ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್ ಪಂದ್ಯ ಅನುಮಾನ; ಅಭ್ಯಾಸ ರದ್ದು!

By Suvarna NewsFirst Published Sep 9, 2021, 5:49 PM IST
Highlights
  • ಟೀಂ ಇಂಡಿಯಾ ಕೋಚ್ ಬೆನ್ನಲ್ಲೇ ಮತ್ತೊಬ್ಬ ಸಿಬ್ಬಂದಿಗೆ ಕೊರೋನಾ ಪಾಸಿಟೀವ್
  • ಮ್ಯಾಂಚೆಸ್ಟರ್ ತಲುಪಿದ ಬೆನ್ನಲ್ಲೇ ಕೋವಿಡ್ ವರದಿ ಬಹಿರಂಗ
  • ಮ್ಯಾಂಚೆಸ್ಟರ್ ಅಭ್ಯಾಸ ರದ್ದು, ಅಂತಿಮ ಟೆಸ್ಟ್ ಪಂದ್ಯ ಅನುಮಾನ

ಮ್ಯಾಂಚೆಸ್ಟರ್(ಸೆ.09):  ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಆರಂಭದಲ್ಲೇ ಹಲವು ವಿಘ್ನಗಳು ಎದುರಾಗಿತ್ತು. ಆದರೆ ಅಡೆ ತಡೆ ನಿವಾಸಿಕೊಂಡು ಮುಂದೆ ಸಾಗಿದ ಉಭಯ ತಂಡಗಳಿಗೆ ಇದೀಗ ಅಂತಿಮ ಪಂದ್ಯಕ್ಕೂ ಮುನ್ನ ಆತಂಕ ಹೆಚ್ಚಾಗಿದೆ. ಟೀಂ ಇಂಡಿಯಾ ಮತ್ತೊರ್ವ ಸಹಾಯಕ ಸಿಬ್ಬಂದಿಗೆ ಕೊರೋನಾ ದೃಢಪಟ್ಟಿದೆ.

ಟಿ20 ವಿಶ್ವಕಪ್‌ಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ; ಎಂ.ಎಸ್. ಧೋನಿ ಮೆಂಟರ್!

ಟೀಂ ಇಂಡಿಯಾ ಕೋಚ್‌ಗಳಾದ ರವಿ ಶಾಸ್ತ್ರಿ, ಭರತ್ ಅರುಣ್ ಹಾಗೂ ಆರ್ ಶ್ರೀಧರ್‌ಗೆ ಈಗಾಗಲೇ ಕೊರೋನಾ ದೃಢಪಟ್ಟಿದೆ. ಹೀಗಾಗಿ ಓವಲ್ ಟೆಸ್ಟ್ ಪಂದ್ಯದ ವೇಳೆ ಮೂವರು ತರಬೇತುದಾರರು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇದೀಗ ಮ್ಯಾಂಚೆಸ್ಟರ್ ತಲುಪಿದ ಟೀಂ ಇಂಡಿಯಾದ ಸಹಾಯಕ ಸಿಬ್ಬಂದಿಗೆ ಕೊರೋನಾ ದೃಢಪಟ್ಟಿದೆ. 

ಟೀಂ ಇಂಡಿಯಾದ ಎಲ್ಲಾ ಆಟಗಾರರು ಸಹಾಯಕ ಸಿಬ್ಬಂದಿಯ ನೇರ ಸಂಪರ್ಕಕ್ಕೆ ಬಂದಿರುವ ಕಾರಣ ಆತಂಕ ಹೆಚ್ಚಾಗಿದೆ. ಹೀಗಾಗಿ ಅಭ್ಯಾಸ ರದ್ದು ಮಾಡಲಾಗಿದೆ. ಅದೃಷ್ಠವಶಾತ್ ಯಾವುದೇ ಆಟಗಾರರಲ್ಲಿ ಕೊರೋನಾ ಕಾಣಿಸಿಕೊಂಡಿಲ್ಲ. ಸಿಬ್ಬಂದಿಗೆ ಕೊರೋನಾ ಕಾಣಿಸಿಕೊಂಡ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರು ಮತ್ತೆ ಕೊರೋನಾ ಪರೀಕ್ಷೆ ನೀಡಬೇಕಿದೆ.

ಇಂಗ್ಲೆಂಡ್ ತವರಿನ ಸರಣಿ ವೇಳಾಪಟ್ಟಿ: ಮತ್ತೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ

ಆಟಗಾರರಲ್ಲಿ ಕೊರೋನಾ ಕಾಣಿಸಿಕೊಂಡರೆ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಆಯೋಜನೆ ಅನುಮಾನವಾಗಲಿದೆ. ಹೀಗಾದರೆ ಇಂಗ್ಲೆಂಡ್‌ಗೆ ಅಪಾರ ನಷ್ಟವಾಗಲಿದೆ. ಕಾರಣ ಟೀಂ ಇಂಡಿಯಾ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದೆ. ಅಂತಿಮ ಪಂದ್ಯ ರದ್ದಾದರೆ ಸರಣಿ ಭಾರತದ ಪಾಲಾಗಲಿದೆ. ಹೀಗಾಗಿ ಇಂಗ್ಲೆಂಡ್ ಕೊನೆಯ ಪಂದ್ಯ ಆಯೋಜಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ.

ನಾಳೆಯಿಂದ(ಸೆ.10) 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದೆ. ಇತ್ತ ಐಪಿಎಲ್ ತಯಾರಿಯಲ್ಲಿರುವ ಬಿಸಿಸಿಐಗೂ ಅಂತಿಮ ಪಂದ್ಯ ಆಯೋಜನೆ ಮೇಲೆ ಹೆಚ್ಚಿನ ಒಲವಿಲ್ಲ. ಇದರ ನಡುವೆ ಕೊರೋನಾ ಕೂಡ ಸೇರಿಕೊಂಡಿದೆ.  ಇದೀಗ ಆಟಗಾರರ ಕೊರೋನಾ ವರದಿಗೆ ಇಂಗ್ಲೆಂಡ್ ಕಾಯುತ್ತಿದೆ.

click me!