ಈತ ತಂಡದಲ್ಲಿದ್ರೇ ಟೀಂ ಇಂಡಿಯಾ, 2027ರ ಏಕದಿನ ವಿಶ್ವಕಪ್ ಗೆಲ್ಲಲ್ಲ..! ಆಯ್ಕೆ ಸಮಿತಿ-ಬಿಸಿಸಿಐ ನಡುವೆಯೇ ತಿಕ್ಕಾಟ?

Naveen Kodase   | Kannada Prabha
Published : Aug 06, 2026, 11:30 AM IST
Ajit Agarkar Chief Selector

ಸಾರಾಂಶ

ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಣೆ ವಿಚಾರದಲ್ಲಿ ಬಿಸಿಸಿಐ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ನಡುವೆ ಮನಸ್ತಾಪ ಮೂಡಿದೆ ಎಂದು ವರದಿಯಾಗಿದೆ. ಆಯ್ಕೆ ಸಮಿತಿಯು ರೋಹಿತ್‌ರನ್ನು ತಂಡದಿಂದ ಹೊರಗಿಡಲು ಯೋಜಿಸಿದ್ದರೆ, ಬಿಸಿಸಿಐ ಇದನ್ನು ನಿರಾಕರಿಸಿದೆ, ಈ ನಡುವೆ ರೋಹಿತ್ ಶತಕ ಸಿಡಿಸಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ.

ನವದೆಹಲಿ: ರೋಹಿತ್‌ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ ನಿವೃತ್ತಿ ಘೋಷಣೆ ವಿಚಾರದಲ್ಲಿ ಬಿಸಿಸಿಐ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ನಡುವೆ ಮನಸ್ತಾಪ ಮೂಡಿದೆ ಎಂದು ವರದಿಯಾಗಿದೆ.

ರೋಹಿತ್ ಭಾರತ ತಂಡದಲ್ಲಿದ್ರೆ ವಿಶ್ವಕಪ್ ಗೆಲ್ಲೋದು ಕಷ್ಟ?

ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯು ರೋಹಿತ್‌ರ ಕೊನೆ ಅಂತಾರಾಷ್ಟ್ರೀಯ ಪ್ರವಾಸವಾಗಿರಲಿದೆ ಎಂದು ವರದಿಯಾಗಿತ್ತು. ಅಜಿತ್‌ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಮುಂದಿನ ಸರಣಿಗಳಿಂದ ರೋಹಿತ್‌ರನ್ನು ಹೊರಗಿಡುವ ಬಗ್ಗೆ ಕೋಚ್‌ ಗೌತಮ್ ಗಂಭೀರ್ ಹಾಗೂ ತಂಡದ ಆಡಳಿತದ ಜೊತೆ ಮಾತನಾಡಿತ್ತು. ರೋಹಿತ್‌ ಇದ್ದರೆ 2027ರ ವಿಶ್ವಕಪ್‌ನಲ್ಲಿ ಭಾರತ ಗೆಲ್ಲುವುದು ಕಷ್ಟ ಎಂದು ಬಿಸಿಸಿಐಗೂ ಮನವರಿಕೆ ಮಾಡಲಾಗಿತ್ತು ಎಂದು ವರದಿಯಾಗಿದೆ.

ಹೀಗಾಗಿ ಲಾರ್ಡ್ಸ್ ಏಕದಿನ ಪಂದ್ಯದ ಬಳಿಕ ರೋಹಿತ್ ಶರ್ಮಾ ಬದಲಿಗೆ ಯಶಸ್ವಿ ಜೈಸ್ವಾಲ್ ಅವರನ್ನು ಗಿಲ್ ಜತೆ ಆರಂಭಿಕರನ್ನಾಗಿ ಕಣಕ್ಕಿಳಿಸುವ ಚಿಂತನೆ ಬಿಸಿಸಿಐ ಆಯ್ಕೆ ಸಮಿತಿ ಮಾಡಿತ್ತು ಎನ್ನಲಾಗಿದೆ. ಆದರೆ ಲಾರ್ಡ್ಸ್‌ ನಲ್ಲಿ ನಡೆದ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಬಾರಿಸಿದ ದೊಡ್ಡ ಶತಕ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗಾಗಿ ಮಾಡಿತು ಎನ್ನಲಾಗಿದೆ.

ಆದರೆ ಲಾರ್ಡ್ಸ್‌ ಪಂದ್ಯದ ದಿನವೇ ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ನೀಡಿದ ಹೇಳಿಕೆ ಅಚ್ಚರಿಗೆ ಕಾರಣವಾಗಿತ್ತು. ‘ರೋಹಿತ್ ತಂಡದ ಖಾಯಂ ಸದಸ್ಯರಾಗಿದ್ದಾರೆ ಮತ್ತು ಅವರು ತಂಡದ ಯೋಜನೆಗಳಲ್ಲಿ ಇರುವವರೆಗೂ ದೇಶವನ್ನು ಪ್ರತಿನಿಧಿಸಲಿದ್ದಾರೆ. ಲಾರ್ಡ್ಸ್‌ ಪಂದ್ಯ ಅವರ ಕೊನೆ ಪಂದ್ಯವಾಗುವುದಿಲ್ಲ’ ಎಂದಿದ್ದರು. ಇದೇ ವಿಚಾರದಲ್ಲಿ ಆಯ್ಕೆ ಸಮಿತಿ-ಬಿಸಿಸಿಐ ಮಧ್ಯೆ ಬಿರುಕು ಮೂಡಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಲಾರ್ಡ್ಸ್‌ ಪಂದ್ಯದಲ್ಲಿ ರೋಹಿತ್‌ ಭರ್ಜರಿ ಶತಕ ಸಿಡಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಲ್ಲದೇ, ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ಭಾರತ ಕ್ರಿಕೆಟ್‌ನ ಆಯ್ಕೆ ಸಮಿತಿ ನೂತನ ಮುಖ್ಯಸ್ಥರಾಗಿ ಲಕ್ಷ್ಮಣ್‌?

ನವದೆಹಲಿ: ಭಾರತ ರಾಷ್ಟ್ರೀಯ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿಯ ನೂತನ ಮುಖ್ಯಸ್ಥರಾಗಿ ದಿಗ್ಗಜ ಆಟಗಾರ ವಿವಿಎಸ್‌ ಲಕ್ಷ್ಮಣ್‌ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ.

ಕಳೆದ 3 ವರ್ಷಗಳಿಂದ ಅಜಿತ್‌ ಅಗರ್ಕರ್‌ ಮುಖ್ಯಸ್ಥರಾಗಿದ್ದಾರೆ. ಅವರ ಒಪ್ಪಂದ ಜೂನ್‌ನಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಆದರೆ ಅವರಿಗೆ ಬಿಸಿಸಿಐ 3 ತಿಂಗಳ ವಿಸ್ತರಣೆಯನ್ನು ನೀಡಿತ್ತು. 2027ರ ಏಕದಿನ ವಿಶ್ವಕಪ್‌ವರೆಗೆ ಅವರಿಗೆ ಮತ್ತೊಂದು ಅವಧಿಯ ವಿಸ್ತರಣೆ ಸಿಗಬಹುದು ಮತ್ತು ಅವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಇತ್ತೀಚಿನ ಕೆಲವು ಬೆಳವಣಿಗೆಗಳು ಆ ಸಾಧ್ಯತೆಯನ್ನು ಕುಗ್ಗಿಸಿದ್ದು, ಅವರ ಅಧಿಕಾರಾವಧಿಯು ಒಂದು ತಿಂಗಳಲ್ಲಿ ಕೊನೆಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಅವರ ಸ್ಥಾನಕ್ಕೆ, ಪ್ರಸ್ತುತ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನ ಮುಖ್ಯಸ್ಥರಾಗಿರುವ ಲಕ್ಷ್ಮಣ್ ಅವರನ್ನು ನಿಯೋಜಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಸೆಪ್ಟೆಂಬರ್‌ನಲ್ಲಿ ತೀರ್ಮಾನ ಹೊರಬೀಳುವ ನಿರೀಕ್ಷೆಯಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐತಿಹಾಸಿಕ 600ನೇ ಟೆಸ್ಟ್‌ಗೆ ಟೀಂ ಇಂಡಿಯಾ ಸಜ್ಜು; ಲಂಕಾದಲ್ಲಿ ಅಭ್ಯಾಸ ಆರಂಭ
ಚೊಚ್ಚಲ ಪಂದ್ಯದಲ್ಲೇ ಬೊಂಬಾಟ್‌ ಫಿಫ್ಟಿ, ನಂತ್ರ ಟೀಂ ಇಂಡಿಯಾದಲ್ಲಿ ಎಂದೂ ಕಾಣಿಸಿಕೊಳ್ಳದ ನತದೃಷ್ಟ ಕ್ರಿಕೆಟಿಗ!