 ರಿಂದ 3 ವಾರ ಅಭ್ಯಾಸ ನಡೆಸಲು ಅವಕಾಶ ಸಿಗಲಿದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

ಸೆ.26 ರಿಂದ ನ.8ರ ವರೆಗೆ IPL ಟೂರ್ನಿ; BCCI ವೇಳಾಪಟ್ಟಿಗೆ ಸ್ಟಾರ್ ಸ್ಪೋರ್ಟ್ಸ್ ಅಸಮಾಧಾನ

ಕ್ರಿಕೆಟಿಗರಿಗೆ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡಲು ಅವಕಾಶ ನೀಡಲಾಗುವುದು. ಆದರೆ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಪಾಲಿಸಲಾಗುತ್ತದೆ. ಐಪಿಎಲ್ ಟೂರ್ನಿಗೆ ಆಯ್ಕೆಯಾದ ಚೇತೇಶ್ವರ್ ಪೂಜಾರ ಹಾಗೂ ಹುನುಮಾ ವಿಹಾರಿ ಸೇರಿದಂತೆ ಟೆಸ್ಟ್ ತಂಡದ ಕ್ರಿಕೆಟಿಗರು ಮೊಟೇರ ಕ್ರೀಡಾಂಗದಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಅಭ್ಯಾಸ ನಡೆಸಲಿದ್ದಾರೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.  
 

click me!